ಅಂಗವಿಕಲರಿಗೆ 5% ಅನುದಾನ ಮೀಸಲಿಡಲು ಆಗ್ರಹ

0
102

ಶಹಾಬಾದ :ತಾಪಂಯಲ್ಲಿ ವಿಕಲಚೇತನರಿಗೆ 5% ಅನುದಾನ ಮಿಸಲಿಟ್ಟು ಅನುದಾನವನ್ನು ಅನುμÁ್ಠನ ಮಾಡುವಂತೆ ಒತ್ತಾಯಿಸಿ ಶುಕ್ರವಾರ ಅಂಗವಿಕಲರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಗವಿಕಲರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ ಮಾತನಾಡಿ,
ತಾಪಂ,ಜಿಪಂಗಳಲಿ ್ಲ ವಿಕಲಚೇತನ ಸಲುವಾಗಿ.5% ಅನುದಾನವನ್ನು ಮೀಸಲಿಡಬೇಕೆಂಬುದು ಸರಕಾರ ಆದೇಶ.

Contact Your\'s Advertisement; 9902492681

ಈ ಹಿಂದೆ ಸರ್ಕಾರ ಅಂಗವಿಕಲರಿಗೆ ಸೌಲಭ್ಯ ಮೂಲಕ 5% ಅನುದಾನದಲ್ಲಿ ಹೊಲಿಗೆ ಯಂತ್ರ, ಕಂಪ್ಯೂಟರ್, ಲ್ಯಾಪ್‍ಟಾಪ್, ತ್ರಿಚಕ್ರ ವಾಹನ ಸೌಲಭ್ಯಗಳನ್ನು ನೀಡುತ್ತ ಬಂದಿದೆ.ಇದರಿಂದ ವಿಕಲಚೇತನರಿಗೆ ವ್ಯಯಕ್ತಿಕವಾಗಿ ತುಂಬಾ ಅನುಕೂಲತೆಯನ್ನು ಪಡೆದಿದ್ದಾರೆ.ಆದರೆ ಸದ್ಯ 5% ಅನುದಾನದಲ್ಲಿ ಕಾಮಗಾರಿಗಳ ಮೂಲಕ ಸೌಲಭ್ಯ ಸರ್ಕಾರ ವಿತರಣೆ ಮಾಡುತ್ತಿದೆ. ಶಾಲೆಗಳಲ್ಲಿ ರ್ಯಾಂಪ್, ಸಮುದಾಯ ಶೌಚಾಲಯ ಸೇರಿದಂತೆ ಇತರ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ವಿಕಲಚೇತನರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.ಆದ್ದರಿಂದ ಕೂಡಲೇ ಈ ಹಿಂದೆ ನೀಡುತ್ತಿದ್ದ ಹೊಲಿಗೆ ಯಂತ್ರ, ಕಂಪ್ಯೂಟರ್, ಲ್ಯಾಪ್‍ ಟಾಪ್, ತ್ರಿಚಕ್ರ ವಾಹನ ಸೌಲಭ್ಯಗಳನ್ನು ಮತ್ತೆ ಜಾರಿಗೆ ತರಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.

ಕರವೇ ತಾಲೂಕಾಧ್ಯಕ್ಷ ವಿಶ್ವರಾಜ ಫಿರೋಜಾಬಾದ, ಅನಿಲ್ ಮಠಪತಿ, ಸತೀಶ್, ಚಂದು ಕಿಂಡ್ರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here