ನಗರಸಭೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ದಲಿತ ಸೇನೆ ಧರಣಿ

0
54

ಸುರಪುರ: ನಗರಸಭೆ ವ್ಯಾಪ್ತಿಯ ಹಸನಾಪುರದ ದಿವಳಗುಡ್ಡದಲ್ಲಿರುವ ಪ್ಲಾಟ ನಂಬರ್ ಎರಡು ಮತ್ತು ಹತ್ತರಲ್ಲಿನ ಜಾಗವನ್ನು ಕೆಲವರು ಅತಿಕ್ರಮ ಮಾಡಿಕೊಂಡಿದ್ದು ಇದನ್ನು ತೆರವುಗೊಳಿಸಲು ಅನೇಕ ಬಾರಿ ಮನವಿ ಮಾಡಿದರು ಅಧಿಕಾರಿಗಳು ಕ್ರಮ ಕೈಗೊಳ್ಳದೆ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ದಲಿತ ಸೇನೆ ತಾಲ್ಲೂಕು ಅಧ್ಯಕ್ಷ ನಿಂಗಣ್ಣ ಗೋನಾಲ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆವತಿಯಿಂದ ನಗರಸಭೆ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿಯ ನೇತೃತ್ವ ವಹಿಸಿ ಮಾತನಾಡಿ,ಪ್ಲಾಟ್ ನಂಬರ್ ೨ ಮತ್ತು ೧೦ ರಲ್ಲಿ ಪರವಾನಿಗೆ ಪಡೆದು ಪಕ್ಕದಲ್ಲಿರುವ ಸಾರ್ವಜನಿಕೆ ರಸ್ತೆಯ ಸುಮಾರು ಹತ್ತು ಅಡಿಯಷ್ಟು ಜಾಗ ಕಬಳಿಸಲಾಗಿದೆ,ಇದಕ್ಕೆ ಕಟ್ಟಡ ಪರವಾನಿಗೆ ನೀಡಿದ ಬಿಲ್ ಕಲೆಕ್ಟರ್ ಬುಖಾರಿಯನ್ನು ಅಮಾನತ್ತು ಮಾಡಬೇಕು ಮತ್ತು ಪೌರ ಕಾರ್ಮಿಕರಿಗೆ ಕಿರಕುಳ ನೀಡುವ ಮೇಲಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗು ನಗರದಲ್ಲಿ ಕುಡಿಯುವ ನೀರಿನ ತೊಂದರೆ ದೊಡ್ಡ ಮಟ್ಟದಲ್ಲಿದ್ದು ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಧರಣಿ ನಡೆಸಿದರು.

Contact Your\'s Advertisement; 9902492681

ದಲಿತ ಸೇನೆ ಜಿಲ್ಲಾಧ್ಯಕ್ಷ ಅಶೋಕ ಹೊಸ್ಮನಿ ಮಾತನಾಡಿ,ಪ್ಲಾಟ್ ನಂಬರ್ ೨ ಮತ್ತು ೧೦ಕ್ಕೆ ತಪ್ಪು ದೃಢಿಕರಣ ವರದಿ ನೀಡಿದ ನಗರಸಭೆ ಕಂದಾಯ ನಿರೀಕ್ಷಕ ಮತ್ತು ನೈರ್ಮಲ್ಯ ನಿರೀಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು.ಈ ನಮ್ಮ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸದಿದ್ದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಧರಣಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಹಣಮಂತ ಕಟ್ಟಿಮನಿ,ಬಹುಜನ ಅಂಬೇಡ್ಕರ ಸೇನೆ ಜಿಲ್ಲಾಧ್ಯಕ್ಷ ರಾಹುಲ ಹುಲಿಮನಿ,ಬಸವರಾಜ ಹಳ್ಳಿ,ಹುಲಗಪ್ಪ ದೇವತ್ಕಲ್,ತಾಯಪ್ಪ ಕನ್ನೆಳ್ಳಿ,ಭೀಮಣ್ಣ ಬಲಶೆಟ್ಟಿಹಾಳ,ಶಿವಣ್ಣ ನಾಗರಾಳ,ರಮೇಶ ನಂಬಾ,ಪರಮಣ್ಣ ಹಂದ್ರಾಳ,ಸುರೇಶ ಅಮ್ಮಾಪುರ,ಜಗದೀಶ ಯಕ್ತಾಪುರ,ನಾಗು ಗೋಗಿಕೇರಾ,ದೇವಣ್ಣ ಭಜಂತ್ರಿ,ದೇವಪ್ಪ ಹೊಸಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here