ರಂಗ ಶಿಕ್ಷಣದಿಂದ ಮನೋಬಲ ಹೆಚ್ಚಳ: ಪ್ರೊ. ಗಿರೀಶ ಬೆಟ್ಟಕೋಟೆ

0
63

ಕಲಬುರಗಿ : ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯನುಸಾರ ಪ್ರದರ್ಶಕ ಕಲೆಗಳಿಗೆ ಹೆಚ್ಚಿನ ಮಹತ್ವದೊರೆಯಲಿದೆ ಎಂದು ಮೈಸೂರಿನ ಡಾ. ಗಂಗೂಬಾಯಿ ಹಾನಗಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಗಿರೀಶ ಬೆಟ್ಟಕೋಟೆ ಹೇಳಿದರು.

ಕಲಬುರಗಿ ರಂಗಾಯಣ ಆಯೋಜಿಸಿದ್ದ ರಂಗತರಬೇತಿ ಶಿಬಿರದಲ್ಲಿ ಸಿದ್ಧಪಡಿಸಿದ ಮೋಹಪುರ ನಾಟಕದಪ್ರದರ್ಶನಕ್ಕೆಚಾಲನೆ ನೀಡಿ ಮಾತನಾಡಿದ ಅವರು, ರಂಗ ಶಿಕ್ಷಣದಿಂದ ವ್ಯಕ್ತಿಗಳ ಮನೋಬಲ ಹೆಚ್ಚಳವಾಗುತ್ತದೆ. ಕಲಬುರಗಿ ರಂಗಾಯಣದಿಂದ ರಂಗ ಶಿಕ್ಷಣ ಕೋರ್ಸ್ ಆರಂಭಿಸುವುದಾದರೆ, ಅದಕ್ಕೆ ವಿಶ್ವವಿದ್ಯಾಲಯದಿಂದ ಮಾನ್ಯತೆನೀಡಲಾಗುವುದು ಎಂದು ಹೇಳಿದರು.

Contact Your\'s Advertisement; 9902492681

ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ಜಿಲ್ಲೆಯ ಕನ್ನಡ ಸಾಹಿತ್ಯಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನೋಹರಮಸ್ಕಿ, ಮಸ್ಕಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಕರಗೌಡ ಪಾಟೀಲ, ಹಿರಿಯ ಸಾಹಿತಿ ಗುಂಡೂರಾವ ದೇಸಾಯಿ, ರಂಗನಿರ್ದೇಶಕರಾದ ವಿಶ್ವರಾಜ ಪಾಟೀಲ, ಶಾಂತವೀರಯ್ಯ ಮಠಪತಿ, ರಂಜಾನಸಾಬ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ದೊಡ್ಡಮನಿ ಇತರರು ಉಪಸ್ಥಿತರಿದ್ದರು.

ಮೋಹಪುರ ನಾಟಕ ಪ್ರದರ್ಶನ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸರ್ಕಾರಿ ನೌಕರರ ಸಂಘಪ್ರಸ್ತುತಪಡಿಸಿದಪ್ರಭಾಕರ ಜೋಶಿ ರಚಿಸಿದ ಕಾದಂಬರಿ ಆಧಾರಿತಮೋಹಪುರ ನಾಟಕವನ್ನು ರಂಜಾನ ಸಾಬ ಉಳ್ಳಾಗಡ್ಡಿ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here