ಚಿತ್ತಾಪುರ; ಪಟ್ಟಣದ ಬಸ್ ನಿಲ್ದಾಣ ಎದರುಗಡೆಯ ಸಹಾರಾ ಇಂಟರ್’ನೆಟ್ ಸೇರಿದಂತೆ ಮೂರು ಅಂಗಡಿಗಳಲ್ಲಿ ಕಳ್ಳ ತನ್ನಕ್ಕೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದ್ದು, ಸಹಾರಾ ಇಂಟರ್’ನೆಟ್ ಕನ್ನಹಾಕುವ ಮೂಲಕ ಹತ್ತು ಸಾವಿರ ರೂ. ಹಣ ಕಳವು ಮಾಡಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ.
ಪಟ್ಟಣದ ನಿವಾಸಿ ಅಮೀರ್ ಎನ್ನುವವರ ಸಹಾರಾ ಇಂಟರ್’ನೆಟ್ ಅಂಗಡಿಯೇ ಕಳ್ಳರ ಕೆಂಗಣ್ಣಿಗೆ ಗುರಿಯಾಗಿದೆ.
ಅಂಗಡಿಯ ಶೇಟರ್ ಮುರಿದು ಒಳಗಡೆ ನುಗ್ಗಿದ ಓರ್ವ ವ್ಯಕ್ತಿ ಹಣ ದೋಚುತ್ತಿರುವ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದೇ ವೆಳೆ ಬಸ್ಸಿನ ಗಾಜು ಪುಡಿ ಮಾಡಿ ಅದರಲ್ಲಿನ ರಾಡು ಹಾಗೂ ಇನ್ನಿತರ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಮೆಡಿಕಲ್, ಹೊಟೇಲ್ ಹಾಗೂ ಇಸ್ತ್ರೀ ಅಂಗಡಿಯ ಸೆಟರ್ ಕೀಲಿ ಕೈ ಮುರಿದಿದ್ದಾರೆ ಎಂದು ಮಾಹಿತಿ ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.24 ರಂದು ಯೋಗೇಶ ಎನ್ನುವವರ ಮೊಬೈಲ್ ಅಂಗಡಿಯ ಶೆಟರ್ ಮುರಿದು ಒಳಗಡೆ ನುಗ್ಗಿದ ಕಳ್ಳರು 2 ಲಕ್ಷ 50 ಸಾವಿರ ರೂ. ಹಣ ಕಳುವು ಮಾಡಿ ಪರಾರಿಯಾಗಿದ್ದರು. ಇದೀಗ ಇನ್ನೂ ಒಂದೂವರೇ ತಿಂಗಳಾಗಿಲ್ಲ ಅಷ್ಟರಲ್ಲಿಯೇ ಇದೀಗ ಎರಡನೇ ಬಾರಿ ಕಳ್ಳತನವಾಗಿದೆ. ಆದರೂ ಆರೋಪಿಗಳ ಬಂಧನವಾಗದೇ ಇರುವುದರಿಂದ ಅಂಗಡಿಯ ಮಾಲೀಕರು ಭಯಭೀತರಾಗಿದ್ದಾರೆ.
ಪಟ್ಟಣದಲ್ಲಿ ರಾತ್ರಿ ಹೊತ್ತು ಪೊಲೀಸರು ಸರಿಯಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿ ಪರಾರಿಯಾಗುತ್ತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.