ಕಲಬುರಗಿ: ಚನ್ನಮಲ್ಲೇಶ್ವರ ಪತ್ತಿನ ಸಹಕಾರ ಸಂಘ ನಿಯಮಿತದ ೨೦೧೮-೧೯ ನೇ ಸಾಲಿನ 23ನೇ ವಾರ್ಷಿಕ ವರದಿ ಸರ್ವ ಸದಸ್ಯರ ಮಹಾಸಭೆಯ ಸೇ.15 ಭಾನುವಾರ ಬೆಳಿಗ್ಗೆ 10.ಕ್ಕೆ ನಗರದ ಶಹಾಬಜಾರನಲ್ಲಿನ ಕಬಾಡಗಲ್ಲಿಯಲ್ಲಿರುವ ಚನ್ನಮಲ್ಲೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಸರ್ವ ಸದಸ್ಯರ ಮಹಾಸಭೆಯನ್ನು ಬಣಮಗಿ ಹಿರೇಮಠದ ಶ್ರೀ ಷ.ಬ್ರ.ರಾಚೋಟೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್, ಅತಿಥಿಗಳಾಗಿ ಶರಣಬಸಪ್ಪ ಎಸ್.ರೇವೂರೆ, ರಾಜಶೇಖರ ಎಸ್.ಮುನ್ನಳ್ಳಿ, ಶ್ರೀಶೈಲ್ ಎ.ಮಾಳಗೆ ಭಾಗವಹಿಸುವರು. ಎಂದು ಸಂಘದ ಅಧ್ಯಕ್ಷ ಮಲ್ಲಿನಾಥ ಜಿ. ಹಾದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.