ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ನಗರದ ಹರವಲಯದಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನದ ಬಳಿ ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದ ಉದ್ಯಾನವನ ಹಾಗೂ ಗುಡ್ಡ ಬೆಂಕಿ ಬಿದ್ದು ಬಾರಿ ಅನಾಹುತ ಸಂಭವಿಸುವ ವೇಳೆಗೆ ಅಗ್ನಿಶಾಮಕ ದಳ ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾರೆ.
ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ, ಭಾರಿ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸಿದ್ದು ತಿಂಥಣಿಯಿಂದ ಸುರಪುರ ಕಡೆಗೆ ಹೋಗುತ್ತಿದ್ದ ತಹಸೀಲ್ದಾರ್ ಕೆ ವಿಜಯಕುಮಾರ್ ಬೆಂಕಿ ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಿದ್ದಾರೆ.
ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಬೆಂಕಿ ನಂದಿಸಿದ್ದು ಇನ್ನೂ ಸ್ವಲ್ಪ ಸಮಯ ಗಮನಿಸಿದೆ ಹೋಗಿದ್ದರೆ ಇಡೀ ಉದ್ಯಾನವನಕ್ಕೆ ಬೆಂಕಿ ವ್ಯಾಪಿಸುವ ಸಾಧ್ಯತೆ ಇತ್ತು ಎಂದು ತಹಸಿಲ್ದಾರಕ್ಕೆ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.
ಕಿಡಿಗೇಡಿಗಳು ಈ ರೀತಿ ಬೆಂಕಿ ಹಾಕಿರುವ ಘಟನೆಯಿಂದ ಉದ್ಯಾನವನದ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.