ಕಲಬುರಗಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಅಫ್ಜಲಪೂರನಲ್ಲಿ ತಾಲೂಕಾ ಆಸ್ಪತ್ರೆ ಇಎಂಆರ್‍ಐ ಗ್ರೀನ್ ಹೆಲ್ತ್ ಸರ್ವಿಸಸ್ ಕಂಪನಿ ವತಿಯಿಂದ ಮಹಿಳಾ ದಿನಾಚರಣೆಯನ್ನು ಮಹಿಳೆಯರಿಂದ ಕೇಕ್ ಕಟ್ ಮಾಡುವದರ ಮೂಲಕ ಆಚರಿಸಲಾಯಿತು.
108 ಆಂಬುಲೆನ್ಸ್ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಜ್ಜನಶೆಟ್ಟಿ ಮಾತನಾಡುತ್ತಾ ಹೆಣ್ಣು ಸಂಸಾರದ ಕಣ್ಣಾಗಿದ್ದು ಕ್ರೀಡೆ, ಸಾಹಿತ್ಯ, ಕಲೆ ಸೇರಿ ನಾನಾ ಕ್ಷೆತ್ರದಲ್ಲಿ ಸಾಧನೆಯ ಶಿಖರ ಏರಿದ್ದಾಳೆ. ಆರೋಗ್ಯ ಕ್ಷೆತ್ರದ 108 ಆಂಬುಲೆನ್ಸ್ ವಾಹನದಲ್ಲಿ ಹಗಲು, ರಾತ್ರಿಯನ್ನದೆ ಮಹಿಳಾ ಸಿಬ್ಬಂದಿ ತಮ್ಮ ಕರ್ತವ್ಯ ದಲ್ಲಿ ನಿರತರಾಗುವ ಕಾರ್ಯ ಶ್ಲಾಘನಿಯ ಎಂದು ತಿಳಿಸಿದರು.
ತಾಲೂಕ ಸಾರ್ವಜನಿಕ ಆಸ್ಪತ್ರೆ ವೈಧಾಧಿಕಾರಿ ಡಾ. ವಿನೋದ್, 108 ಆಂಬುಲೆನ್ಸ್ ಸೇವೆಯ ಸಿಬ್ಬಂದಿಗಳಾದ ಖಜಾಪ್ಪಾ, ಸುಧಾಕರ್, ಅನ್ಸಿರಭಾನು, ಶರಣಪ್ಪಾ, ಭಾಗಣ್ಣ ಸಏರಿದಂತೆ ತಾಲೂಕ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗಳು ಇದ್ದರು.