ಸುರಪುರ: ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ (ಸಿಎಸ್‍ಐಆರ್) ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರೀಯಲ್ ರಿಸರ್ಚ್ ಸಂಸ್ಥೆಯ (ಎನ್.ಟಿ.ಎ)ನ್ಯಾಷನಲ್ ಟೆಸ್ಟ್ ಏಜೆನ್ಸಿಯ ಪರೀಕ್ಷೆಯಲ್ಲಿ ದೇಶದಲ್ಲಿಯೇ 196ನೇ ರ್ಯಾಂಕ್ ಪಡೆಯುವ ಮೂಲಕ ಸುರಪುರ ನಗರದ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಬೊಮ್ಮನಹಳ್ಳಿ ಇವರ ಪುತ್ರ ವೇಣುಗೋಪಾಲ ನಾಯಕ ಸಾಧನೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸಿಎಸ್‍ಐಆರ್ ಎನ್ನುವುದು ವಿಜ್ಞಾನ ಮತ್ತು ತಂತ್ರಜ್ಞಾನದ ವ್ಯಾಪಕ ಶ್ರೇಣಿಯನ್ನು ಹೊಂದಿರುವ ಸಂಸ್ಥೆಯಾಗಿದ್ದು,ಸಾಗರ ಶಾಸ್ತ್ರ,ಭೂ ಭೌತಶಾಸ್ತ್ರ, ರಾಸಾಯನಿಕ ಔಷಧಗಳು,ಜೀನೋಮಿಕ್ಸ್,ಜೈವಿಕ ತಂತ್ರಜ್ಞಾನ,ಏರೋನಾಟಿಕ್ಸ್ ಉಪಕರಣ,ಮಾಹಿತಿ ತಂತ್ರಜ್ಞಾನ,ಪರಿಸರ,ಆರೋಗ್ಯ,ಕುಡಿಯುವ ನೀರು,ಆಹಾರ,ವಸತಿ,ಕೃಷಿ ಸೇರಿದಂತೆ ಮಾನವ ಸಂಪನ್ಮೂಲ ಅಭಿವೃಧ್ಧಿಯಲ್ಲಿ ಸಿಎಸ್‍ಐಆರ್ ಮಾತ್ರ ಗಮನಾರ್ಹವಾದುದಾಗಿದೆ.
ಇಂತಹ ಪ್ರತಿಷ್ಠಿತ ಸಂಸ್ಥೆಯ ಪರೀಕ್ಷೆಯಲ್ಲಿನ ವೇಣುಗೋಪಾಲ ನಾಯಕ ಅವರ ಸಾಧನೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಸದ್ಯ ಇದೇ ವಿಷಯದ ಕುರಿತು ಧಾರವಾಡದಲ್ಲಿ ಪಿ.ಹೆಚ್.ಡಿ ಸಂಶೋಧನೆಯಲ್ಲಿ ತೊಡಗಿದ್ದಾನೆ ಎಂದು ಇವರ ತಂದೆ ವೆಂಕೋಬ ದೊರೆ ಹೆಮ್ಮೆಯಿಂದ ತಿಳಿಸಿದ್ದಾರೆ.