ಕಲಬುರಗಿ,: ಸಂತ ಸೇವಾಲಾಲ ಮಹಾರಾಜರ 285 ನೇ ಜಯಂತೋತ್ಸವ ಜಿಲ್ಲಾ ಆಡಳಿತ ವತಿಯಿಂದ ಎಸ ಎಮ್ ಪಂಡಿತ ರಂಗ ಮಂದಿರದಲ್ಲಿ ನಡೆಯಿತು.
ಜಿಲ್ಲಾ ಆಡಳಿತ ಸಂತ ಸೇವಾಲಾಲ ಮಹಾರಾಜರ ಭಾವಚಿತ್ರ ಮದ್ಯಾಹ್ನ 2 ಗಂಟೆಗೆ ವಿನಾಕಾರಣ ತೆರವು ಮಾಡಲಾಗಿದೆ ಇದನ್ನೂ ನಾವು ಉಗ್ರವಾಗಿ ಖಂಡಿಸುತ್ತೇವೆ. ಅಂಗವಾಗಿ ನಾವು ಹೋರಾಟ ಮಾಡಿದಾಗ ತಹಶೀಲ್ದಾರ ನಿಸಾರ್ ಅಹಮದ್ ಬಂದು ವಿಷಾದ ವಕ್ತ ಪಡಿಸಿದರು. ಆಮೇಲೆ ಮತ್ತೊಮ್ಮೆ ಮಹಾರಾಜರ ಭಾವಚಿತ್ರ ಇಟ್ಟು ಪೂಜೆಗೆ ಅವಕಾಶ ನೀಡಿದರು.
ಈ ಸಂದರ್ಭದಲ್ಲಿ ಮಾನ್ಯ ಪೊಲೀಸ್ ಆಯುಕ್ತ ಚೇತನ್ ಕುಮಾರ್ IPS ಮುಖ್ಯ ಅತಿಥಿಯಾಗಿ ಕಾರ್ಯಕ್ರಮ ಆರಂಭ ಮಾಡಿದರು . ಈ ಸಂಧರ್ಭ ದಲ್ಲಿ ನಿಸಾರ್ ಅಹಮದ್ ತಹಶೀಲ್ದಾರರು ಉಪಸ್ಥಿತಿ ಇದ್ದರೂ.
ಸಮಾಜದ ಯುವ ಮುಖಂಡರು ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರು ಶ್ರೀ ಕೃಷ್ಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರಾದ ಮಹೇಶ ನಾಯಕ, ರಾಜು ಎಂ ಚವಾಣ್, ಶ್ರೀಧರ ಚವಾಣ್, ಅಮರ್ ರಾಥೋಡ್, ರಾಕೇಶ್ ಚವಾಣ್ ಇತರರು ಇದ್ದರು