ಚಿತ್ತಾಪುರ; ಪಟ್ಟಣದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಚಿತ್ತಾಪುರ ತಾಲೂಕಾ ಆರೋಗ್ಯ ಕೇಂದ್ರ ಹಾಗೂ ಆರ್ ಬಿ ಎಸ್ ಕೆ . ಯೋಜನೆಯ ಸಂಯುಕ್ತಾಶ್ರಯದಲ್ಲಿ ಹುಟ್ಟಿನಿಂದ 18 ವರ್ಷದ ಎಲ್ಲಾ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಚಿತ್ತಾಪುರ ತಾಲೂಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಕಲಬುರಗಿ ಜಿಲ್ಲಾ ಅರ್ ಸಿ ಹೆಚ್ ಅಧಿಕಾರಿಗಳಾದ ಡಾ.ಶರಣಬಸಪ್ಪ ಕ್ಯಾತನಾಳ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಪ್ರತಿ ತಾಯಿಂದಿಯರು ತಮ್ಮ ಮಗುವಿನ ಅರೋಗ್ಯದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿ ಹೆಚ್ಚು ಇರಬೇಕು, ಅರೋಗ್ಯ ಇಲಾಖೆಯಲ್ಲಿ ಸಿಗುವಂತ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಅರೋಗ್ಯವಂತ ಜೀವನದ ಜೊತೆಗೆ , ವಹಿಸುವುದರ ಜೊತೆಗೆ ಸದೃಢ ಸಮಾಜಕ್ಕಾಗಿ ಸದೃಢ ಆರೋಗ್ಯಕಾಗಿ ಪಣತೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಸಂತೋಷ ಅಲಗೂಡ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ, ಆರ್ ಕೆ ಎಸ್ ಕೆ, ಜಿಲ್ಲಾ ಸಂಯೋಜಕರು ಶಿವಕುಮಾರ ಕಾಂಬಳೆ , ಡಿ ಇ ಐ ಸಿ . ವ್ಯವಸ್ಥಾಪಕರು ಕೃಷ್ಣಾ ವಗ್ಗೆ , ಸಿಡಿಪಿಓ ಚಿತ್ತಾಪುರ ಅರತಿ ತುಪ್ಪದ್, ಶಾಹಾಬಾದ ಸಿಡಿಪಿಓ ವಿಜಯಲಕ್ಷ್ಮಿ ಹೇರೂರ. ಮಕ್ಕಳ ತಜ್ಞರು ಡಾ.ಮುಬಸೀರ್. ಅರ್ ಬಿ ಎಸ್ ಕೆ. ಡಾ. ಮತೀನ್ ಅಲಿ , ಡಾ.ರವಿ , ಡಾ. ಲಕ್ಷ್ಮಿ , ಡಾ. ಕಾವೇರಿ, ಡಾ.ಶ್ವೇತಾ. ಮತ್ತು ಅರ್ ಕೆ ಎಸ್ ಕೆ ಸಮಾಲೋಚಕಿ ಕಾಳಮ್ಮ. ಹಾಗೂ
ಅಂಗನವಾಡಿ ಕಾರ್ಯಕರ್ತೆಯರು ಹಾಗೆ ರಾಷ್ಟ್ರೀಯ ಬಾಲಾ ಸ್ವಾಸ್ಥ್ಯ ಕಾರ್ಯಕ್ರಮದ ತಂಡದವರು. ಅರ್ ಕೆ ಎಸ್ ಕೆ ಆಪ್ತ ಸಮಾಲೋಚಕ , ಕಾರ್ಯಕ್ರಮ ನಿರೂಪಣೆ ಮಾಡಿದರು ಮತ್ತು ಇತರೆ ಸಿಬ್ಬಂದಿ ವರ್ಗದವರು ಈ ಒಂದು ಕಾರ್ಯಕ್ರಮದ ಯೋಜನೆಯ ಸದುಪಯೋಗ ಪಡೆದುಕೊಂಡರು .
ಈ ಒಂದು ಉಚಿತ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಾಲನುಭವಿ ಮಕ್ಕಳು ಸಂಖ್ಯೆ. ತೀವ್ರ ಅಪೌಷ್ಠಿಕ ಮಕ್ಕಳು. 02. ಅಪೌಷ್ಠಿಕತೆ ಮಕ್ಕಳು. 34, ನರ ರೋಗಕ್ಕೆ , 02. ಹೃದಯದ ಶಸ್ತ್ರಚಿಕಿತ್ಸೆ 90 ರಲ್ಲಿ 41 ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದವರು. ಹೆಚ್ಚಿನ ಒಂದು ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರು ವೈದ್ಯ ಆಸ್ಪತ್ರೆಗೆ ಕಳಿಸಿಜೊಡಲಾಯಿತು. ಹೆಚ್ಚಿನ ಒಂದು ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರು ವೈದ್ಯ ಆಸ್ಪತ್ರೆಗೆ ಕಳಿಸಿಜೊಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಇಂತಹ ಮಕ್ಕಳಿಗೆ ಉಚಿತವಾಗಿ ತಪಾಸಣೆ ಮಾಡಲಾಯಿತು.
ಹೆಚ್ಚಿನ ಚಿಕಿತ್ಸೆಗಾಗಿ ಡಿ ಇ ಐ ಸಿ. ವಿಭಾಗ ಜಿಮ್ಸ್ ಕಲಬುರಗಿ ಕಳಿಸಿ ಕೊಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆರು. ಮಕ್ಕಳ ಎಲ್ಲ ಪಾಲಕರು ಭಾಗವಹಿಸಿ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡು ಯಶಸ್ವಿಗೊಳಿಸಿದ್ದರು.