ಕಲಬುರಗಿ: ಸೋಲು ಅನುಭವ ನೀಡುತ್ತದೆ. ಹಾಗಾಗಿ ಸೋಲೆ ಗೆಲುವಿನ ಸೋಪಾನ ಇಲ್ಲಿ ಗೆಲುವು ಸೋಲು ಮುಖ್ಯವಲ್ಲ, ಸ್ಪರ್ಧೆಗಳಲ್ಲಿ ಧೈರ್ಯದಿಂದ ಭಾಗವಹಿಸುವುದೇ ಬಹಳ ಮುಖ್ಯ ಎನ್ನುತ್ತಾ ಸುಮಾರು ೨೨ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳು ಮಹಿಳೆಯರಿಗೆ ಪ್ರಶಸ್ತಿ ಪತ್ರ ಪ್ರಧಾನ ಹಾಗೂ ಬಹುಮಾನ ವಿತರಣೆ ಮಾಡಿದ ನರೋಣಾ ಮತ್ತು ಗೋಳಾ(ಬಿ) ಪೂಜ್ಯರಾದ ಚನ್ನಮಲ್ಲ ಸ್ವಾಮಿಗಳು ಮಾತನಾಡಿದರು.
ಮಕ್ಕಳು ಹಾಗೂ ಮಹಿಳೆಯರಿಗೆ ಸಂಸ್ಕೃತಿಕ, ಕಲಾತ್ಮಕ ಆಗಾದ ಶಕ್ತಿ, ಪ್ರತಿಭೆ ಗುರುತಿಸಲು ಹಾಗೂ ಹೊರಹಾಕಲು ಪ್ರತಿ ವರ್ಷ ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ೧೯೯೭ ರಿಂದ ಪ್ರತಿ ವರ್ಷ ವಾರ್ಷಿಕೋತ್ಸವ ಹಾಗೂ ಗಣೇಶ ಉತ್ಸವ ನೆಪ ಮಾಡಿಕೊಂಡು ಕ್ರೀಡೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಈ ವರ್ಷ ೨೨ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ೨೨ ವಿವಿಧ ಸ್ಪರ್ಧೆಗಳು ನಡೆಸಿ ಅವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು ಎಂದು ಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಪ್ರಸ್ತಾವಿಕ ಮಾತನಾಡಿದರು.
ಸಂಘದ ಅಧ್ಯಕ್ಷ ಶಿವರಾಜ ಅಂಡಗಿ, ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಉಪಾಧ್ಯಕ್ಷ ಉಮೇಶ ಶೆಟ್ಟಿ, ಸಂಘದ ಕಾರ್ಯದರ್ಶಿ ಕರಣಕುಮಾರ ಆಂದೋಲಾ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀಮತಿ ಮಹಾದೇವಿ ಪಾಟೀಲ ಸ್ವಾಗತ ಗೀತೆ ಹಾಡಿದರು. ಶ್ರೀಮತಿ ರೇಖಾ ಅಂಡಗಿ ಪ್ರಾರ್ಥನೆ ಗೀತೆ ಹಾಡಿದರು. ಕರಣ ಆಂದೋಲಾ ನಿರೂಪಿಸಿದರು.
ಓಟದ ಸ್ಪರ್ಧೆ, ಹಗ್ಗದ ಆಟ, ಕೇರಮ್, ಪ್ಯಾಷನ್ ಶೋ ಹೀಗೆ ವಿವಿಧ ಕ್ರೀಡೆಗಳಲ್ಲಿ ಶಶಿಧರ ಪ್ಯಾಟಿ, ಧರ್ಮರಾಜ ಹೆಬ್ಬಾಳ, ಅವಿನಾಶ ಅಂಡಗಿ, ಅನಿಲಕುಮಾರ ನಾಗೂರ, ವಿಶ್ವನಾಥ ಮಠಪತಿ ಸಂಚಾಲಕರಾಗಿ ಕ್ರೀಡಾ ಚಟುವಟಿಕೆ ನಡೆಸಿಕೊಟ್ಟರು. ಹಾಡುವ ಸ್ಪರ್ಧೆ, ವಚನ ಪಠಣ, ಗಾಯನ ಸ್ಪರ್ಧೆ ಹಾಗೂ ಹೀಗೆ ಸಂಸ್ಕೃತಿಕ ಕಾರ್ಯಕ್ರಮಗಳನ್ನು ತರುಣಶೇಖರ ಬಿರಾದರ, ಮಹಾದೇವ ತಂಬಾಕೆ, ಅಮೀತ ಸಿಕೇದ, ಸಂತೋಷ ನಿಂಬೂರ, ಸಂತೋಷ ಪ್ಯಾಟಿ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಗಣಪತಿ ವೇಷ (ತರುಣ), ರೈತನ ವೇಷ (ಸಾತವೀಕ), ಅಲ್ಲಮಪ್ರಭು ವೇಷ (ಪ್ರತೀಕ), ಭರತನಾಟ್ಯ ವೇಷ (ತನುಶ್ರೀ) ವನಕೆ ಓಬವ್ವ ವೇಷ (ಶ್ರದ್ದಾ), ಸಿಂಡ್ರೇಲಾ ವೇಷ (ಸಂಜೀವಿನಿ), ರಾಧಾ ವೇಷ (ಅರನಾ) ಕೃಷ್ಣ ವೇಷ (ಅಷಮೀತ) ಕಾಡುದೇವತೆ ವೇಷ (ಶ್ರೀನಿಧಿ) ನರೇಂದ್ರ ಮೋದಿ ವೇಷ (ಸಾಕ್ಷತ) ಪಂಜಾಬಿ ಗರ್ಲ ವೇಷ (ಐಶ್ವರ್ಯ) ಇಂದಿರಾಗಾಂಧಿ ವೇಷ (ವರ್ಷಾ), ವಿದೇಶಿ ಮಹಿಳೆ ವೇಷ (ಸ್ಪೂರ್ತಿ) ರಾಣಿ ವೇಷ (ಶ್ರೀನಿಧಿ) ಹೀಗೆ ವಿಶೇಷವಾಗಿ ಬಹುಮಾನ ವಿತರಣೆ ಸಮಾರಂಭಕ್ಕೆ ಫ್ಯಾಷನಲ್ ಶೋ ದಲ್ಲಿ ಭಾಗವಹಿಸಿದ ಮಕ್ಕಳು ಈ ಮೇಲಿನಂತೆ ವೇಶಭೂಷಣ ಧರಿಸಿ ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟಿದ್ದಾರೆ.
ಒಟ್ಟು ೨೨ ಪ್ರಥಮ, ದ್ವಿತೀಯ, ತೃತೀಯ ಹಾಗೂ ೫೩ ಮಕ್ಕಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಕುಮಾರಿ ತನುಶ್ರೀ ಬಿರಾದಾರ ಅವರ ಭರತ ನಾಟ್ಯ ಹಾಗೂ ರಿತ್ವಿಕ ದಂಡೋತಿ ಅವರ ಡ್ಯಾನ್ಸ್ ಜನರ ಮನಸೆಳೆಯಿತು ಎಂದು ಸಂಘದ ಕಾರ್ಯದರ್ಶಿ ಕರಣಕುಮಾರ ಆಂದೋಲಾ ತಿಳಿಸಿದ್ದಾರೆ.