ಜೇವರ್ಗಿ: ಸರಕಾರಕ್ಕೆ 100ಕೋಟಿ ವಂಚನೆ ಆರೋಪ: ಕಾಂಗ್ರೆಸ್ ಮುಖಂಡರ ಮೇಲೆ 420 ಕೇಸ್

0
3080
  • ಡಾ.ಅಶೋಕ ದೊಡ್ಮನಿ ಹಂಗರಗಾ(ಕೆ)

ಕಲಬುರಗಿ: ಖೊಟ್ಟಿ ದಾಖಲೆ ಸ್ರಷ್ಠಿಸಿ ಸರಕಾರಕ್ಕೆ 100 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಯಡ್ರಾಮಿ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೊಡಿ ಅವರು ಕಾಂಗ್ರೆಸ್ ಮುಖಂಡ ಚಂದ್ರಶೇಖರ ಭದ್ರಯ್ಯ ಪುರಾಣಿಕ ಸೇರಿದಂತೆ 15 ಜನರ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ.

ಜೇವರ್ಗಿ ತಾಲೂಕಿನ ಯಡ್ರಾಮಿ ಪಟ್ಟಣದ ಸರಕಾರಿ ಜಮೀನು ಸರ್ವೇ ನಂ. 442, 432, 237 ರಲ್ಲಿ ತಮ್ಮ ಪ್ರಭಾವವನ್ನು ಬಳಸಿ ಯಡ್ರಾಮಿ ಪಂಚಾಯತಿಯಲ್ಲಿಯೇ ಖೊಟ್ಟಿ ದಾಖಲೆ ಸ್ರಷ್ಠಿಸಿ ಅಕ್ರಮ ಮಾಲಿಕರಾಗಿದ್ದಲ್ಲದೆ ಜಾಗವನ್ನು ಮಾರಾಟ ಮಾಡಿ ಸರಕಾರಕ್ಕೆ ಆರ್ಥಿಕ ವಂಚನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

Contact Your\'s Advertisement; 9902492681

ಅಕ್ರಮ ಮಾಲಿಕತ್ವ ಪಡೆದು ಮಾರಾಟ ಮಾಡಿದ 1) ಚಂದ್ರಶೇಖರ ಭದ್ರಯ್ಯ ಪುರಾಣಿಕ 2) ಗಿರಿಜಾಬಾಯಿ ಚಂದ್ರಶೇಖರ ಪುರಾಣಿಕ 3) ಮಂಗಲಿಬಾಯಿ ಸುಬ್ಬು ಪವಾರ 4) ಲಾಳೇಸಾಬ ಸೈಫನಸಾಬ 5) ಬಸಮ್ಮ ನಿಂಗಪ್ಪ ಕುಂಬಾರ 6) ಸೂರ್ಯಕಾಂತ ಬಸವಂತ್ರಾಯ ದ್ಶಾಮಗೊಂಡ 7) ಮಹಾನಂದ ಪ್ರಭುಲಿಂಗ ಹಿರೇಮಠ 8) ಈರಣ್ಣ ಮಲ್ಲಣ್ಣ ಅವರಾದಿ ವಡಗೇರ 9) ಮಡಿವಾಳಪ್ಪ ಮಲ್ಲಪ್ಪ ಅವರಾದಿ ವಡಗೇರ 10) ಮಲ್ಲಿಕಾರ್ಜುನ ಹಾಗೂ

ಪಂಚಾಯತ ಅಭಿವ್ರದ್ದಿ ಅಧಿಕಾರಿಗಳಾದ 11) ಬಾಬುಗೌಡ ಪಾಟೀಲ ಕುರಳಗೇರ 12) ಸುಜಾತಾ ಅವರಾದಕರ್ˌ 13) ಶ್ರೀಕಾಂತ ಶರಣಪ್ಪ ಕರಕಿಹಳ್ಳಿ 14) ನಾಗೇಂದ್ರಪ್ಪ ಕೂಡಿ 15) ಸಿದ್ದಣ್ಣ ಎನ್ನುವವರ ವಿರುದ್ದ ಐಪಿಸಿ ಸೆಕ್ಷನ್ 420, 406, 409, 468, 465, 471, 149 ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಆದರೆ ಇದು ಸಾರ್ವಜನಿಕ ವಲಯದಲ್ಲಿ ತ್ರೀವ್ರ ಟೀಕೆಗೆ ಒಳಗಾಗಿದೆ. ಯಡ್ರಾಮಿ ಪಟ್ಟಣದಲ್ಲಿರೋದು ಸರಕಾರಿ ಭೂಮಿಯೇ ಹೆಚ್ಚಿಗಿದ್ದುˌ ಬಡವರು ವಾಸಿಸಲು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. 843 ಜನರು ಈ ಜಮೀನುಗಳಲ್ಲಿ ಮನೆ ಕಟ್ಟಿ ವಾಸಿಸುತ್ತಿದ್ದಾರೆ. ತಹಸೀಲ್ದಾರರು ಈ ಮನೆಗಳಿಂದ ಹೊರಹಾಕಿದರೆ ಉಳಿದುಕೊಳ್ಳುವುದು ಎಲ್ಲಿ ಎಂಬುದು ಬಡವರ ಪ್ರಶ್ನೆ. ಇನ್ನೊಂದು ವಲಯದ ಪ್ರಕಾರ ತಹಸೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ಮತ್ತು ಕೆಲ ಕಾಂಗ್ರೆಸ್ ಮುಖಂಡರ ಜಾಗದ ವಿಷಯವಾಗಿ ಸಂಘರ್ಷ ಏರ್ಪಟ್ಟಿದ್ದೆ ಈ ರೀತಿ ಎಫ್.ಐ.ಆರ್ ದಾಖಲಿಸಲು ಕಾರಣವಾಗಿದೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.

ಎಫ್.ಐ.ಆರ್. ದಲ್ಲಿ ಹೆಸರಿರುವವರೆಲ್ಲರೂ ಬಹುತೇಕ ಶಾಸಕರ ಅತ್ಶಪ್ತರೇ ಆಗಿರುವುದರಿಂದ ಶಾಸಕರಿಗೂ ಇದು ಬಿಸಿ ತುಪ್ಪವಾಗಿದೆ. ಅಲ್ಲದೆ ಇಂತಹ ತಹಸೀಲ್ದಾರರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಮತ್ತೊಂದು ಗುಂಪು ಶಾಸಕ ಡಾ.ಅಜಯಸಿಂಗ್ ಅವರ ಮೇಲೆ ಒತ್ತಡವೂ ಹಾಕುತ್ತಿದೆ.

ಇದೆಲ್ಲದರ ಮಧ್ಶ ಶಾಸಕರೇ ಈ ನಾಯಕರ ವಿರುದ್ಧ ಬ್ಶಾಟ್ ಬೀಸಿದರಾ ಅನ್ನುವ ಅನುಮಾನವೂ ಕೆಲವರು ವ್ಶಕ್ತಪಡಿಸುತ್ತಿದ್ದಾರೆ. ಎಫ್.ಐ.ಆರ್ ದಾಖಲಿಸಿದ ನಂತರ ತಹಸೀಲ್ದಾರರು ಕಛೇರಿಗೆ ಆಗಮಿಸದೆ ಇರುವುದು ಇನ್ನೂ ಕುತೂಹಲ ಮೂಡಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here