ಕಾರಂಜ ಸಂತ್ರಸ್ತರ ಬೇಡಿಕೆ; ಉನ್ನತ ಮಟ್ಟದ ಸಭೆ ನಡೆಸಿ ಕಾರಂಜ ಸಂತ್ರಸ್ತರ ಬೇಡಿಕೆ ಬಗ್ಗೆ ನಿರ್ಣಯ | ಡಿಸಿಎಂ

0
36

ಬೆಳಗಾವಿ ಸುವರ್ಣ ಸೌಧ; ಕಾರಂಜ ಸಂತ್ರಸ್ತರ ಬೇಡಿಕೆ ಬಗ್ಗೆ ಸಂತ್ರಸ್ತರ ಮುಖಂಡರೊಂದಿಗೆ ಚರ್ಚೆ ನಡೆಸಿ ಉಪ ಮುಖ್ಯಮಂತ್ರಿ ಡಿ. ಕೆ ಶಿವ ಕುಮಾರ್ ಅವರು ಕರಂಜಾ ಸಂತ್ರಸ್ತರ ಬೇಡಿಕೆಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಬೆಂಗಳೂರಿನಲ್ಲಿ ಪರಿಣಿತರ ಒಂದು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ, ಬೀದರ್ ಜಿಲ್ಲೆಯ ಸಚಿವ ಶಾಸಕರನ್ನೊಳಗೊಂಡು ಸಭೆ ನಡೆಸಿ, ಸಂತ್ರಸ್ತರ ಬೇಡಿಕೆ ಈಡೇರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಗುವುದು ಎಂದು ಭರವಸೆ ನೀಡಿದರು. ಮುಖ್ಯ ಮಂತ್ರಿಗಳ ಜೊತೆ ಜಿಲ್ಲೆಯ ಸಚಿವರು, ಶಾಸಕರು ಆದಷ್ಟು ಶೀಘ್ರ ಸಮಾಲೋಚನೆ ನಡೆಸಲು ತಿಳಿಸಿದರು.

ಇಂದು ಜರುಗಿದ ಮಹತ್ವದ ಸಭೆಯಲ್ಲಿ ನಿಯೋಗದ ನೇತೃತ್ವ ವಹಿಸಿದ ಶ್ರೀ ಲಕ್ಷ್ಮಣ ದಸ್ತಿ ಅವರು ಮಾತನಾಡಿ, ಕಾರಂಜ ನೀರಾವರಿ ಯೋಜನೆಗೆ ಜಮೀನು ಕೊಟ್ಟ ಸಹಸ್ರಾರು ರೈತರ ಕುಟುಂಬಗಳು ನಿರ್ಗತಿಕರಿಗೆ ಮುಂಬೈ, ಪೂನಾ, ಬೆಂಗಳೂರು ಕಡೆ ಗೂಳೆ ಹೋಗಿದ್ದಾರೆ. ಸಂತ್ರಸ್ತರಿಗೆ ಸಮರ್ಪಕ, ವೈಜ್ಞಾನಿಕ ಆಧಾರದ ದಂತೆ ಪರಿಹಾರ ಸಿಗದ ಕಾರಣ, ನಿರಂತರ ಗೂಳೆ ಹೋಗುವುದು ನಡೆದಿದೆ. ಕಾರಂಜ ಸಂತ್ರಸ್ತರ ನ್ಯಾಯಯುತ ವಾದ ಬೇಡಿಕೆ ಈಡೇರಿಸಲು ಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಕೋರಿದರು. ಮುಂದುವೆರ್ದು ಅವರು ಸಂತ್ರಸ್ತರ ಬೇಡಿಕೆ ಬಗ್ಗೆ ಈಗಿನ ಮುಖ್ಯ ಮಂತ್ರಿ ಶ್ರಿ ಸಿದ್ದರಾಮಯ್ಶಾ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಪ್ರಿಯಾಂಕ್ ಗಾಂಧಿ, ಅಷ್ಟೇ ಅಲ್ಲದೆ, ಈಗಿನ ಉಪ ಮುಖ್ಯಮಂತ್ರಿ ತಾವು ಸಹ ನಮ್ಮ ಸರ್ಕಾರ ಬಂದರೆ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆ ನೀಡಿರುವಿರಿ. ಇದಕ್ಕೆ ಪೂರಕವಾಗಿ ತಕ್ಷಣ ಸ್ಪಂದಿಸಿ, ಮಾನವೀಯತೆ ಮಾನದಂಡದಂತೆ, ವಿಶೇಷ ಪ್ರಕರಣ ಎಂದು ಪರಿಗಣಿಸಿ ಬೇಡಿಕೆ ಈಡೇರಿಸಲು ಸಮಸ್ತ ಬೀದರ್ ಜನತೆ ಪರವಾಗಿ ಸರ್ಕಾರಕ್ಕೆ  ವಿನಂತಿಸುತ್ತೇನೆ ಎಂದು ದಸ್ತಿ ಅವರು ಮನವಿ ಮಾಡಿದರು.

Contact Your\'s Advertisement; 9902492681

ಇದಕ್ಕೆ ಸಕಾರಾತ್ಮಕವಾಗಿ ಬೆಂಬಲಿಸಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಆದ, ಶ್ರಿ ಈಶ್ವರ್ ಖಂಡ್ರೆ ಅವರು ಮಾತನಾಡಿ, ದಶಕಗಳಿಂದ ನಡೆದಿರುವ ಸಂತ್ರಸ್ತರ ನ್ಯಾಯಯುತ ವಾದ ಬೇಡಿಕೆಗೆ, ವಿಶೇಷ ಪ್ರಕರಣ ಎಂದು ಪರಿಗಣಿಸಿ ಔಟಿe ಖಿime Seಣಣಟemeಟಿಣ ಅಧಾರದಂತೆ ಪರಿಹಾರ ನೀಡಲು ಉಪ ಮುಖ್ಯ ಮಂತ್ರಿಗಳಿಗೆ ವಿಶೇಷವಾಗಿ ಮನವರಿಕೆ ಮಾಡಿದರು. ಇದಕ್ಕೆ ಜಿಲ್ಲೆಯ ಸಚಿವ ರಾದ ರಹೀಂ ಖಾನ್ ಸೇರಿದಂತೆ, ಶಾಸಕರುಗಳಾದ, ಶೈಲೇಂದ್ರ ಬೆಲ್ದಾಳೆ, ಚಂದ್ರಶೇಕರ್ ಪಾಟೀಲ್, ಬೀಮ್ ರಾವ್ ಪಾಟಿಲ್, ಅರವಿಂದ್ ಕುಮಾರ್ ಅರಳಿ, ಶರಣು ಸಲಗರ್, ಸಿದ್ದಲಿಂಗ ಪಾಟೀಲ್ ಪಕ್ಷಾತೀತವಾಗಿ ಒಮ್ಮತದಿಂದ ಖಂಡ್ರೆ ಅವರ ಧ್ವನಿಗೆ ಧ್ವನಿಗೂಡಿಸಿದರು. ಸಮಿತಿಯ ಅಧ್ಯಕ್ಷರಾದ ಚಂದ್ರಶೇಕರ್ ಪಾಟೀಲ್ ಅವರು ಮಾತನಾಡಿ, ದೀರ್ಘ  ಕಾಲದಿಂದ ನಡೆದಿರುವ ನಮ್ಮ ನ್ಯಾಯಯುತವಾದ ಹೋರಾಟಕ್ಕೆ ಸ್ಪಂದಿಸಿ ನಮಗೆ ಕರೆಸಿ, ಸಮಸ್ಯೆ ಬಗ್ಗೆ ಚರ್ಚಿಸಿದ್ದಕ್ಕೆ ಅವರು ಸ್ವಾಗತಿಸಿದ ಅವರು, ನಮ್ಮ ಬೇಡಿಕೆಗಳನ್ನು ಆದಷ್ಟು ಶೀಘ್ರವಾಗಿ ಈಡೇರಿಸಲು ಕೋರಿದರು.

ಸಭೆಯ ಅಧ್ಯಕ್ಷೆಯನ್ನು ವಹಿಸಿದ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾದ ಡಿ ಕೆ ಶಿವಕುಮಾರ್ ಅವರು ಸಂತ್ರಸ್ತರ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ವಾಪಸ್ ಪಡೆಯಲು ಸಭೆಯಲ್ಲಿ ತಿಳಿಸಿದಾಗ ಇದಕ್ಕೆ ಪ್ರತಕ್ರಿಯಿಸಿದ ಹಿರಿಯ ಹೋರಾಟಗಾರ ಲಕ್ಷ್ಮಣ್ ದಸ್ತಿ ಅವರು ತಾವು ತಿಳಿಸಿರುವಂತೆ ಬೆಂಗಳೂರು ಅಲ್ಲಿ ಸಭೆ ಮಾಡಿ, ನಮ್ಮ ಬೇಡಿಕೆ ಈಡೇರಿಸಲು ಅಧಿಕೃತ ನಿರ್ಣಯ ಕೈಗೊಂಡ ನಂತರ ತಮ್ಮ ಸಲಹೆಗೆ ನಾವು ಮನ್ನೀಸುತ್ತೇವೆ ಎಂದು ತಿಳಿಸಿದರು.

ಈ ಮಹತ್ವದ ಸಭೆಯಲ್ಲಿ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು, ಮತ್ತು ಕಾರಂಜ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ನಿಯೋಗದ ಈ ಸಭೆಯಲ್ಲಿ  ಕಾರಂಜ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಕರ್ ಪಾಟೀಲ್ ಹುಚಕ್ನಲ್ಲಿ, ಬೀದರ್ ಸಮಗ್ರ ಅಭವೃದ್ಧಿ ಜಂಟಿ ಕ್ರಿಯಾ ಸಮಿತಿ ವಕ್ತಾರರು ವಿನಯ್ ಕುಮಾರ್ ಮಾಲ್ಜ್,  nಮುಖಂಡರಾದ ನಾಗಶೆಟ್ಟಿ ಹಂಚೆ, ವಿನಯ್ ಮಾಲ್ಗೇ ರೋಹನ್ ಕುಮಾರ್, ಮಲ್ಲಿಕಾರ್ಜುನ್ ಬೂಸೋನೋರ, ಮಹೇಶ್ ಮುಲ್ಗೆ, ಕೇದಾರನಾಥ ಪಾಟೀಲ್, ರಾಜಪ್ಪ ಕಮಲ್ಪೂರ್, ವೀರ ಶೆಟ್ಟಿ ಮೂಲ್ಗೆ, ರಾಮ್ ರೆಡ್ಡಿ ಪಾಟೀಲ್, ಭೀಮ್ ರೆಡ್ಡಿ, ಪ್ರಕಾಶ್ ಖೇಣಿ, ಈಶ್ವರಯ್ಯ ಸ್ವಾಮಿ ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here