ಕಾಳಗಿ; ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾಳಗಿ ತಾಲೂಕು ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಹಾಗೂ ವಿಶ್ವಾಸ್ ಆಂದೋಲನ ತರಬೇತಿ ಕಾರ್ಯಕ್ರಮ ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಹಿಪ್ಪರಗ ಗ್ರಾಮದಲ್ಲಿ ಗ್ರಾಮ ಪಂಚಾಯತ ಶೇಳ್ಳಗಿ ಉಪಾಧ್ಯಕ್ಷರಾದ ಅಂಬಮ್ಮಪೂಜಾರಿ ಹಾಗೂ ಸದಸ್ಯರಾದ ರಾಜಣ್ಣ ಸಾಹುಕಾರ,ಮಾಜಿ ಸದಸ್ಯರಾದ ರಾಜಶೇಖರ್ ಪಾಟೀಲ್ ಗ್ರಾಮದ ಪ್ರಮುಖರು ಮಲ್ಲಪ್ಪ ಸಾಹುಕಾರ, ಅನಸ್ ಪಟೇಲ ಮಶಾಕ್ ಸಾಬ್, ಇನಾಮ್ದಾರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತರಬೇತಿಗೆ ಸಸಿಗೆ ನೀರು ಏರಿಯುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ದೇಶ ಕುರಿತು ಜಿಲ್ಲಾ ಸಂಯೋಜಕರಾದ ರವಿ ಠಾಕೂರ್ ಅವರು ಮಾತನಾಡಿದರು. ತದನಂತರ ತರಬೇತಿಯನ್ನು ಸಮುದಾಯ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸೂರ್ಯಕಾಂತ್ , ಅವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ: ಇತೇಶಮ್ ಉಲ್ ಹಕ್ ಜಿರ್ದಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಕಲ್ಲ ಹಿಪ್ಪರದ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಸುರಕ್ಷಣಾಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತರು, ಭಾಗವಹಿಸಿದ್ದರು.