ಎಚ್ಕೆಇ ಸಂಸ್ಥೆ ಆಂತರಿಕ ವಿಷಯ ಬೀದಿಗೆ ತಂದವರಿಗೆ ಪಾಠ ಕಲಿಸಿ: ಡಾ. ಕಾಮರೆಡ್ಡಿ

0
16

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್ಕೆಇ)ಯ ಆಂತರಿಕ ವಿಷಯಗಳನ್ನು ಬೀದಿಗೆ ತಂದವರಿಗೆ ಕಡಿವಾಣ ಹಾಕುವ ಮುಖಾಂತರ ಮತದಾರರು ಬದಲಾವಣೆಗೆ ನಾಂದಿ ಹಾಡಬೇಕೆಂದು ಎಚ್ಕೆಇ ಅಧ್ಯಕ್ಷ ಸ್ಥಾನಕ್ಕೆ ಪೆನಾಲ್ ದೊಂದಿಗೆ ಸ್ಪರ್ಧಿಸಿರುವ ಡಾ. ಎಸ್. ಬಿ.‌ಕಾಮರೆಡ್ಡಿ ಮನವಿ ಮಾಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಸಂಸ್ಥೆ ವಿಷಯವನ್ನು ಬೀದಿಗೆ ತಂದವರ್ಯಾರು ಎಂಬುದು ಸಮಗ್ರವಾಗಿ ಅವಲೋಕಿಸಿ ಮತದಾರರು ಹತ್ತಾರು ಸಲ ಯೋಚಿಸಿ ತಮ್ಮ ಹಕ್ಕು ಚಲಾಯಿಸಬೇಕು. ಅದಲ್ಲದೇ ಸಂಸ್ಥೆ ಆಡಳಿತ ಕೇಂದ್ರಿಕೃತ ವಾಗುತ್ತಿರುವುದನ್ನು ಸಹ ತಪ್ಪಿಸಬೇಕೆಂದರು.

Contact Your\'s Advertisement; 9902492681

5000 ನೌಕರರು ಹೊಂದಿರುವ ಸಂಸ್ಥೆ ಯನ್ನು ಸದೃಢ ಮಾಡುವುದು ನಮ್ಮ‌ಮುಂದಿರುವ ದೊಡ್ಡ ಸವಾಲಾಗಿದೆ.ಇದೆಲ್ಲ ಸುಧಾರಣೆ ಮಾಡುವ ಶಕ್ತಿ ಮತದಾರರು ಹೊಂದಿದ್ದಾರೆ. ಹೀಗಾಗಿ ಈ ಸಲ ಯೋಚಿಸಿ ಬದಲಾವಣೆಗೆ ನಾಂದಿ ಹಾಡಿ ಎಂದು ಡಾ.‌ಕಾಮರೆಡ್ಡಿ‌ ಮನವಿ
ಮಾಡಿದರು.

ಎಚ್ಕೆಇ ಸಂಸ್ಥೆ ಅಭಿವೃದ್ಧಿಯ ಪ್ರಣಾಳಿಕೆ ಸಾಕಾರಕ್ಕೆ ಡಾ. ಶಪಥ: ನಾನು ಎಲ್ಲರ ಹಾಗೆ ಹೇಳುವ ಬದಲು. ಸಂಸ್ಥೆ ಅಭಿವೃದ್ಧಿಗಾಗಿ ಘೋಷಣೆ ಮಾಡಲಾದ ಪ್ರಣಾಳಿಕೆ ಸಾಕಾರ ಕ್ಕೆ ಶಪಥ ಮಾಡುವುದಾಗಿ ಇದೇ ಸಂದರ್ಭದಲ್ಲಿ ಡಾ.ಎಸ್. ಬಿ. ಕಾಮರೆಡ್ಡಿ ಹೇಳಿದರು.

ಎಲ್ಲರ ಹಾಗೆ ಎಲ್ಲ ಮಾಡುತ್ತೇನೆ ಎಂದು ಮುಂದೆ ಹೋಗುವ ಜಾಯಮಾನ ತಮ್ಮದಲ್ಲ. ಹೀಗಾಗಿ ಸಂಸ್ಥೆಗೆ ಆದ್ಯತೆ ಮೇರೆಗೆ ಹೊಸ ಸದಸ್ಯರ ನೇಮಕ ಮಾಡಿಕೊಳ್ಳುವುದು, ಸಂಸ್ಥೆ ಸದಸ್ಯರಿಗೆ ಆರೋಗ್ಯ ಯೋಜನೆ ಜಾರಿ, ಸಂಸ್ಥೆಯ ಸಿಬ್ಬಂದಿಗೆ ಒಂದು ಸಂಸ್ಥೆ ಒಂದು ಸಿಬ್ಬಂದಿ ಒಂದು ವೇತನ ಯೋಜನೆ ಜಾರಿ, ಪಾರದರ್ಶಕ ಆಡಳಿತ ಸೇರಿ ಪ್ರಕಟಿಸಲಾಗಿರುವ ಎಲ್ಲ ಪ್ರಣಾಳಿಕೆ ಕಾರ್ಯಾನುಷ್ಠಾನಗೊಳಿಸಲು ಕಲಬುರಗಿ ಆರಾಧ್ಯದೈವ ಶರಣಬಸವೇಶ್ವರ ದೇವರ ಮೇಲೆ ಪ್ರಮಾಣ ಮಾಡುವುದಾಗಿ ಡಾ. ಕಾಮರೆಡ್ಡಿ ಘೋಷಿಸಿದರು.

ಆಡಳಿತ ಮಂಡಳಿ ಸದಸ್ಯರಾಗಿದ್ದರೂ ತಮ್ಮ ಕೈ ಕಟ್ಟಿ ಹಾಕಲಾಗಿತ್ತು.‌ ಅಧ್ಯಕ್ಷ ರ ಸರ್ವಾಧಿಕಾರಿ ಧೋರಣೆ ಖಂಡಿಸಿ ಹಾಗೂ ಕಳೆದ ಚುನಾವಣೆ ಸಂದರ್ಭದಲ್ಲಿ ಮುಂದೆ ತಾವೇ ಅಧ್ಯಕ್ಷ ರಾಗಿ ತಮ್ಮ ಬೆಂಬಲವಿದೆ ಎಂದು ಹೇಳಿ ಈಗ ತಮ್ಮದೇ ಸರ್ವಾಧಿಕಾರ ಧೋರಣೆ ಮುಂದುವರೆಯಲು ಮುಂದಾಗಿದ್ದರಿಂದ ಜತೆಗೇ ಸಂಸ್ಥೆ ಸರ್ವ ಸದಸ್ಯರ ಸಂಸ್ಥೆಯಾಗಿಸಲು ಪೆನಾಲ್ ದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಲಾಗಿದೆ ಎಂದರು.

ತಮ್ಮ ವಿರುದ್ದ ನೇರವಾಗಿ ಚುನಾವಣೆ ಎದುರಿಸಿ ಎಂದು ಸವಾಲು ಹಾಕಿದ ಡಾ.‌ಕಾಮರೆಡ್ಡಿ, ವೈಯಕ್ತಿಕವಾಗಿ ಟೀಕೆ ಮಾಡಲಾಗುತ್ತಿದೆ.‌ ಕಷ್ಟ ಪಟ್ಟು ತಮ್ಮ ಆಸ್ಪತ್ರೆ ಸುಧಾರಿಸಲಾಗಿದೆ. ಅದೇ ತೆರನಾಗಿ ಸಂಸ್ಥೆ ಅಭಿವೃದ್ಧಿ ಪಡಿಸುವ ಮಹಾದಾಸೆ ಹೊಂದಲಾಗಿದೆ ಎಂದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಿತೀನ ಜವಳಿ, ಸಂಸ್ಥೆಯ ಹಿರಿಯ ಸದಸ್ಯ ಸುಭಾಷ್ ಶಹಾ ಮಾತನಾಡಿದರು. ‌ಎಚ್ಕೆಇ ಮಾಜಿ ಅಧ್ಯಕ್ಷ ಡಾ. ಬಿ.ಜಿ‌ ಜವಳಿ ಹಾಗೂ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಗಳು ವೇದಿಕೆ ಮೇಲೆ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here