ನಾಳೆ `ಬಿಸಿಲನಾಡಿನ ಬೆಳದಿಂಗಳು’ ಕೃತಿ ಲೋಕಾರ್ಪಣೆ

0
19

ಕಲಬುರಗಿ; ರಾಷ್ಟ್ರಕೂಟ ಪುಸ್ತಕ ಮನೆ, ಸೇಡಂ ಹಾಗೂ ಕವಿರಾಜಮಾರ್ಗ ಪ್ರಕಾಶನ ಕಲಬುರಗಿ ಸಹಯೋಗದಲ್ಲಿ ಮಾ.3 ರಂದು ಸಂಜೆ 4 ಕ್ಕೆ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಹಿರಿಯ ಮಕ್ಕಳ ಸಾಹಿತಿ ಶ್ರೀ ಎ.ಕೆ.ರಾಮೇಶ್ವರ ಅವರ `ಸಾಹಿತ್ಯ ಸಂಭ್ರಮ’ದಲ್ಲಿ ಮಹಿಪಾಲರೆಡ್ಡಿ ಮುನ್ನೂರ್ `ನುಡಿಸಾರಥ್ಯ’ದ `ಬಿಸಿಲನಾಡಿನ ಬೆಳದಿಂಗಳು’ ಎಂಬ ವಿಶಿಷ್ಟ ಕೃತಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಲೋಕಾರ್ಪಣೆ ಮಾಡುವರು ಎಂದು ಆಯೋಜಕರಾದ ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಎ.ಕೆ.ರಾಮೇಶ್ವರ ಬರೆದ `ಕೆಂಪು ಗುಲಾಬಿಯ ಕಂಪು’ ಕೃತಿಯನ್ನು ಸಹ ಬಿಡುಗಡೆಯಾಗಲಿದ್ದು, ಸಮಾರಂಭವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕೆ ಕೆ ಆರ್ ಡಿ ಬಿ, ಕಲಬುರಗಿ ಹಾಗೂ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಧರ್ಮಸಿಂಗ್ ವಹಿಸುವರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಅಫಜಲಪುರ ಶಾಸಕ ಎಂ.ವೈ.ಪಾಟೀಲ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ತಿನ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಭಾಗವಹಿಸುವರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಡಾ.ವಿಕ್ರಮ ವಿಸಾಜಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ವಿಭಾಗದ ಸದಸ್ಯೆ ಡಾ.ಜಯದೇವಿ ಗಾಯಕವಾಡ ಅವರು ಕೃತಿಗಳ ಕುರಿತು ಮಾತನಾಡುವರು.

ಇದೇ ಸಂದರ್ಭದಲ್ಲಿ, ಈ ನಾಡನ್ನು ಸಾಹಿತ್ಯದ ಮೂಲಕ ಸಮೃದ್ಧಗೊಳಿಸಿರುವ ಶ್ರೀ ಎ.ಕೆ.ರಾಮೇಶ್ವರ ಅವರಿಗೆ ಕಲಬುರಗಿ ನೆಲ ಧನ್ಯವಾದ ಹೇಳುವ ಹಿನ್ನೆಲೆಯಲ್ಲಿ `ಒಂದು ಲಕ್ಷ ರೂ.ಹಮ್ಮಿಣಿ’ ಕೊಟ್ಟು ಗೌರವಿಸಲಾಗುವುದು ಎಂದು ತಿಳಿಸಿರುವ ಅವರು, ದಾಸೋಹಿಗಳಾದ ಬಿ.ಎಸ್.ದೇಸಾಯಿ ದಂಪತಿಗಳಿಗೆ ವಿಶೇಷ ಸನ್ಮಾನ ಹಾಗೂ `ಬಿಸಿಲನಾಡಿನ ಬೆಳದಿಂಗಳು’ ಕೃತಿಯ ಲೇಖಕರಿಗೆ ಮತ್ತು ಸಮಾರಂಭಕ್ಕೆ ಸಹಕರಿಸಿದ ಸಹೃದಯರಿಗೆ ಆತ್ಮೀಯ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here