ಸರಕಾರಿ ಮಹಿಳಾ ಪ್ರಥಮ ದರ್ಜೆಕಾಲೇಜಿನ ಸ್ನಾತಕೋತ್ತರ ಇತಿಹಾಸ ವಿಭಾಗದಲ್ಲಿ ವಿಶೇಷ ಉಪನ್ಯಾಸಕಾರ್ಯಕ್ರಮ

0
96

ಕಲಬುರಗಿ: ನಗರದ ಹಳೇ ಜೇವರ್ಗಿರಸ್ತೆಯಲ್ಲಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಇತಿಹಾಸ ವಿಭಾಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ವಿಶ್ವವಿದ್ಯಾಲಯದಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ.ವಾಯ್. ಎಚ್. ನಾಯಕವಾಡಿಯವರು ಹೈದ್ರಾಬಾದ್‌ ಕರ್ನಾಟಕದ ಇತಿಹಾಸ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಹೈದ್ರಾಬಾದ್‌ ಕರ್ನಾಟಕ ಎಂಬ ಹೆಸರಿನ ಬಳಕೆಯು ಡಾ.ಎನ್.ರಮೇಶ ಅವರ ಹೈದ್ರಾಬಾದರಾಜ್ಯದ ಇತಿಹಾಸ ಎಂಬ ಕೃತಿಯೊಂದಿಗೆ ಪ್ರಾರಂಭವಾಗಿ ಹೈದ್ರಾಬಾದ್‌ ರಾಜ್ಯದ ನಿಜಾಮನ ಆಳ್ವಿಕೆ ಕೊನೆಗಾಣಿಸಿ ಭಾರತ ಒಕ್ಕೂಟದಲ್ಲಿ ಸೇರಿಸಬೇಕೆಂಬ ವಿಮೋಚನಾ ಚಳುವಳಿಕಾರರ ಒತ್ತಾಸೆಯಿಂದ ಈ ಭಾಗವನ್ನು ಹೈದ್ರಾಬಾದ್‌ಕರ್ನಾಟಕ ಎಂದು ಕರೆಯಲಾರಂಭಿಸಿದರು.

Contact Your\'s Advertisement; 9902492681

ಬೀದರ, ಗುಲಬರ್ಗಾ ಮತ್ತುರಾಯಚೂರು ಜಿಲ್ಲೆಗಳು ನಿಜಾಂನ ಆಳ್ವಿಕೆಗೆ ಒಳಪಟ್ಟಿದ್ದವು ಬಳ್ಳಾರಿ ಮದ್ರಾಸ್ ಪ್ರೆಸಿಡೆನ್ಸಿಯ ಒಂದು ಭಾಗವಾಗಿತ್ತು. ಏಕೀಕರಣದ ನಂತರ ಕಂದಾಯ ವಿಭಾಗದಲ್ಲಿ ಬಳ್ಳಾರಿ ಒಳಗೊಂಡಿದ್ದರಿಂದ ಅದು ಈಗ ಹೈದ್ರಾಬಾದ್‌ಕರ್ನಾಟಕದ  ಭಾಗವಾಗಿದೆ. ಈ ಭಾಗವನ್ನು ಬ್ರಿಟಿಷ್ ದಾಖಲೆಗಳಲ್ಲಿ ಕೆನರಿಸ್ ಡಿಸ್ಟ್ರಿಕ್ಸ್ (ಕನ್ನಡದ ಜಿಲ್ಲೆಗಳು) ಎಂದು ಕರೆಯಲಾಗುತ್ತಿತ್ತು. ಈ ಭಾಗದ ಹಿಂದುಳಿಯುವಿಕೆಗೆ ಕೇವಲ ನಿಜಾಮರು ಮಾತ್ರ ಕಾರಣರಲ್ಲ ಅಂದಿನ ಬಹುಪಾಲು ಪಾಳೇಯಗಾರರು, ಸಾಮಂತರು, ಜಮೀನುದಾರರು, ಭೂ ಹಿಡುವಳಿದಾರರು ಮತ್ತು ಊಳಿಗಮಾನ್ಯ ವವ್ಯಸ್ಥೆಯೇ ಕಾರಣ ನಿಜಾಂ ದೊರೆಗಳ ಹೆಸರಿನಲ್ಲಿ ಬಹುಪಾಲು ಸಾಮಾನ್ಯ ಜನರ ಶೋಷಣೆ ಮಾಡಿದರು ಮತ್ತು ಹಿಂದುಳಿಯುವಿಕೆಗೆ ಕಾರಣರಾದರು. ಒಂದು ವೇಳೆ ನಿಜಾಮರೇ ಹಿಂದುಳಿಯುವಿಕೆ ಕಾರಣವೆಂದಾದರೆ ೧೯೪೮ ರಲ್ಲೇ ನಿಜಾಮರ ಆಳ್ವಿಕೆ ಕೊನೆಯಾಯಿತು  ಏಕೆ ಪ್ರಗತಿಯಾಗಲಿಲ್ಲ ಅದಕ್ಕೆರಾಜಕೀಯ ಇಚ್ಚಾಶಕ್ತಿ, ರಾಜಧಾನಿಯಿಂದಇರುವದೂರ ಇವೇ ಮುಂತಾದ ಕಾರಣಗಳನ್ನು ಪಟ್ಟಿ ಮಾಡಬಹುದು.

ಹೈದ್ರಾಬಾದ್‌ಕರ್ನಾಟಕ ಕಲ್ಯಾಣಕರ್ನಾಟಕ ವಾದರೂ ಮನಸ್ಥಿತಿ ಬದಲಾಗದಿದ್ದರೆ ಪ್ರಗತಿಯಾಗುವುದಿಲ್ಲ ಪ್ರಗತಿಯೆಂದರೆರಸ್ತೆ, ಕಟ್ಟಡಗಳ ನಿರ್ಮಾಣವೊಂದೆಅಲ್ಲ ಶೈಕ್ಷಣಿಕ, ಆರ್ಥಿಕ, ಸಾಮಾಜಿಕಎಲ್ಲಾ ರಂಗಗಳಲ್ಲಿ ಪ್ರಗತಿಯಾಗಬೇಕು ಮಾನವ ಸಂಪನ್ಮೂಲದ ಪ್ರಗತಿಯೇ ನಿಜವಾದ ಪ್ರಗತಿದೇಶವೆಂದರೆಕಲ್ಲು ಮಣ್ಣು ಅಷ್ಟೇ ಅಲ್ಲದೇಶವೆಂದರೆ ಮನುಷ್ಯರು (ದೇಶಮಂಟೆ ಮಟ್ಟಿಕಾದೋಯ್‌ದೇಶಮಂಟೆ ಮನುಷುಲೊಯ್) ಎಂಬ ಕವಿವಾಣಿಯಂತೆ ಸಮಗ್ರ ಪ್ರಗತಿಯೇ ನಿಜವಾದ ಪ್ರಗತಿಯ ಮಾನದಂಡ. ಹೈದ್ರಾಬಾದ್ ಪ್ರಾದೇಶಿಕ ಅಭಿವೃದ್ಧಿ ಮಂಡಳಿ, ೩೭೧ಜೆ ಮುಂತಾದ ಮೂತಿಗೆ ಬೆಣ್ಣೆಒರೆಸುವ ತಂತ್ರಗಳಿಂದ ರಾಜಕಾರಣಿಗಳು, ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಕಳ್ಳ ದಂಧೆಕೋರರುಉದ್ಧಾರವಾಗಿದ್ದಾರೆಯೇ ಹೊರತು ಈ ಭಾಗವಲ್ಲಎಂದು ಮಾರ್ಮಿಕವಾಗಿ ನುಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿಎಲ್ಲರನ್ನೂ ಸ್ವಾಗತಿಸಿದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಶಶಿಶೇಖರ ರೆಡ್ಡಿಯವರುಕಪೋಲಕಲ್ಪಿತಇತಿಹಾಸಓದದೆ ನೈಜ ಸಂಗತಿಯನ್ನುಅರಿಯಬೇಕುಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚು ಆಧ್ಯಯನಶೀಲರಾಗಬೇಕೆಂದು ಹೇಳಿದರು. ಆಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಖಂಡೇರಾವ್ ವಿಶೇಷ ಉಪನ್ಯಾಸಗಳ ಉಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದುಕರೆ ನೀಡಿದರು. ಸ್ನಾತಕೋತ್ತರ ವಿಭಾಗದ ಸಂಯೋಜಕರಾದಡಾ.ಭೀಮಣ್ಣಾಘನಾತೆಯವರು ವಂದಿಸಿದರು. ಪ್ರಾಧ್ಯಾಪಕರಾದ ಪ್ರೊ.ಪ್ರಕಾಶ ಪಾಟೀಲ್, ಡಾ.ಗಾಂಧೀಜಿ ಮೊಳೆಕೆರೆ, ಡಾ.ಸಂತೋಷದೊಡ್ಮನಿ, ಡಾ.ಶಶಿಧರ್ ಮೇಳಕುಂದಿ ಉಪಸ್ಥಿತರಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here