ಸದೃಢ ಸಮಾಜಕ್ಕಾಗಿ ಸದೃಢ ಆರೋಗ್ಯಕಾಗಿ ಉಚಿತ ಸೇವೆ ಸೌಲಭ್ಯ ಪಡೆಯಲು ಡಾ. ಕ್ಯಾತನಾಳ ಕರೆ

0
58

ಜೇವರ್ಗಿ; ಪಟ್ಟಣದಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ತಾಲೂಕಾ ಆರೋಗ್ಯ ಇಲಾಖೆ ಹಾಗೂಆರ್ ಬಿ ಎಸ್ ಕೆ . ಯೋಜನೆಯ ಸಂಯುಕ್ತಾಶ್ರಯದಲ್ಲಿ ಹುಟ್ಟಿನಿಂದ 18 ವರ್ಷದ ಎಲ್ಲಾ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಜೇವರ್ಗಿ ತಾಲೂಕ ಆರೋಗ್ಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಜಿಲ್ಲಾ ಅರ್ ಸಿ ಹೆಚ್ ಅಧಿಕಾರಿಗಳಾದಡಾ.ಶರಣಬಸಪ್ಪ ಕ್ಯಾತನಾಳ ರವರು ಕಾರ್ಯಕ್ರಮವನ್ನು ವಿಶೇಷವಾಗಿ ಮಗುವಿನ ಕೈಯಿಂದ ಸಸಿಗೆ ನೀರು ಏರಿಯುವ ಮೂಲಕ ಕಾರ್ಯಕ್ರಮಚಾಲನೆ ನೀಡಿ ಮಾತನಾಡುತ್ತಾ , ಪ್ರತಿ ತಾಯಿಂದಿಯರು ತಮ್ಮ ಮಗುವಿನ ಅರೋಗ್ಯದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿ ಹೆಚ್ಚು ಇರಬೇಕು , ಅರೋಗ್ಯ ಇಲಾಖೆಯಲ್ಲಿ ಸಿಗುವಂತ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಅರೋಗ್ಯವಂತ ಜೀವನದ ಜೊತೆಗೆ , ವಹಿಸುವುದರ ಜೊತೆಗೆ ಸದೃಢ ಸಮಾಜಕ್ಕಾಗಿ ಸದೃಢ ಆರೋಗ್ಯಕಾಗಿ ಪಣತೊಡಬೇಕು ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನುತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಸಿದ್ದು ಪಾಟೀಲ್ ರವರುವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ, ಮುಖ್ಯ ಅತಿಥಿಗಳಾಗಿ ಜೇವರ್ಗಿಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳದ ಟಿu ತಿಚಿs qqq ಶ್ರೀಕಾಂತ , ಮಕ್ಕಳ ತಜ್ಞರು ಡಾ. ರಾಘವೇಂದ್ರ . ಆರ್ ಕೆ ಎಸ್ ಕೆ, ಜಿಲ್ಲಾ ಸಂಯೋಜಕರುಶಿವಕುಮಾರ ಕಾಂಬಳೆ,ಡಿ ಇ ಐ ಸಿ . ವ್ಯವಸ್ಥಾಪಕರುಕೃಷ್ಣಾ ವಗ್ಗೆ ,ಅರ್ ಬಿ ಎಸ್ ಕೆ. ಡಾ. ತ್ರಿವೇಣಿ, ಡಾ. ಬಸ್ಗೇರ್, ಡಾ. ಅಭಿಷೇಕ್ , ಡಾ. ನಿಲೋಫರ್ .ಹಾಗೂ ಅಂಗನವಾಡಿ ಮೇಲ್ವಿಚಾರಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರುಹಾಗೆ ರಾಷ್ಟ್ರೀಯ ಬಾಲಾ ಸ್ವಾಸ್ಥ್ಯ ಕಾರ್ಯಕ್ರಮದ ತಂಡದವರು .ಅರ್ ಕೆ ಎಸ್ ಕೆ ಆಪ್ತ ಸಮಾಲೋಚಕ ರೇವಪ್ಪ ಕಾಂಬಳೆ, ಕಾರ್ಯಕ್ರಮನಿರೂಪಣೆ ಮಾಡಿದರು ಮತ್ತು ಇತರೆ ಸಿಬ್ಬಂದಿ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು .

ಈ ಒಂದು ಉಚಿತ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಾಲನುಭವಿ ಮಕ್ಕಳ ಸಂಖ್ಯೆ. ಒಟ್ಟು ಮಕ್ಕಳ ಸಂಖ್ಯೆ.205, ತೀವ್ರ ಅಪೌಷ್ಠಿಕ ಮಕ್ಕಳು. 32, ಅಪೌಷ್ಠಿಕತೆ ಮಕ್ಕಳು. 156. ಶ್ರಾವಣ ದೋಷ ಮಕ್ಕಳು. 12 ಶಸ್ತ್ರ ಚಿಕಿತ್ಸೆ.5. ಈ ಒಂದು ಕಾರ್ಯಕ್ರಮದಲ್ಲಿ ಇಂತಹ ಮಕ್ಕಳಿಗೆ ಉಚಿತವಾಗಿ ತಪಾಸಣೆ ಮಾಡಲಾಯಿತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಡಿ ಇ ಐ ಸಿ. ವಿಭಾಗ ಜಿಮ್ಸ್ ಕಲಬುರಗಿ ಕಳಿಸಿ ಕೊಡಲಾಯಿತು.

ಈ ಒಂದು ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆರು. ಮಕ್ಕಳ ಎಲ್ಲ ಪಾಲಕರು ಭಾಗವಹಿಸಿಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡು ಯಶಸ್ವಿಗೊಳಿಸಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here