ಮೂಲಭೂತ ಸೌಲಭ್ಯ ಒದಗಿಸಬೇಕೆಂದು ನಗರಸಭೆಯ ಆಯುಕ್ತರಿಗೆ ಮನವಿ

0
38

ಶಹಾಬಾದ: ಪ್ರಗತಿಪರ ಸಂಘಟನೆ ಹಾಗೂ ಒಕ್ಕೂಟ ಸಮಿತಿಯ ಪದಾಧಿಕಾರಿಗಳು ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಮರಿಯಪ್ಪ ಹಳ್ಳಿ ನೇತೃತ್ವದಲ್ಲಿ ನಗರಸಭೆಯ ಪ್ರಭಾರ ಆಯುಕ್ತರು ಐಎಎಸ್ ಅಧಿಕಾರಿ ಗಜಾನನ ಬಾಳೆ ಅವರ ಜತೆ ನಗರದ ಮೂಲಭೂತ ಸೌಲಭ್ಯ ,ರಾಜ್ಯ ಹೆದ್ದಾರಿ ಕಾಮಗಾರಿ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮರಿಯಪ್ಪ ಹಳ್ಳಿ ಮಾತನಾಡಿ, ನಗರದಿಂದ ಹಾದು ಹೋಗಿರುವ ರಾಜ್ಯ ಹೆದ್ದಾರಿ ಹದಗೆಟ್ಟು ಹೋಗಿದ್ದರಿಂದ ಸಾಕಷ್ಟು ಜನರು ತೊಂದರೆಗೆ ಒಳಗಾಗಿದ್ದಾರೆ.ಧೂಳಿನಿಂದ ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ.ಈಗಾಗಲೇ ಹೋರಾಟ ಮಾಡಿದ್ದೆವೆ.ಈ ಕುರಿತು ಗಮನಹರಿಸಬೇಕೆಂದುಮನವಿ ಮಾಡಿದಲ್ಲದೇ, ನಗರದಲ್ಲಿ ಚರಂಡಿಗಳು ತುಂಬಿಕೊಂಡಿವೆ.ಗಬ್ಬು ವಾಸನೆ ಬೀರುತ್ತಿವೆ.ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.

Contact Your\'s Advertisement; 9902492681

ಸಾರ್ವಜನಿಕರಿಗೆ ಶೌಚಾಲಯ ಹಾಗೂ ಮೂತ್ರವಿಲ್ಲ.ಆ ಬಗ್ಗೆ ವಿಶೇಷವಾಗಿ ಗಮನ ನೀಡಬೇಕು. ಬೀದಿ ದೀಪಗಳ ಸರಿಯಾದ ನಿರ್ವಹಣೆಯಾಗುತ್ತಿಲ್ಲ.ಅಲ್ಲದೇ ನಗರದಲ್ಲಿ ಬೀದಿ ನಾಯಿಗಳ ಹಾಗೂ ಹಂದಿಗಳ ಕಾಟ ವಿಪರೀತವಾಗಿದೆ.ಈಗಾಗಲೇ ವಾರದ ಹಿಂದಷ್ಟೇ ಹಳೆಶಹಾಬಾದನ ಮೇಲೆ ನಾಯಿಗಳ ಗುಪೊಂದು ಮಹಿಳೆಯ ಮೇಲೆ ದಾಳಿ ಮಾಡಿವೆ.ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಕೂಡಲೇ ತಾವು ಸಾರ್ವಜನಿಕರ ಸಮಸ್ಯೆಗಳನ್ನು ತಮ್ಮ ಅವಧಿಯಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

ತಕ್ಷಣವೇ ಸ್ಪಂದಿಸಿದ ನಗರಸಭೆಯ ಪ್ರಭಾರ ಆಯುಕ್ತರು ಐಎಎಸ್ ಅಧಿಕಾರಿ ಗಜಾನನ ಬಾಳೆ, ಲೋಕಫಯೋಗಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಹೆದ್ದಾರಿ ಕಾಮಗಾರಿಯ ಕುರಿತು ಮಾಹಿತಿ ಪಡೆದರು.

ಅಲ್ಲದೇ ಎರಡು ದಿನಗಳಲ್ಲಿ ಬಸವೇಶ್ವರ ವೃತ್ತದಿಂದ ಕನಕದಾಸರ ವೃತ್ತದವರೆಗಿನ ರಸ್ತೆ ಕಾಮಗಾರಿ ಪ್ರಾರಂಭ ಮಾಡುತ್ತೆವೆ. ವಾಡಿ ವೃತ್ತದಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಸದ್ಯದಲ್ಲೇ ಪ್ರಾರಂಭ ಮಾಡುತ್ತೆವೆ ಎಂದು ತಿಳಿಸಿದ್ದಾರೆ ಎಂದರು.

ನನ್ನ ವ್ಯಾಪ್ತಿಗೆ ಬರುವ ಚರಂಡಿ ಸ್ವಚ್ಛತೆ, ಶೌಚಾಲಯ ನಿರ್ಮಾಣ, ಹಂದ-ನಾಯಿಗಳ ನಿಯಂತ್ರಣ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ನಿರ್ವಹಣೆ ಇತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೆನೆ ಎಂದು ಸಂಘಟನಾಕಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಗುಂಡಮ್ಮ ಮಡಿವಾಳ, ಶರಣಗೌಡ ಪಾಟೀಲ,ಜಗನ್ನಾಥ.ಎಸ್.ಹೆಚ್, ಮಹ್ಮದ್ ಮಸ್ತಾನ, ಯಲ್ಲಾಲಿಂಗ ಹೈಯ್ಯಾಳಕರ್, ಮಹೆಬೂಬ ಮದ್ರಿ,ಅಬ್ದುಲ್ ಗನಿ ಸಾಬೀರ್,ಮಲ್ಲಣ್ಣ ಮರತೂರ,ಮಲ್ಲಿಕಾರ್ಜುನ ಹಳ್ಳಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here