54 ನೇ ಕಲಬುರಗಿ ಕಲಾ ಮಹೋತ್ಸವ

0
10

ಕಲಬುರಗಿ: ದಿ ಐಡಿಯಲ್ ಫೈನ್ ಆರ್ಟ್ ಇನ್‍ಸ್ಟಿಟ್ಯೂಟ್ ಮತ್ತು ಎಂಎಂಕೆ ಕಾಲೇಜ್ ಆಫ್ ವಿಷುವಲ್ ಆರ್ಟ್ ವತಿಯಿಂದ 54 ನೇ ಕಲಬುರಗಿ ಕಲಾ ಮಹೋತ್ಸವ ನಗರದ ಕಲಾ ಕಾಲೇಜಿನಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಿತು.

ಫೈನ್ ಆರ್ಟ್ ಸಂಸ್ಥೆಯ ಕಾರ್ಯದರ್ಶಿ ಹಾಗು ಅಂತರಾಷ್ಟ್ರೀಯ ಕಲಾವಿದರಾದ ಡಾ.ವಿ ಜಿ ಅಂದಾನಿ ಅಧ್ಯಕ್ಷತೆ ವಹಿಸಿದ್ದರು.

Contact Your\'s Advertisement; 9902492681

ಕೇಂದ್ರೀಯ ವಿವಿ ಕುಲಪತಿಗಳಾದ ಬಟ್ಟು ಸತ್ಯನಾರಾಯಣ್ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು..ನಂತರ ಮಾತನಾಡಿದ ಅವರು ವಿಷುವಲ್ ಆರ್ಟ್ ವಿದ್ಯಾರ್ಥಿಗಳಿಗೆ ಡೆಡಿಕೇಷನ್ ಬಹಳ ಮುಖ್ಯ..ಡೆಡಿಕೇಷನ್ ಇದ್ರೆ ಜೀವನದಲ್ಲಿ ಸಾಧನೆ ಮಾಡಬಹುದು..ನಿಮ್ಮ ಶ್ರಮ ನಿಮಗೆ ಉತ್ತಮ ಭವಿಷ್ಯ ರೂಪಿಸುತ್ತೆ ಅಂತ ಹೇಳಿದ್ರು..

ಇದೇವೇಳೆ ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು..ಈ ಕಲಾ ಪ್ರದರ್ಶನವನ್ನ ಹಿರಿಯ ಕಲಾವಿದ ಬಸವರಾಜ ಜಾನೆ ಉದ್ಘಾಟಿಸಿದ್ರು ..ನಂತ್ರ ಅತ್ಯುತ್ತಮ ಕಲಾಕೃತಿಗಳನ್ನ ಆಯ್ಕೆ ಮಾಡಿ 15 ವಿದ್ಯಾರ್ಥಿಗಳಿಗೆ ಮೂರು ಸಾವಿರ ನಗದು ಹಾಗು ಸರ್ಟಿಫಿಕೇಟ್ ನೀಡಲಾಯಿತು.

ಕಲಾಮಹೋತ್ಸವದ ಅಂಗವಾಗಿ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ನಾರಾಯಣ ಬೋಸಾವಳೆ ಪತ್ರಕರ್ತ ಗೋಪಾಲ ಕುಲಕರ್ಣಿ ಶಾಂತಮಲ್ಲ ಶಿವಬೋ ಹಾಗು ಶರಣು ಪಟ್ಟಣಶೆಟ್ಟಿ ಹೀಗೆ ನಾಲ್ವರನ್ನ ಸನ್ಮಾನಿಸಲಾಯಿತು..

ಕಾರ್ಯಕ್ರಮದಲ್ಲಿ ಸ್ನೇಹಾ ಪಾಟೀಲ್ ಪ್ರಾರ್ಥನಾ ಗೀತೆ ಹಾಡಿದ್ರೆ ಶೇಷರಾವ್ ಬಿರಾದಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದ್ರೆ ಚಂದ್ರಹಾಸ ಜಾಲಿಹಾಳ ವಾರ್ಷಿಕ ವರದಿ ಮಂಡಿಸಿದ್ರು. ಹಣಮಂತ ಮಂತಶೆಟ್ಟಿ ನಿರೂಪಣೆ ಮಾಡಿದ್ರೆ ಪ್ರಾಚಾರ್ಯರಾದ ಲೋಕಯ್ಯ ವಂದನಾರ್ಪಣೆ ಮಾಡಿದ್ರು..

ರಾಘವೇಂದ್ರ ಬುರ್ಲಿ ಅಯಾಜುದ್ದೀನ್ ರಹಮಾನ್ ಪಟೇಲ್ ಮಂಜುಳಾ ಜಾನೆ ಸೇರಿದಂತೆ ನೂರಾರು ಕಲಾಸಕ್ತರು ಆಗಮಿಸಿ ಕಲಾಮಹೋತ್ಸವಕ್ಕೆ ಕಳೆ ತಂದಿದ್ದು ವಿಶೇಷವಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here