ಯುವಕರಿಗೆ ವ್ಯವಹಾರ ಮತ್ತು ಸ್ವಯಂ ಉದ್ಯೋಗ ಅವಕಾಶ

0
83

ಕಲಬುರಗಿ: ಬಿ.ಎಸ್.ಎನ್.ಎಲ್. ಕಲಬುರಗಿಯು ಅಸ್ತಿತ್ವದಲ್ಲಿರುವ ಎಲ್ಲಾ ಲ್ಯಾಂಡ್ ಲೈನ್‍ಗಳು ಮತ್ತು ಬ್ರಾಡ್ ಬ್ಯಾಂಡ್ ಸೇವೆಗಳನ್ನು ಅಪ್ಟಿಕಲ್ ಫೈಬರ್ ಕೇಬಲನಲ್ಲಿ ಕಾರ್ಯನಿರ್ವಹಿಸುವ ಎಫ್.ಟಿ.ಟಿ.ಎಚ್. ಸೇವೆಗಳೊಂದಿಗೆ ಅಪ್‍ಗ್ರೇಡ್ ಮಾಡುವ ಗುರಿಯನ್ನು ಹೊಂದಿದೆ.

ಈ ಉದ್ದೇಶಕ್ಕಾಗಿ, ಗುತ್ತಿಗೆದಾರರು, ಸ್ಥಳೀಯ ಕೇಬಲ್ ಅಪರೇಟರಗಳು, ನೊಂದಾಯಿತ ಸಂಸ್ಥೆಗಳು, ಬಿ.ಎಸ್.ಎನ್.ಎಲ್. ಎಫ್.ಟಿ.ಟಿ.ಎಚ್. ಫ್ರ್ಯಾಂಚೈಸಿಯಾಗಿ ಕೆಲಸ ಮಾಡಲು ಇಚ್ಚಿಸುವ ವ್ಯಕ್ತಿಗಳಿಂದ ಎಫ್.ಟಿ.ಟಿ.ಎಚ್. (ಫೈಬರ್ ಟು ದಿ ಹೋಮ್) ಸೇವೆಗಳನ್ನು ಒದಗಿಸಲು ಮತ್ತು ನಿರ್ವಹಿಸಲು, ಆದಾಯ ಹಂಚಿಕೆ ಆಧಾರದ ಮೇಲೆ ಕಲಬುರಗಿ ನಗರ, ಬೀದರ ನಗರ್, ಯಾದಗಿರಿ ನಗರ, ಕಲಬುರಗಿ ಜಿಲ್ಲೆ, ಬೀದರ ಜಿಲ್ಲೆ ಮತ್ತು ಯಾದಗಿರಿ ಜಿಲ್ಲೆಯ ಎಲ್ಲಾ ಪ್ರಮುಖ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಅರ್ಜಿಗಳನ್ನು ಕೋರಲಾಗಿದೆ.

Contact Your\'s Advertisement; 9902492681

ಇದು ಒಂದು ವಿಶೇಷವಾಗಿ ಯುವಕರಿಗೆ ಉತ್ತಮ ವ್ಯಾಪಾರ ಮತ್ತು ಸ್ವಯಂ ಉದ್ಯೋಗ ಅವಕಾಶ.ಬಿ.ಎಸ್.ಎನ್.ಎಲ್. ಎಫ್.ಟಿ.ಟಿ.ಎಚ್. ಸೇವೆಗಳು ಭಾರತದಾದ್ಯಂತ ಯಾವುದೇ ನೆಟವರ್ಕಗೆ ಅನಿಯಮಿತ ಧ್ವನಿ ಕರೆಗಳೊಂದಿಗೆ ಕೈಗೆಟುಕುವ ದರದಲ್ಲಿಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ನೀಡುತ್ತವೆ. ಅಸ್ತಿತ್ವದಲ್ಲಿರುವ ಲ್ಯಾಂಡಲೈನಗಳನ್ನು ಮತ್ತು ಬ್ರಾಡಬ್ಯಾಂಡ ದೂರವಾಣಿ ಸಂಖ್ಯೆಗಳನ್ನು ಎಫ್.ಟಿ.ಟಿ.ಎಚ್. ಸೇವೆಗಳಿಗೆ ಪರಿವರ್ತಿಸುವಾಗ ಅದೇ ದೂರವಾಣಿ ಸಂಖ್ಯೆಯನ್ನ ಉಳಿಸಿಕೊಳ್ಳಬಹುದು.

ಕಲಬುರಗಿ, ಬೀದರ, ಯಾದಗಿರಿ ನಗರ ಮತ್ತು ಜಿಲ್ಲೆಗಳ ಎಲ್ಲಾ ಪ್ರಮುಕ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಬಿ.ಎಸ್.ಎನ್.ಎಲ್. ಸಿಮ್ ಕಾರ್ಡಗಳ ಮಾರಟ ಮತ್ತು ರೀಚಾರ್ಜಗಾಗಿ ಆರ್.ಡಿ. (ಗ್ರಾಮೀಣ ವಿತರಕರು) ಮತ್ತು ಡಿ.ಎಸ್.ಎ. (ನೇರ ಮಾರಾಟ ಏಜೆಂಟ್) ಆಗಿ ಕೆಲಸ ಮಾಡಲು ಆಸಕ್ತ ಸಂಸ್ಥೆಗಳು/ವ್ಯಕ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂಸ್ಥೆಗಳು/ವ್ಯಕ್ತಿಗಳು ಬಿ.ಎಸ್.ಎನ್.ಎಲ್. ಎಫ್.ಟಿ.ಟಿ.ಎಚ್. ಫ್ರಾಂಚೈಸಿ, ಬಿ.ಎಸ್.ಎನ್.ಎಲ್. ಗ್ರಾಮೀಣ ವಿತರಕರು (ಆರ್.ಡಿ.) ಮತ್ತು ನೇರ ಮಾರಾಟದ ಏಜೆಂಟ್ (ದಿ.ಎಸ್.ಎ) ಆಗಿ ನೊಂದಾಯಿಸಿಕೊಳ್ಳುವ ಈ ಕೊಡುಗೆಯನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ.

ಯಾವುದೇ ವಿಚಾರಣೆ ಅಥವಾ ಹೆಚ್ಚಿನ ಮಾಹಿತಿಗಾಗಿ, ಆಸಕ್ತ ಸಂಸ್ಥೆಗಳು/ ವ್ಯಕ್ತಿಗಳು ಎ.ಜಿ.ಎಮ್. (ಎಸ್.& ಎಮ್), ಬಿ.ಎಸ್.ಎನ್.ಎಲ್. ಕಲಬುರಗಿ ಅವರನ್ನು ಈ ಕೆಳಗಿನ ದೂರವಾಣಿ ಸಂಖ್ಯೆ: 9481451122, 08472-266788 ರ ಮೂಲಕ ಸಂಪರ್ಕಿಸಲು ಕೋರಲಾಗಿದೆ.

ಅಲ್ಲದೇ, ಬಿ.ಎಸ್.ಎನ್.ಎಲ್. ಅಸ್ತಿತ್ವದಲ್ಲಿರುವ ಎಲ್ಲಾ 2ಜಿ ಮತ್ತು 3ಜಿ ಸಿಮಕಾರ್ಡಗಳನ್ನು ಹೊಸ 4ಜಿ/ 5ಜಿ ಸಿಮ್ ಕಾರ್ಡಗೆ ಬದಲಾಯಿಸಿ ಉಚಿತ 4ಜಿಬಿ ಡೇಟಾದೊಂದಿಗೆ ಹೊಸ ಕಾರ್ಡ ಪಡೆಯಬಹುದು.

ಇದು ಸೀಮಿತ ಅವಧಿಯ ಕೊಡುಗೆಯಾಗಿದೆ. ಬಿ.ಎಸ್.ಎನ್.ಎಲ್. ಮೊಬೈಲ್ ಗ್ರಾಹಕರು ಹತ್ತಿರದ ಬಿ.ಎಸ್.ಎನ್.ಎಲ್. ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೊಡುಗೆಯನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here