- ಸುನೀಲ್ ರಾಣಿವಾಲ್
ಸೇಡಂ: ಪಟ್ಟಣದ ಬಸ್ ನಿಲ್ದಾಣದಲ್ಲಿ ಆಂಧ್ರ . ತೆಲಂಗಾಣ ಸೇರಿದಂತೆ ಹಲವು ಕಡೆಗಳಿಂದ ಪ್ರಯಾಣಿಕರ ಜನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಬಸ್ ನಿಲ್ದಾಣದಲ್ಲಿ ಜನ ದಟ್ಟಣೆಯಲ್ಲಿ ದಿನಕೋಮ್ಮೆ ಪ್ರಯಾಣಿಕರ ಆಭರಣ. ದುಡ್ಡು ಹಾಗೂ ಮೂಬೈಲ್ ಸೇರಿದಂತೆ ಹಲವು ಕಳ್ಳರ ಹಾವಳಿಯಿಂದ ಪ್ರಯಾಣಿಕರ ಪರದಾಟ, ಕೂಡಲೇ ಕಳ್ಳರ ಹಾವಳಿ ತಡೆಗೆ ಪೋಲಿಸರು ಮುಂದಾಗಬೇಕು ಎಂದು ಬಹುಜನ ಸಮಾಜ ಪಾರ್ಟಿ ತಾಲೂಕ ಅಧ್ಯಕ್ಷ ರೇವಣಸಿದ್ದಪ್ಪ ಸಿಂದೆ ಹೇಳಿದರು.
ಬಸ್ ನಿಲ್ದಾಣದಲ್ಲಿ ಮೂಬೈಲ್ ಮತ್ತು ದುಡ್ಡು ಕಳ್ಳರ ಕೈಚಳಕದಿಂದ ಕಳವು ಆಗಿವೆ ಎಂದು ಹಲವು ಬಾರಿ ಪೋಲಿಸ್ ಠಾಣೆಗೆ ದೂರು ನೀಡಿದರು ಯಾವುದೇ ಪ್ರಯೋಜನಾ ಗೊಂಡಿಲ್ಲ ಎಂದು ಅವರು ಆರೋಪಿಸಿದರು,
ಬಸ್ ನಿಲ್ದಾಣ ಮುಂಬಾಗದಲ್ಲಿ ಪೋಲಿಸರು ಗೀಡದ ನೇರಳಿನಲ್ಲಿ ಕುಳಿತು ಕೋಳುವುದೆ ಅವರ ಕೇಲಸವಾಗಿದ್ದೆ. ಒಂದು ಬಾರಿ ಕೂಡ ಬಸ್ ನಿಲ್ದಾಣದಲ್ಲಿ ಹೋಗೋದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದ ಅವರಣದಲ್ಲಿ ಬೆಳಗ್ಗೆ ಆದ್ರೆ ಸಾಕು ಆಟೋಗಳು ಮತು ಖಾಸಗಿ ವಾಹನಗಳು ದಿನದಿಂದ ದಿನಕ್ಕೆ ಹಾವಳಿ ಹೇಚ್ಚಾಗುತ್ತಿದ್ದು, ಪ್ರಯಾಣಿಕರಿಗೆ, ಬಸ್ ಚಾಲಕರಿಗೆ ದಿನನಿತ್ಯ ತೊಂದರೆ ಉಂಟಾಗುತ್ತಿದ್ದು. ಈತ ಕಡೆ ಸಂಬಂಧ ಪಟ್ಟ ಅಧಿಕಾರಿಗಳು ಹೇಳೋದಿಲ್ಲ ಕೇಳೋರಿಲ್ಲದಂತಾಗಿದೆ ಎಂದು ಕಿಡಿ ಕಾರಿದರು.
ಬಸ್ ನಿಲ್ದಾಣದ ಅವರಣದಲ್ಲಿ ಜನ ದಟ್ಟಣೆ ಹೇಚಾಗುತ್ತಿದಂತೆ ಆಟೋಗಳು ಸೇರಿದಂತೆ ಖಾಸಗಿ ವಾಹನಗಳು ಒಳ್ಳಗಡೆ ಹೋಗದಂತೆ ನೋಡಿಕೋಳಬೇಕು. ಆದ್ರೆ ಇಲ್ಲಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದೆ ಸಂಪೂರ್ಣ ನಿರ್ಲಕ್ಷ್ಯತೆ ವಹಿಸುತ್ತಿದ್ದಾರೆ, ಯಾವುದಾದರೂ ಅನಾಹುತ ಆದ್ರೆ ನೇರವಾಗಿ ಅಧಿಕಾರಿಗಳು ಹೋಣೆಯಾಗುತ್ತಾರೆ ಎಂದರು,
ಬಸ್ ನಿಲ್ದಾಣದ ಅವರಣದಲ್ಲಿ ಕಳ್ಳರ ಹಾವಳಿ ತಡೆಗಟ್ಟಬೇಕು ಹಾಗೂ ಪ್ರಯಾಣಿಕರಿಗೆ ಸುಗಮವಾಗಿ ಸಂಚಾರಿಸಲು ಆಟೋಗಳು ಮತು ಖಾಸಗಿ ವಾಹನಗಳು ಒಳ್ಳಗಡೆ ಬರದಂತೆ ತಡೆಗಟ್ಟಲು ಪೋಲಿಸ್ ಇಲಾಖೆ ನಿರ್ಲಕ್ಷ್ಯತೆ ವಹಿಸಿದರೆ ಮುಂದಿನ ದಿನಗಳಲ್ಲಿ ಬಹುಜನ ಸಮಾಜ ಪಾರ್ಟಿ ತಾಲೂಕ ಅಧ್ಯಕ್ಷ ರೇವಣಸಿದ್ದಪ್ಪ ಸಿಂದೆ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.