ಕಲಬುರಗಿ: ಪರೀಕ್ಷಾ ಭಯ ಬೇಡ ಪರೀಕ್ಷಾ ಎಂದರೆ ಹಬ್ಬದ ದಿನ ಸಂಭ್ರಮದ ದಿನ ಹಾಗೆ ಆಚರಣೆ ಮಾಡೊಣ ಎಂದು ಪರೀಕ್ಷಾ ಪೇ ಚರ್ಚಾ ಎಂದು ಭಾರತ ಪ್ರಧಾನಿ ಮೋದಿ ಅವರು ಹೇಳಿರುವ ಹಾಗೆ ಮಕ್ಕಳನ್ನು ಪರೀಕ್ಷೆ ಬರೆಯುವ ರೀತಿಯಲ್ಲಿ ತೈಯಾರಿ ಮಾಡುವ ಕೆಲಸ ಶಿಕ್ಷಕರು ಹಾಗೂ ಪೋಷಕರದಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಜೀಮ್ಸ್ ಆಸ್ಪತ್ರೆ ಕ್ಲಿನಿಕಲ್/ರಿಹ್ಯಾಬಿಟೇಷನ್ ಸೈಕಾಲೊಜಿಸ್ಟ್ ಡಾ. ರೇಣುಕಾ ಬಗಾಲೆ(ಹತ್ತಿ) ಇವರು ಮಾತಾಡಿದರು.
ಬುಧುವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ನವದೆಹಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಕಲಬುರಗಿ ಜಿಲ್ಲೆಯ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ “ಪರೀಕ್ಷಾ ಪೇ ಚರ್ಚಾ- ಪರೀಕ್ಷಾ ಪರ್ವ” ಶಿಕ್ಷಕರು ಹಾಗೂ ಪೋಷಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳನ್ನು ವಿಶ್ವವನ್ನು ತೋರಿಸಿದವರು ಪಾಲಕರು ಒಬ್ಬ ಶಿಲ್ಪಿಯೂ ಯಾವ ಪ್ರಕಾರದಲ್ಲಿ ಕಲ್ಲನ್ನು ಕೆತ್ತನೆ ಮಾಡುತ್ತಾನೊ ಹಾಗೆ ಮಕ್ಕಳನ್ನು ತಂದೆ-ತಾಯಿ ಅದೇ ಪ್ರಕಾರದಲ್ಲಿ ಸಂಸ್ಕಾರವನ್ನು ಕೊಡಬೇಕು 4 ರಿಂದ 5 ವರ್ಷದ ಮಕ್ಕಳು ತಾಯಿಯ ಬಾಂದವ್ಯ ಅತಿ ಹೆಚ್ಚು ಆಗಿರುತ್ತದೆ. ತಾಯಿಯೇ ಮೊದಲ ಗುರು ಅಂತ ಹೇಳಿರುವುದು ಮುಖ್ಯವಾಗಿದೆ ಪಾಲಕರ ಆಶ್ರಯದಲ್ಲಿ ಬೆಳೆಯುವ ಮಕ್ಕಳು ಆರೋಗ್ಯವಂತರು ಹಾಗೂ ಸದೃಡದೇಹ ಸದೃಡಮನಸ್ಸು ಹೊಂದಿರುತ್ತಾರೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಎಜುಕೇಶನಲ್ ಕೌನ್ಸಲರ್ ಡಾ.ಜಯಶ್ರೀ ಎಸ್.ರೆಡ್ಡಿ ಅವರು ಮಾತನಾಡಿ, ಶಿಕ್ಷಕರು ಪಾಲಕರು ಹೌದು ಹಾಗೂ ಶಿಕ್ಷಕರ ಹೌದು ಎಂದು ಹೇಳಿದ ಅವರು ಮಕ್ಕಳು ಹೇಗೆ ಪರೀಕ್ಷೆಯನ್ನು ಬರೆಯುವ ತೈಯಾರಿ ಮಾಡಬೇಕು ಅಂತ ಶಿಕ್ಷಕರು ಹೆಚ್ಚು ಗಮನ ಸೆಳೆಯಬೇಕು ಪರೀಕ್ಷೆ ಸಾಮಾನ್ಯವಾಗಿದೆ. ನಾವು ಸಾಮಾನ್ಯವಾಗಿದೇವೆ ನಮಗಾಗಿ ಇರುವ ಪಠ್ಯಕ್ರಮವಾಗಿದೆ ಹಾಗೂ ನಮಗೆ ಮೀರಿದು ಯಾವುದು ದೊಡ್ಡದಲ್ಲ ವಯಸ್ಸಿಗೆ ಅನುಗುಣವಾಗಿ ಇರುವ ಪಠ್ಯಕ್ರಮವಾಗಿದೆ. ಮಕ್ಕಳಿಗೆ ಅತಿ ಹೆಚ್ಚು ಪ್ರೋಟೇಕ್ಷನ್ ಸಿಗುತ್ತಿದೆ ಆದರಿಂದ ಅವರು ಕಲಿಕಾ ವಾತಾವರಣ ಸಾಮಾನ್ಯವಾಗಿ ಮಾಡಬೇಕು ಹಾಗೂ ಅವರಿಗೆ ಬಂದಂತಹ ಸಮಸ್ಯೆಗಳಿಗೆ ಅವರೇ ಪರಿಹಾರವನ್ನು ಹುಡುಕಿಕೊಳ್ಳಬೇಕು ಮಕ್ಕಳಲ್ಲಿ ಬರವಣಿಗೆ ಕೌಶಲ್ಯ ಹೆಚ್ಚಿಸಬೇಕು. ಮೂರು ಭಾಷೆಯಲ್ಲಿ ಭಾಷಾ ಅಭ್ಯಾಸವನ್ನು ಹೆಚ್ಚು ಗಮನ ಸೆಳೆಯಬೇಕು ಎಂದರು.
ಸಂಪನ್ಮೂಲ್ ವ್ಯಕ್ತಿಗಳಾದ ಅಸೋಸಿ ಏಟ ಪ್ರೋಫೆಸರ್ ಮತ್ತು ಹೆಡ್ ಡಿಪಾರ್ಟಮೆಂಟ್ ಆಫ್ ಹಿಸ್ಟ್ರಿ, ಕೇಂದ್ರೀಯ ವಿದ್ಯಾಲಯ ಡಾ.ರವಿ ಖಾನಗೈ ಮಾತನಾಡಿ, ಮಕ್ಕಳು ಮುಖ್ಯವಾಗಿ ಅವರು ಇಂದ್ರೀಯ ಮೇಲೆ ಗಮನ ಸೆಳೆದುಕೊಳ್ಳಬೇಕು ಮಕ್ಕಳಿಗೆ ಮುಖ್ಯವಾಗಿ ಪ್ರೀತಿಯಿಂದ ಮಾತಾಡಬೇಕು ಹಾಗು ಮೊದಲು ಮಾನವನಾಗುವ ಗುಣಗಳು ಪಾಲಕರು ತಿಳಿ ಹೇಳಬೇಕು ಒಬ್ಬ ವ್ಯಕ್ತಿ ಯಶಸ್ಸು ಆಗಬೇಕಾದರೆ ಅವರು ಮೊದಲು ಒಳ್ಳೆಯ ವ್ಯಕ್ತಿಯಾಗಬೇಕು ಇಂದ್ರೀಯಗಳು ಏಕಾಗ್ರತೆಯಿಂದ ಇದ್ದರೆ ಅವರು ಶಾಂತ ಚಿತ್ತವಾಗಿ ಅಭ್ಯಾಸ ಮಾಡಲು ಸಾಧ್ಯ ಎಂದ ಅವರು ಶಿಕ್ಷಕರನ್ನು ಹಾಗೂ ಮಕ್ಕಳಿಗೆ ಸಲಹೆ ನೀಡಿದರು.
ಶಿಕ್ಷಕರು ಹಾಗೂ ಪಾಲಕರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮೌಲ್ಯಮಾಪನ ಅಧಿಕಾರಿ ಮದುಮತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಟ್ಟದ ರಕ್ಷಣಾಧಿಕಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಮಂಜುಳಾ.ವಿ. ಪಾಟೀಲ ಸೇರಿದಂತೆ ವಿವಿಧ ಶಾಲೆಯ ಪ್ರಾಂಶುಪಾಲರು ಶಿಕ್ಷಕರು ಹಾಗೂ ಪೋಷಕರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.