ಕಲಬುರಗಿಯಲ್ಲಿ ನೇಕಾರರಿಂದ ಪ್ರತಿಭಟನೆ

0
112

ಕಲಬುರಗಿ: ನೇಕಾರರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಪೂರಕ ಆಯ ವ್ಯಯದಲ್ಲಿ 100 ಕೋಟಿ ಘೋಷಣೆ ಮಾಡಿ ಬಿಡುಗಡೆ ಹಾಗೂ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ನಿಗಮಕ್ಕೆ ನೇಕಾರ ಸಮುದಾಯದವರ ಸಮಸ್ಯೆಗಳನ್ನು ಪರಿಹರಿಸುವಂತ ನಾಯಕರನ್ನು ನೇಮಕ ಗೊಳಿಸಬೇಕು ಎಂದು ಜಿಲ್ಲಾ ನೇಕಾರ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುವ ಮೂಳ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮೂರ್ತಿ ಆವರಣದಲ್ಲಿ ಸೇರಿ, ಮಾಲಾರ್ಪಣೆ ಮಾಡಿ, ಹೋರಾಟ ಪ್ರಾರಂಭಿಸಿದ ನೇಕಾರರು, ನಂತರ ಬಸವೇಶ್ವರ ಮೂರ್ತಿ, ಡಾ. ಬಾಬು ಜಗಜೀವನರಾಮ್ ಮೂರ್ತಿ ಮತ್ತು ಸರದಾರ ವಲ್ಲಭಭಾಯಿ ಮೂರ್ತಿಗೆ ಗೌರವ ಸಲ್ಲಿಸಿ ಮೆರವಣಿಗೆ ಜಿಲ್ಲಾಡಳಿತದ ಕಛೇರಿಗೆ ತಲುಪಿತು. ಬಿಜೆಪಿಯ ಜಿಲ್ಲಾ ನಗರ ಅಧ್ಯಕ್ಷರಾದ ಚಂದು ಪಾಟೀಲ ರವರು ಆಗಮಿಸಿ, ನೇಕಾರರ ಪಕ್ಷಾತೀತ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಬೆಂಬಲ ವ್ಯಕ್ತಪಡಿಸಿದರು.

Contact Your\'s Advertisement; 9902492681

ವಿರೋಧ ಪಕ್ಷದ ನಮ್ಮ ಯುವ ನಾಯಕರ ಗಮನಕ್ಕೆ ತಂದು ರಾಜ್ಯದ ನೇಕಾರರ ಬೇಡಿಕೆ ಈಡೇರುವಂತೆ ಮಾಡಲು ಪತ್ರದ ಮೂಲಕ ಆಗ್ರಹಿಸಿಲು ಕೋರುತ್ತೇನೆ ಎಂದು ಮಾತನಾಡಿದರು. ಪ್ರತಿಭಟನೆ ಒಕ್ಕೂಟದ ಅಧ್ಯಕ್ಷ, ಪ್ರದೀಪ್ ಗಣೇಶ ಸಂಗಾ ರವರ ನೇತೃತ್ವದಲ್ಲಿ ಜರುಗಿತು.

ಹೋರಾಟದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಂತ ಕುಮಾರ ಯಳಸಂಗಿ, ಸಂಘಟನಾ ಕಾರ್ಯದರ್ಶಿ ಹಣಮಂತ ಕಣ್ಣಿ, ಉಪಾಧ್ಯಕ್ಷರಾದ ಸಿಂಘಾಡೆ ನಾರಾಯಣರಾವ್, ಮಲ್ಲಿನಾಥ ನಿಂಬಾಳ ಮಾದನ ಹಿಪ್ಪರಗಾ, ಗುರುರಾಜ ಚಿಮದಿ ಸುಲ್ತಾನಪೂರ್, ರೇವಣಸಿದ್ದಪ್ಪಾ ಗಡ್ಡದ, ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ್ ಖಜಾಂಚಿ ಶ್ರೀನಿವಾಸ ಬಲಪೂರ್, ಸದಸ್ಯರಾದ ಡಾ. ಬಸವರಾಜ ಚನ್ನಾ, ನ್ಯಾಯವಾದಿಗಳಾದ ಜೇನವೆರಿ ವಿನೋದ ಕುಮಾರ, ಸತೀಶ ಜಮಖಂಡಿ, ಸಂತೋಷ ಗುರಮಿಟಕಲ, ಭಂಡಾರಿ ರಾಜಗೋಪಾಲ, ಉತ್ತರ ಮತಕ್ಷೇತ್ರದ ನೇಕಾರ ಪ್ರಕೋಷ್ಠದ ಸಂಚಾಲಕ, ಮಹಾದೇವಪ್ಪಾ ಘಾಳೆ, ವೆಂಕಟೇಶ್ ಬಲಪೂರ, ವೀರಸಂಗಪ್ಪ ಬಳ್ಳಾ, ಕಾರ್ಯಕಾರಿಣಿ ಸದಸ್ಯ ಕುಶಾಲ ಯಡವಳ್ಳಿ, ಸಂತೋಷ ಲಖಮಣ, ಒಕ್ಕೂಟದ ಯುವ ಘಟಕದ ಅಧ್ಯಕ್ಷ ಲಕ್ಷಿಕಾಂತ ಜೋಳದ, ರವಿ ಯಳಸಂಗಿ, ಅಲ್ಲದೆ ತಾಲೂಕಾಗಳಾದ ಚಿತ್ತಾಪುರ, ಜೇವರ್ಗಿ, ಯಡ್ರಾಮಿ, ಮಾದನ ಹಿಪ್ಪರಗಾ ಘಟಕ, ಕಮಲಾಪೂರ್ ಘಟಕದ ಪಧಾಧಿಕಾರಿಗಳುಹೆಚ್ಚಿನ ಸಂಖ್ಯೆಯಲ್ಲಿ ಪಾಲಗೊಂಡು ಹೋರಾಟ ಯೇಶಸ್ವಿಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here