ತಾರತಮ್ಯ ಮತ್ತು ಅನ್ಯಾಯವನ್ನು ತೊಡೆದುಹಾಕಲು ಸಾಮಾಜಿಕ ನ್ಯಾಯ ಅವಶ್ಯಕ

0
35

ಕಲಬುರಗಿ: ತಾರತಮ್ಯ ಮತ್ತು ಅನ್ಯಾಯವನ್ನು ತೊಡೆದುಹಾಕಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ಇದರರ್ಥ ವರ್ಣಭೇದ ನೀತಿ, ಬಡತನ ಮತ್ತು ಅಸಮಾನತೆಯ ವಿರುದ್ಧ ನಿಲ್ಲುವುದು. ಇದರರ್ಥ ಕಡಿಮೆ ಅದೃಷ್ಟವಂತರಿಗೆ ಸಹಾಯ ಮಾಡುವುದು ಮತ್ತು ನಮ್ಮ ಕಾನೂನುಗಳು ಎಲ್ಲರಿಗೂ ನ್ಯಾಯಯುತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ ಎಂದು ಡಾ. ಮಹೇಶ್ವರಿ ಹಿರೇಮಠ ಅವರು ಹೇಳಿದರು.

ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಉದ್ಘಾಟಿಸಿ ಮಾತನಾಡಿದ್ದರು.

Contact Your\'s Advertisement; 9902492681

ಮುಂದುವರೆದು ಎಲ್ಲರಿಗೂ ಸಾಮಾಜಿಕ ನ್ಯಾಯ ಎನ್ನುವುದು ಕೇವಲ ಗುರಿಯಲ್ಲ; ಇದು ಒಂದು ಜವಾಬ್ದಾರಿ. ಇದು ಯಾರೂ ಹಿಂದೆ ಉಳಿಯದ ಜಗತ್ತನ್ನು ನಿರ್ಮಿಸುವ ಬಗ್ಗೆ. ಆದ್ದರಿಂದ, ನಾವು ಕೈಜೋಡಿಸೋಣ, ಬದಲಾವಣೆಗಾಗಿ ಪ್ರತಿಪಾದಿಸೋಣ ಮತ್ತು ಸಾಮಾಜಿಕ ನ್ಯಾಯವು ಎಲ್ಲರಿಗೂ ನಿಜವಾಗುವಂತಹ ಸಮಾಜಕ್ಕಾಗಿ ಶ್ರಮಿಸೋಣ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪ ಪ್ರಾಚಾರ್ಯರಾದ ಡಾ. ವೀಣಾ ಎಚ್. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅಧ್ಯಕ್ಷೀಯ ಭಾಷಣ ಮಾಡಿದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಗೀತಾ ಪಾಟೀಲ್ ಅವರು ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪ್ರೇಮಚಂದ್ ಚವ್ಹಾಣ,ಡಾ.ಮಹೇಶ ಗಂವ್ಹಾರ,ಡಾ.ಶರಣಮ್ಮ ಕುಪ್ಪಿ,ಶ್ರೀಮತಿ ಶಿವಲೀಲಾ ಧೋತ್ರೆ,ಶ್ರೀಮತಿ ಕವಿತಾ ಎಮ್.ಹಾಗೂ ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದರು. ಕುಮಾರಿ. ಧನ್ಯಾ ಆನಾಗುಂದಿ ಅವರು ನಿರ್ವಹಿಸಿದ್ದರು. ಕುಮಾರಿ ಶ್ರದ್ಧಾ ರಂಗದಳ ಅವರು ವಂದಿಸಿದರು. ಕುಮಾರಿ. ವಿಂದ್ಯಾಶ್ರೀ ಅವರು ಪ್ರಾರ್ಥನಾ ಗೀತೆ ಹಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here