ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಮಾಜಿ ಶಾಸಕ ಆರ್‌ವಿಎನ್ ಒತ್ತಾಯ

0
66

ಸುರಪುರ: ಮಹಾರಾಷ್ಟ್ರದಲ್ಲಿ ಸುರಿದ ಮಹಾ ಮಳೆಯಿಂದಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರವಾಹದಿಂದ ಜನ ಪರಿತಪಿಸುವಂತಾಗಿದೆ.ನಮ್ಮ ಸುರಪುರ ತಾಲ್ಲೂಕಿನ ಅನೇಕ ಗ್ರಾಮದ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಲ್ಲದೆ,ಬೆಳೆಗಳು ಹಾಳಾಗಿ ಬದುಕು ಬೀದಿ ಪಾಲಾಗಿದೆ.ಆದರೆ ಸರಕಾರ ಇದುವರೆಗು ಸಂತ್ರಸ್ತರಿಗೆ ಬಿಡಿಗಾಸು ನೀಡದೆ ಇರುವುದು ಬೇಸರದ ಸಂಗತಿಯಾಗಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಸಮಿತಿ ಸುರಪುರ ಮತ್ತು ಹುಣಸಗಿ ವತಿಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರಕಾರಗಳು ನೆರೆ ಸಂತ್ರಸ್ತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ.ಇದನ್ನು ಕಾಂಗ್ರೇಸ್ ಖಂಡಿಸುತ್ತದೆ.ಅಲ್ಲದೆ ಕೂಡಲೆ ರೈತರಿಗೆ ಪ್ರತಿ ಎಕರೆಗೆ ಕನಿಷ್ಟ ಇಪ್ಪತ್ತು ಸಾವಿರ ರೂಪಾಯಿ ಪರಿಹಾರ ನೀಡಬೇಕು ಮತ್ತು ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿದರು ಹಾಗು ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸುವ ಜೊತೆಗೆ ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಡಿ.ಕೆ.ಶಿವಕುಮಾರ ಯಾವುದೆ ತಪ್ಪು ಮಾಡದಿದ್ದರು ಬಂಧಿಸಲಾಗಿದೆ.ಇದು ಸೇಡಿನ ರಾಜಕಾರಣವಾಗಿದ್ದು,ಈಗ ಅವರ ಮಗಳನ್ನು ವಿಚಾರಣೆ ನಡೆಸುವ ಹೆಸರಲ್ಲಿ ಆ ಕುಟುಂಬಕ್ಕೆ ಮಾನಸಿಕ ಕಿರಕುಳು ನೀಡುವುದು ಸರಿಯಲ್ಲವೆಂದು ಕೇಂದ್ರದ ವಿರುಧ್ಧ ಹರಿಹಾಯ್ದರು.

Contact Your\'s Advertisement; 9902492681

ಅಲ್ಲದೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿದ್ದು ತಿಂಗಳಾನುಗಟ್ಟಲೆ ಜನರಿಗೆ ಕುಡಿಯುವ ನೀರು ಬಿಡದೆ ಜನತೆ ಪರಿತಪಿಸುವಂತಾಗಿದೆ.ಅಲ್ಲದೆ ಕೆಲವು ವಾರ್ಡುಗಳಿಗೆ ಖಾಸಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತಾಗಿದೆ.ಇದರಲ್ಲೂ ಪಕ್ಷಭೇದ ಮಾಡುತ್ತಿರುವುದು ಗಮನಕ್ಕೆ ಬಂದಿದೆ.ಇದನ್ನು ಸಹಿಸಲಾಗದು,ಇನ್ನು ಮುಂದೆ ಅಂತಹ ಘಟನೆ ನಡೆದರೆ ಅದಕ್ಕೆ ನಮ್ಮ ಪ್ರತಿಕ್ರೀಯೆ ಬೇರೆಯೆ ಇರಲಿದೆ ಎಂದು ಎಚ್ಚರಿಸಿದರು.ಅಲ್ಲದೆ ಒಂದು ವಾರದಲ್ಲಿ ಎಲ್ಲಾ ವಾರ್ಡುಗಳಿಗೆ ಕುಡಿಯುವ ನೀರು ಹರಿಸದಿದ್ದಲ್ಲಿ ನಗರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಸುರಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಮಾತನಾಡಿ,ಕೇಂದ್ರದಲ್ಲಿ ಪ್ರಧಾನಿ ಮೋದಿಯವರು ಸುಳ್ಳು ಹೆಳುತ್ತಿರುವಂತೆ ಸ್ಥಳಿಯ ಶಾಸಕರು ರೈತರಿಗೆ ಮೂರು ಬೆಳೆಗಳಿಗೆ ನೀರು ಕೊಡೆಸುವುದಾಗಿ ಹೇಳಿ ಆರಿಸಿ ಬಂದು ಈಗ ಒಂದು ಬೆಳೆಗೂ ಸರಿಯಾಗಿ ನೀರು ಸಿಗದಂತಾಗಿದೆ,ಶಾಸಕರು ಕೂಡಲೆ ತಾಲ್ಲೂಕಿನಲ್ಲಿಯ ಸಂತ್ರಸ್ತರಿಗೆ ಮನೆ ಹಾಗು ಬೆಳೆಗಳಿಗೆ ಸರಿಯಾದ ಪರಿಹಾರ ಕೊಡೆಸುವಂತೆ ಆಗ್ರಹಿಸಿದರು.ಜೊತೆಗೆ ಕುಡಿಯುವ ನೀರಿಗೂ ಕೂಡಲೆ ಶಾಸ್ವತ ಪರಿಹಾರ ಕಲ್ಪಿಸುವಂತೆ ಖಾರವಾಗಿ ಆಗ್ರಹಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ,ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ,ಮುಖಂಡರಾದ ಸೂಲಪ್ಪ ಕಮತಗಿ,ಅಹ್ಮದ ಪಠಾಣ,ಸೂಗುರೇಶ ವಾರದ,ವೆಂಕಟೇಶ ಅಮ್ಮಾಪುರಕರ್ ಮತ್ತಿತರರು ಮಾತನಾಡಿದರು.ಇದಕ್ಕೂ ಮುನ್ನು ಮಾಜಿ ಶಾಸಕರ ಮನೆಯಿಂದ ಗಾಂಧಿ ವೃತ್ತದವರೆಗೆ ಕಾಂಗ್ರೇಸ್‌ನ ನೂರಾರು ಸಂಖ್ಯೆಯ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ನಡೆಸಿ ಸರಕಾರಗಳ ವಿರುಧ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ವಿಠ್ಠಲ ಯಾದವ್,ನಾಗಣ್ಣ ದಂಡಿನ್,ಮಲ್ಲಣ್ಣ ಸಾಹು,ರಾಜಾ ಮುಕುಂದ ನಾಯಕ,ರಾಜಾ ಮೌನೇಶ್ವರ ನಾಯಕ,ರಾಜಾ ವೇಣುಗೋಪಾಲ ನಾಯಕ,ಗೋಪಾಲದಾಸ ಲಡ್ಡಾ,ರಾಜಾ ಕುಮಾರ ನಾಯಕ,ರಾಜಾ ವಿಜಯಕುಮಾರ ನಾಯಕ,ಮಾನಪ್ಪ ಸೂಗುರ,ಪ್ರಕಾಶ ಗುತ್ತೇದಾರ,ಜುಮ್ಮಣ್ಣ ಕೆಂಗೂರಿ,ಮಲ್ಲಣ್ಣ ಹುಬ್ಬಳ್ಳಿ,ಭೀಮರಾಯ ಕುಂಬಾರ,ನಂದನಗೌಡ ಪಾಟೀಲ,ಗುಂಡಪ್ಪ ಸೋಲಾಪುರ,ನಾಗಪ್ಪ ಕನ್ನೆಳ್ಳಿ,ವೆಂಕಟೇಶ ಬೇಟೆಗಾರ,ರಮೇಶ ದೊರೆ,ರಾಘವೇಂದ್ರ ಕುಲಕರ್ಣಿ,ಅಬ್ದುಲಗಫೂರ ನಗನೂರಿ,ನಾಸೀರ ಕುಂಡಾಲೆ,ಕಮರುದ್ದೀನ್,ಅಬೀದಿ,ಶೇಖ ಮಹಿಬೂಬ ಒಂಟಿ,ಮಾಳಪ್ಪ ಕಿರದಳ್ಳಿ, ದಾವೂದ್ ಪಠಾಣ,ಸುಲೆಮಾನ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here