ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಚುನಾವಣೆ (ಮಾರ್ಚ 2024) ಕುರಿತು ಚಂದ್ರಶೇಖರ ಹಿರೇಮಠ ಕರೆದ ಚಿಂತನ-ಮಂಥನ ಕಾರ್ಯಕ್ರಮವು ಇಂದು ಬೆಳಿಗ್ಗೆ 11 ಗಂಟೆಗೆ ಹಿಂದಿ ಪ್ರಚಾರ ಸಭೆಯಲ್ಲಿ ಜರುಗಿತು.
ಸಭೆಯನ್ನು ಉದ್ದೇಶಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಚಂದ್ರಶೇಖರ ಹಿರೇಮಠ ಈ ಭಾಗದ ಅತಿ ಪ್ರತಿಷ್ಠಿತ, ಬಹುದೊಡ್ಡ ಚುನಾವಣೆ ಜನರಿಗೆ ಕೆಟ್ಟದಾಗಿ ಚರ್ಚೆಯಾಗದೆ ಚುನಾವಣೆ ಸತ್ಯ, ಪ್ರಾಮಾಣಿಕವಾಗಿ ನಡೆಯುವಂತೆ ಇತರ ಚುನಾವಣೆಗೆ ಮಾದರಿಯಾಗುವಂತೆ ನಡೆಸಬೇಕೆಂದು ತಿಳಿಸಿದರು.
ಚುನಾವಣೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ
ಯಾವುದೇ ಆಮಿಷ್ಯಗಳಿಗೆ ಬಲಿಯಾಗದೆ ಎಲ್ಲರು ಧೈರ್ಯವಾಗಿ ಮತ ಚಲಾಯಿಸಬೇಕೆಂದು ತಿಳಿಸಿದರು.
ಸಭೆಯನ್ನು ಉದ್ಘಾಟಿಸಿದ ಹಿರಿಯ ಸದಸ್ಯರಾದ ಡಾ.ಸುಭಾಷ ಶಹಾ ಮಾತನಾಡಿ, ದಿ.ಮಹಾದೇವಪ್ಪ ರಾಂಪೂರೆ ಅವರ ಒಡನಾಡಿಯಾಗಿ, ತಾವು ಆಡಳಿತ ಮಂಡಳಿಯ ಸದಸ್ಯರಾಗಿ ಮಾಡಿದ ಅನೇಕ ಕೆಲಸಗಳನ್ನು ನೆನೆಸಿಕೊಂಡರು ಸಿದ್ರಾಮಪ್ಪ ಧಂಗಾಪೂರ (ಕೃಷಿ ಸಮಾಜ ಅಧ್ಯಕ್ಷರು), ಶಿವರಾಜ ಪಾಟೀಲ ಮಹಾಗಾಂವ ಅವರು ಮಾತನಾಡಿ, ಚುನಾವಣೆಗಳು ಮೊದಲಿನ ರೀತಿಯಲ್ಲಿ ನಡೆದು ಸಂಸ್ಥೆಯ ಘನತೆ ಹಾಗೂ ಗೌರವ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಒತ್ತಿ ಹೇಳಿದರು.
ಸಂಸ್ಥೆಯ ಸದಸ್ಯರುಗಳಾದ ಡಾ. ಶರಣಗೌಡ ಪಾಟೀಲ, ಡಾ. ಅವಂತಿ, ಡಾ.ವಿಜಯಕುಮಾರ, ಡಾ. ಶರಣಬಸಪ್ಪ ಹರವಾಳ, ಶಿವಶರಣಪ್ಪ ಸೀರಿ, ಬಿಲ್ಲಾಡ್ ಅವರುಗಳು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಬಸವರಾಜ ಭೀಮಳ್ಳಿ, ಜಿ.ಡಿ. ಅಣಕಲ್, ಬಸವರಾಜ ಕಾಮರಡ್ಡಿ ಮಾತನಾಡಿ ಹಿರಿಯರು ಕಟ್ಟಿಬೆಳೆಸಿದ ಈ ಸಂಸ್ಥೆಯು ಇನ್ನೂ ಹೆಚ್ಚಿನ ಕೆಲಸ ಮಾಡಲಿ ಎಂದು ಹಾರೈಸಿದರು. ಅಲ್ಲದೆ ಈ ಸಭೆಯನ್ನು ಕರೆದು ಸದಸ್ಯರಲ್ಲಿ ಜಾಗೃತೆ ಮೂಡಿಸಿದ ಚಂದ್ರಶೇಖರ ಹಿರೇಮಠ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಸುಮಾರು 300 ಸದಸ್ಯರು ಭಾಗವಹಿಸಿ ತಮ್ಮ ಸಲಹೆ-ಸೂಚನೆಗಳನ್ನು ವ್ಯಕ್ತಪಡಿಸಿದರು.
ವಿಧಾನಪರಿಷತ್ತ ಸದಸ್ಯ ಶಶೀಲ ಜಿ. ನಮೋಶಿ ಅವರು ಮಾತನಾಡಿ ಸದ್ಯ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸಿದ್ದು, ಈ ಬಾರಿ ನಾನು ಗೆಲುವು ಸಾಧಿಸಿದರೆ ಹೆಚ್ಚಿನ ಸಮಯವನ್ನು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ನೀಡಿ, ಬಸವೇಶ್ವರ ಆಸ್ಪತ್ರೆ ಸುಧಾರಿಸಿ, ಬೆಳೆಸುವುದಾಗಿ ಅಲ್ಲದೆ ಶಿಕ್ಷಣ ಸಂಸ್ಥೆಯ ಎಲ್ಲಾ ಕಾಲೇಜುಗಳನ್ನು ಸುಧಾರಿಸಿ ಈ ಭಾಗದ ಎಲ್ಲ ಜನರಿಗು ಶಿಕ್ಷಣ ಸಿಗಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಡಾ. ಆನಂದ ಗಾರಂಪಳ್ಳಿ ಸ್ವಾಗತಿಸಿದರು. ಡಾ. ವೀರಭದ್ರ ನಂದ್ಯಾಳ ಅವರು ವಂದಿಸಿದರು.