ವಿಜಯ ವಿದ್ಯಾಲಯ ಬಡಾವಣೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

0
44

ಕಲಬುರಗಿ: ಭಾನುವಾರ ಕಲಬುರಗಿ ಹೊರವಲಯದ ಕೂಟನೂರು (ಡಿ) ಗ್ರಾಮದ ವಿಜಯ ವಿದ್ಯಾಲಯ ಬಡಾವಣೆಯಲ್ಲಿ ದಿವಂಗತ. ಬಿ.ಸುರೇಖಾ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಸುರಕ್ಷಾ ಹೆರಿಗೆ ಮತ್ತು ಜನರಲ್ ಆಸ್ಪತ್ರೆ ಹಾಗೂ ಜೈ ಹನುಮಾನ್ ಸೇವಾ ಸಂಘದ ವತಿಯಿಂದ ಉಚಿತ ಅರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.

ಉಚಿತ ಅರೋಗ್ಯ ತಪಾಸಣೆ ಶಿಬಿರದಲ್ಲಿ ಮದುಮೇಹ ಮತ್ತು ಅಧಿಕ ರಕ್ತದೊತ್ತಡ ಸ್ಕ್ರೀನಿಂಗ್, ಕಣ್ಣು, ಗಂಟಲು, ಮೂಗಿನ ತಪಾಸಣೆ, ಬಿ.ಪಿ ತಪಾಸಣೆ, ಸ್ತ್ರೀರೋಗಕ್ಕೆ ಸಂಬಂಧಿಸಿದ ಗರ್ಭಾವಸ್ಥೆಯ ತಪಾಸಣೆ ಸೇರಿದಂತೆ ವಿವಿಧ ರೋಗಗಳಿಗೆ ಸ್ಥಳದಲ್ಲೇ ಉಚಿತವಾಗಿ ಸ್ಥಳದಲ್ಲೇ ಚಿಕಿತ್ಸೆ ನೀಡಲಾಯಿತು.

Contact Your\'s Advertisement; 9902492681

ಈ ವೇಳೆ ಸ್ತ್ರೀರೋಗ ತಜ್ಞರಾದ ಡಾ.ಚಂದ್ರಿಕಾ, ನೇತ್ರಶಾಸ್ತ್ರಜ್ಞ ಡಾ. ಫಜಲ್ ಫರಾಜ್, ಆರ್ಥೋಪೆಡಿಕ್ಸ್ ಡಾ. ಪ್ರದೀಪ್ ಕುಮಾರ್, ಜನರಲ್ ಮೆಡಿಸನ್ ಡಾ. ಮಹೇಶ್ ದತ್ತಾತ್ರೇಯ ಹಕ್ಕೆ, ಮಕ್ಕಳ ತಜ್ಞ ಡಾ. ಪ್ರದೀಪ್ ರೆಡ್ಡಿ, ಜನರಲ್ ಸರ್ಜರಿ ಡಾ. ಶರಣಕುಮಾರ್ ಜಬ್ಯೆಟ್ಟ, ಪೀಡಿಯಾಟ್ರಿಕ್ಸ್ ಡಾ. ಸಂಧ್ಯಾ ವಿ. ಹುಡ್ಗಿ, ಎಂಡಿ ಮೆಡಿಸನ್ ಡಾ. ವಿಜಯಲಕ್ಷ್ಮಿ ಅವರ ತಂಡವು ಉಚಿತ ಆರೋಗ್ಯ ತಪಾಸಣೆಯನ್ನು ಕೈಗೊಂಡರು. ಸಿಬ್ಬಂದಿಗಳಾದ ಇಂದಿರಾ.ಡಿ, ಸಿದ್ದಮಾ.ಜಿ, ಸದಾನಂದ ಟೆಂಗಳಿ, ಸದ್ದಮಾ, ಗುರುಬಸಮ್ಮ, ಮದಿಹಾ, ಮೀನಾಕ್ಷಿ, ಪುನೀತ್ ಅವರು ವೈದ್ಯರಿಗೆ ಸಾಥ್ ನೀಡಿದರು.

ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಬಡಾವಣೆಯ ಸುಮಾರು 50ಕ್ಕೂ ಹೆಚ್ಚು ಜನ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಈ ಸಂದರ್ಭದಲ್ಲಿ ಜೈ ಹನುಮಾನ್ ಸೇವಾ ಸಂಘದ ಅಧ್ಯಕ್ಷ ಶಿವುಕುಮಾರ್ ಪಾಟೀಲ್, ಕಾರ್ಯದರ್ಶಿ ಶಿವಾನಂದ್ ತೋರವಿ, ಖಜಾಂಚಿ ಸುರೇಶ ದೇಶಮುಖ, ಉಪಾಧ್ಯಕ್ಷ ಸುಧಾಕರ್, ಶಿವಕುಮಾರ್ ತೊಟ್ನಳ್ಳಿ, ಶ್ರೀಪಾದ್ ಪಾಟೀಲ್ ಸೇರಿ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here