-
ವಿಧಾನ ಸಭೆಯಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂಪಪ್ರಭು ಪಾಟೀಲ್ ಪ್ರಶ್ನೆ
ಕಲಬುರಗಿ; ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚಿಟ್ಟಿಗಳನ್ನು ಹೊಂದಿದ್ದ ಕಲಬುರಗಿ ಜಿಲ್ಲೆಯ 24, 904 ಜನರನ್ನು ಪತ್ತೆಹಚ್ಚಿ ಅವರ ಬಿಪಿಎಲ್ ಪಡಿತರ ರದ್ದು ಪಡಿಸಿದ್ದಲ್ಲದೆ, 5,09, 254 ರುಪಾಯಿ ದಂಡ ವಿಧಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಮುನಿಯಪ್ಪ ವಿಧಾನಸಭೆಯಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕರಾದ ಅಲ್ಲಂಪ್ರಭು ಪಾಟೀಲರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಪಡಿತರ ಹೊಂದಲು ಕಠಿಣ ಮಾನದಂಡಗಳನ್ನು ಮಾಡಲಾಗಿದೆ, ಇಂತಹ ಮಾನದಂಡಗಳಿಗೂ ವ್ಯತಿರಿಕ್ತವಾಗಿ ಮಾಹಿತಿ ಕೊಟ್ಟು ಆದ್ಯತೆ ಮೇರೆಗೆ ಪಡಿತರ ಪಡೆದಂತಹ ಸಾವಿರಾರು ಜನರನ್ನು ಗುರುತಿಸಲಾಗಿದೆ. ಅವರೆಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದು ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಒಟ್ಟು 93 ನ್ಯಾಯ ಬೆಲೆ ಅಂಗಡಿಗಳಿವೆ, ನಿಯಮಗಳತೆ ನಗರ ಪ್ರದೇಶದಲ್ಲಿ 800 ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ಪಡಿತರ ಚಟ್ಟಿಗಳದ್ದಲ್ಲಿ ಪ್ರತ್ಯೇಕ ನ್ಯಾಯ ಬೆಲೆ ಅಂಗಡಿ ಒದಗಿಸಬೇಕು ಎಂಬ ನಿಯಮವಿದೆ. ಅದರಂತೆಯೇ ಕಲಬುರಗಿ ದಕ್ಷಿಣದಲ್ಲೀಗ 93 ನ್ಯಾಯಬೆಲೆ ಅಂಗಡಿಗಳು ಕೆಲಸ ಮಾಡುತ್ತಿವೆ ಎಂದು ಸಚಿವರು ಹೇಳಿದ್ದಾರೆ.