ಡಾಂಬರೀಕರಣ ಕಾಮಗಾರಿ ಕಳೆಪೆ : ಕರವೇ ದೂರು

0
47

ಯಾದಗಿರಿ : ಅಚ್ಚೋಲಾ ತಾಂಡಾದಿಂದ ಅರಕೇರಾ (ಬಿ) ತಾಂಡಾದವರೆಗೆ ೨೦೧೮-೧೯ ನೇ ಸಾಲಿನ ಹೆಚ್.ಕೆ.ಆರ್.ಡಿ.ಬಿ. ಯೋಜನೆಯಡಿ ಡಾಂಬರೀಕರಣ ಕಾಮಗಾರಿ ಸಂಪೂರ್ಣ ಕಳಪೆ ಆಗಿದ್ದು, ಗುತ್ತಿಗೆದಾರರಿಗೆ ನೀಡುವ ಕಾಮಗಾರಿ ಬಿಲ್ ತಡೆಹಿಡಿಯಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಹೆಚ್‌ಕೆಆರ್‌ಡಿಬಿ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ದೂರು ಸಲ್ಲಿಸಿದರು.

ಡಾಂಬರೀಕರಣ ಕಾಮಗಾರಿಗೆ ರೂ ೮೩.೦೩ ಲಕ್ಷ ಮಂಜೂರಿಯಾಗಿದ್ದು, ಸದರಿ ಕಾಮಗಾರಿ ಅಂದಾಜು ಪತ್ರಿಕೆಯಂತೆ ಆಳ, ಅಗಲ ಅಗೆಯದೇ, ಕಳಪೆ ಮಟ್ಟದ ಸಾಮಾಗ್ರಿಗಳು ಬಳಸಿದ್ದು, ಕಾಮಗಾರಿ ಮಾಡಿದ ಕೆಲವೇ ದಿನಗಳಲ್ಲಿ ಡಾಂಬರ್ ಕಿತ್ತುಕೊಂಡು ಹೋಗಿದೆ, ಗುತ್ತಿಗೆದಾರರು & ಅಧಿಕಾರಿಗಳು ಶಾಮೀಲಾಗಿ ಬೇಕಾಬಿಟ್ಟಿಯಾಗಿ ಕಾಮಗಾರಿ ನಿರ್ಮಾಣ ಮಾಡಲಾಗಿದೆ ಎಂದು ದೂರಿದರು.

Contact Your\'s Advertisement; 9902492681

ಸರ್ಕಾರವೂ ಸಾರ್ವಜನಿಕರ ಅನುಕೂಲಕ್ಕಾಗಿ ಅನುದಾನ ನೀಡಿದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹಣದ ಆಸೆಗಾಗಿ ಕಳಪೆ ಪ್ರಮಾಣದಲ್ಲಿ ರಸ್ತೆ ನಿರ್ಮಾಣ ಮಾಡಿದ್ದು, ಈಗಾಗಲೇ ಬಿಲ್ ಮಾಡಲಾಗಿದ್ದು, ಅದನ್ನು ವಾಪಾಸ್ ಸರ್ಕಾರಕ್ಕೆ ಭರಿಸಲು ಆದೇಶಿಸಬೇಕು ಹಾಗೂ ೩ನೇ ತನಿಖಾ ತಂಡದವರಾದ ಎಂ.ಎ.ಆರ್.ಎಸ್. ಪ್ಲಾನಿಂಗ್ & ಇಂಜಿನಿಯರಿಂಗ್ ಸರ್ವಿಸ್ ಪ್ರೈ ಲಿ. ತಪ್ಪು ವರದಿ ನೀಡಿದ್ದು, ಸದರಿ ಏಜೆನ್ಸಿ ಮೇಲೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದರಿ ಕಾಮಗಾರಿಯ ಬಿಲ್ ತಡೆಹಿಡಿದು ಉನ್ನತ ಮಟ್ಟದ ಅಧಿಕಾರಿಗಳ ತನಿಖಾ ತಂಡದಿಂದ ತನಿಖೆ ನಡೆಸಿ, ಗುಣಮಟ್ಟ ಪರೀಕ್ಷಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು, ಪುನಾ: ಡಾಂಬರೀಕರಣ ಹಾಕಿ ಕಾಮಗಾರಿ ಮಾಡಲು ಕ್ರಮ ಕೈಗೊಳ್ಳಬೇಕು ವಿಳಂಭವಾದರೆ ತಮ್ಮ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಜಿಲ್ಲಾ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ಹಣಮಂತ ನಾಯಕ ಖಾನಳ್ಳಿ, ಅರ್ಜುನ ಪವಾರ್ ಬಸವಂತಪೂರ, ವೆಂಕಟೇಶ ರಾಠೋಡ, ವಿಶ್ವರಾಧ್ಯ ದಿಮ್ಮೆ, ಮಲ್ಲು ದೇವಕರ್, ಭೀಮು ಬಸವಂತಪೂರ ಸಿದ್ದಪ್ಪ ಕ್ಯಾಸಪನಳ್ಳಿ, ರಿಯಾಜ್ ಪಟೇಲ್ ಉಳ್ಳೆಸೂಗೂರು ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here