ನಿಜವಾದ ಶ್ರೀ ರಾಘವ ಚೈತನ್ಯ ಅವರ ಸಮಾಧಿ ಗುಂಜೋಟಿಯಲ್ಲಿದೆ: ಶಾಸಕ ಬಿ.ಆರ್. ಪಾಟೀಲ್

0
114

ಕಲಬುರಗಿ: ನಿಜವಾದ ಶ್ರೀ ರಾಘವ ಚೈತನ್ಯ ಅವರ ಸಮಾಧಿ ಮಹಾರಾಷ್ಟ್ರದ ಉಮರ್ಗಾ ತಾಲ್ಲೂಕಿನ ಗಂಜೋಟಿ ಗ್ರಾಮದ ದೇಶಪಾಂಡೆ ಅವರ ಮನೆಯಲ್ಲಿದೆ ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್ ಪಾಟೀಲ್ ತಿಳಿಸಿದ್ದಾರೆ.

ಇತ್ತೀಚಿಗಷ್ಟೇ ರಾಘವ ಚೈತನ್ಯ ದೇವಸ್ಥಾನ್ಕಕೆ ಭೇಟಿ ನೀಡಿ ಮಾತನಾಡಿದ ಅವರು ಶ್ರೀ ರಾಘವ ಚೈತನ್ಯ ಅವರ ಕುರಿತು ದೇಶಪಾಂಡೆ ಅವರ 8 ಪಿಡಿಯ ಕುಟುಂಬದವರನ್ನು ಮತನಾಡಿಸಿದ್ದೇನೆ ರಾಘವ ಚೈತನ್ಯನರು ನಮ್ಮ ಊರಿಗೆ ಬಂದು ನಮ್ಮ ಮನೆಗೆ ಬಂದಿದ್ದರು. ನಮ್ಮ ಮನೆಗೆ ಬಂದು ಕುಳಿತುಕೊಳ್ಳಲು ಒಂದಿಷ್ಟು ಜಾಗವನ್ನು ಕೇಳಿದರು. ಆಗ ನಮ ಮನೆತನದವರು ಕಾಶಿಯಾತ್ರೆಗೆ ಹೊಗಿದರಿಂದ  ಮನೆಯಲ್ಲಿ ಕೆಲಸ ಮಾಡುವವರು ಅವರಿಗೆ ಜಾಗವನ್ನು ನೀಡಿದರು.

Contact Your\'s Advertisement; 9902492681

ಶ್ರೀ ರಾಘವ ಚೈತನ್ಯ ಆರು ತಿಂಗಳು ಅಲ್ಲೆ ಕುಂತು ತಪ್ಪಸು ಮಾಡಿ ಸಮಾಧಿಯಾಗಿದ್ದಾರೆ ಎಂದು ಕುಟುಂಬದವರೇ ತಿಳಿಸಿದ್ದಾರೆ. ಇಂದಿಗೂ ನಾಡಿನ ಜನರೆಲ್ಲರು ಪ್ರತಿ ದಿನ ಅವರ ಸಮಾಧಿಯ ಗದ್ದುಗೆಗೆ ಭೇಟಿ ನೀಡಿ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಶಾಸಕ ಪಾಟೀಲ್ ಹಂಚಿಕೊಂಡರು. ಅವರು ಸಮಾಧಿಗೆ ಭೇಟಿ ನೀಡಿರುವ ಪೋಟೋ, ವಿಡಿಯೋ ವೈರಲ್ ಆಗಿವೆ.

https://www.facebook.com/story.php?story_fbid=920004136350236&id=100050219751507&mibextid=oFDknk

ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರಿಗೆ ಚುನಾವಣೆ ಸೋತಾಗ ಮತ್ತು ಗೆದ್ದಾಗ ಮಾತ್ರ ಆಳಂದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ರಾಘವ ಚೈತನ್ಯ ಲಿಂಗ್ ನೆನಪ್ಪಗುತ್ತೆ. ನಿಜವಾದ ರಾಘವ ಚೈತನ್ಯ ಅವರ ಸಮಾಧಿ ಗಂಜೋಟಿಯಲ್ಲಿದೆ ದರ್ಗಾದ ಲಿಂಗದ ವಿಚಾರ ಕೋರ್ಟ್ ನಲ್ಲಿದ್ದು ಈ ಬಗ್ಗೆ ಹೆಚ್ಚು ಮತನಾಡಲ್ಲ ಎಂದಿದ್ದಾರೆ.

ಸುಭಾಷ ಗುತ್ತೇದಾರ ಅವರು ಲಾಡ್ಲೆ ಮಶಾಕ್ ದರ್ಗಾದಲ್ಲಿ 8 ಕುರಿಗಳನ್ನು ಕೊಯ್ದು ಕಂದೂರಿ ಮಾಡಿ ಮಟನ್ ತಿನ್ನುತ್ತಾರೆ. ಮತ್ತೊಂದೆಡೆ ಅದೇ ದರ್ಗಾದ ವಿರುದ್ಧವೇ ಹೋರಾಟಕ್ಕೆ ನಿಲ್ಲುತ್ತಾರೆ ಅವರದ್ದು ದೊಂದ್ವ ರಾಜಕೀಯ ನಡೆಯಾಗಿದೆ ಎಂದು ಟೀಕಿಸಿದರು.

ಬ್ರಹ್ಮಣರು ಸತ್ತರೆ, ಲಿಂಗ ಪ್ರತಿಸ್ಠಾಪನೆ ಮಾಡಲ್ಲ, ಲಿಂಗ್ ಕುಡಿಸುವ ಪರಂಪರೆ ಲಿಂಗಾಯತರಲ್ಲಿದೆ, ಸಮಾಧಿ ಲಿಂಗಕ್ಕೆ ಶಿವರಾತ್ರಿ ದಿವಸ ಪೂಜೆ ಮಾಡಲ್ಲ. ಮನೆಯಲ್ಲಿ, ದೇವಸ್ಥಾನದಲ್ಲಿನ ಇಷ್ಟಲಿಂಗಕ್ಕೆ ಪೂಜೆ ಮಾಡುತ್ತಾರೆ ಎಂದು ಖಾಸಗಿ ಮಾಧ್ಯಮಗೊಳಿಂದೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here