ಕಲಬುರಗಿ: ಕೇಂದ್ರ ಸರ್ಕಾರ ಜನರಿಗೆ ತರಬೇತಿಯ ಮೂಲಕ ಕೌಶಲಗಳನ್ನು ಕಲಿಸಿ, ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಬೇಕು ಎಂದ ಉದ್ದೇಶದಿಂದ ವಾರ್ಷಿ ಶೇ.5ರ ಕಡಿಮೆ ಬಡ್ಡಿ ದರದಲ್ಲಿ 3 ಲಕ್ಷದವರೆಗೆ ಸಾಲ ಸೌಲಭ್ಯ ನೀಡುತ್ತಿದೆ. ಈ ಯೋಜನೆಯ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ಜರುಗುತ್ತಿರುವ ‘ಪಿಎಂ ವಿಶ್ವಕರ್ಮ ಯೋಜನೆ’ಯ ತರಬೇತಿಯ 5ನೇ ದಿನವಾದ ಭಾನುವಾರ ತರಬೇತಿದಾರರಿಂದ ಕಟ್ಟಿಗೆಯಲ್ಲಿ ತಯಾರಿಸಲಾದ ವಿವಿಧ ಸಲಕರಣೆಗಳನ್ನು ವೀಕ್ಷಣೆ ಮಾಡಿ ನಂತರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಮೌನೇಶ ವಿಶ್ವಕರ್ಮ, ಶ್ರೀಕಾಂತ, ಶ್ರೀಶೈಲ್, ಮೋನಪ್ಪ, ಶರಣಪ್ಪ, ದೊಡ್ಡಬೀಮಶ್ಯಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.