ಪಾಲಿಕೆಯ 2024-25ನೇ ಸಾಲಿನ ಮುಂಗಡ ಪತ್ರ ಮಂಡನೆ

0
44

ಕಲಬುರಗಿ: ನಗರದ ಮಹಾನಗರ ಪಾಲಿಕೆ ಸಭಾಗಂಣದಲ್ಲಿ ಮಹಾನಗರ ಪಾಲಿಕೆ ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಗಮ್ಮ ಎಸ್. ಇನಾಂದಾರ ಅವರು ಮಹಾನಗರ ಪಾಲಿಕೆಯ 2024-25ನೇ ಸಾಲಿನ ಮುಂಗಡ ಪತ್ರ ಮಂಡನೆ ಮಾಡಿದರು.

ನಂತರ ಅವರು ಮಾತನಾಡುತ್ತಾ 2024- 25ನೇ ಸಾಲಿನ ಪಾಲಿಕೆಯ ಮುಂಗಡ ಪತ್ರವನ್ನು ಮಂಡಿಸಿ. ನಂತರ ಪಾಲಿಕೆಯ ರಾಜಸ್ವ ರೂ.176.06 ಕೋಟಿ ರಾಜಸ್ವ ಪಾವತಿ ಅಂದಾಜು ರೂ.194.40 ಕೋಟಿಗಳಿಗೆ ಪ್ರಸ್ತಾವನೆಯನ್ನು ಮಂಡಿಸಲಾಯಿತು. ಎಂದರು.
ಅದರಂತೆ 2024-25ರ ರೂ.4119.98 ಲಕ್ಷಗಳ ಬಂಡವಾಳ- ಆದಾಯದ ಅಂದಾಜು ಹಾಗೂ ರೂ.7193 ಲಕ್ಷಗಳ ಅಂದಾಜು ಬಂಡವಾಳ ಪಾವತಿಯನ್ನು ಮಂಡಿಸಲಾಯಿತು. ಅಂಕಿ ಅಂಶಗಳನ್ನು ಪರಿಗಣಿಸಿದಾಗ ಇದು ಕೊರತೆ ಆಯವ್ಯಯ ಮುಂಗಡ ಪತ್ರವಾಗಿರುತ್ತದೆ.

Contact Your\'s Advertisement; 9902492681

ಕಳೆದ ಹಣಕಾಸು ವರ್ಷ 2023-24ರ ರಾಜಸ್ವ ಆದಾಯಗಳ ಅಂದಾಜು ಮೊತ್ತ ರೂ.15311.28 ಲಕ್ಷವಾಗಿರುತ್ತದೆ. ರಾಜಸ್ವ ಪಾವತಿಗಳ ಅಂದಾಜು ರೂ.16936.76 ಲಕ್ಷವಾಗಿರುತ್ತದೆ. ಕಳೆದ ಹಣಕಾಸು ವರ್ಷ 2023-24ರಲ್ಲಿ ಬಂಡವಾಳ ಆದಾಯಗಳ ಅಂದಾಜು ಮೊತ್ತ ರೂ.112.76 ಕೋಟಿ ಆಗಿರುತ್ತದೆ. ಬಂಡವಾಳ ಪಾವತಿಯ ಅಂದಾಜು ರೂ.13027.3 ಲಕ್ಷವಾಗಿರುತ್ತದೆ.

ಮುಂಗಡ ಪತ್ರದ ಪ್ರಮುಖ ಅಂಶಗಳಾದ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳ ಅಭಿವೃದ್ಧಿಗಾಗಿ ರೂ.89.18 ಲಕ್ಷಗಳನ್ನು ಕಾಯ್ದಿರಿಸಲಾಗಿದೆ, ನಗರದಲ್ಲಿ ಬರುವ ರಸ್ತೆಗಳ ನಿರ್ಮಾಣ ಹಾಗೂ ಪಾದಚಾರಿ ರಸ್ತೆಗಳ ಅಭಿವೃದ್ಧಿಗಾಗಿ ರೂ.1254.38 ಲಕ್ಷ ಗಳನ್ನು ಕಾಯ್ದಿರಿಸಲಾಗಿದೆ, ಮಹಾನಗರ ಪಾಲಿಕೆಯ ಪೌರಕಾರ್ಮಿಕರು, ವಾಹನ ಚಾಲಕರು ಹಾಗೂ ಕ್ಲೀನರ್ ಇವರ ವೇತನ ಹಾಗೂ ಉಪಹಾರಕ್ಕಾಗಿ ರೂ.4500 ಲಕ್ಷ ಕಾಯ್ದಿರಿಸಲಾಗಿದೆ.

ತುರ್ತು ಸಂದರ್ಭಗಳಿಗಾಗಿ ರೂ.150 ಲಕ್ಷಗಳನ್ನು ಕಾಯ್ದಿರಿಸಲಾಗಿದೆ, ನಗರದಲ್ಲಿ ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆಗಾಗಿ ರೂ.700 ಲಕ್ಷಗಳನ್ನು ಕಾಯ್ದಿರಿಸಲಾಗಿದೆ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಧನವಾಗಿ ರೂ.5.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ, ಶೌಚಾಲಯಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ಒಟ್ಟು ರೂ.200 ಲಕ್ಷಗಳನ್ನು ಕಾಯ್ದಿರಿಸಲಾಗಿದೆ, ಸ್ಮಶಾನ ಅಭಿವೃದ್ಧಿಗಾಗಿ ರೂ.109 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.

ನಗರದ ಸೌಂದರ್ಯಕರಣಕ್ಕಾಗಿ ರೂ.100 ಲಕ್ಷಗಳನ್ನು ಕಾಯ್ದಿರಿಸಲಾಗಿದೆ, ನಗರದಲ್ಲಿ ಹೆಚ್ಚಾಗಿರುವ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ರೂ.100 ಲಕ್ಷಗಳನ್ನು ಕಾಯ್ದಿರಿಸಲಾಗಿದೆ, ಪುನರ್ವಸತಿ ಕೇಂದ್ರಕ್ಕಾಗಿ ರೂ.10.9 ಲಕ್ಷಗಳನ್ನು ಕಾಯ್ದಿರಿಸಲಾಗಿದೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ, ವಿಕಲಚೇತನರು ಹಾಗೂ ನಗರದ ಇತರ ಬಡಜನರ ಕಲ್ಯಾಣಕ್ಕಾಗಿ ಎಲ್ಲಾ ಯೋಜನೆಗಳ ಅಡಿಯಲ್ಲಿ ರೂ.350 ಲಕ್ಷಗಳನ್ನು ಕಾಯ್ದಿರಿಸಲಾಗಿದೆ, ಸೈನ್ ಬೋರ್ಡಗಳ ಸ್ಥಾಪನೆಗಾಗಿ ರೂ.50.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದರು.

ಸದರಿ ಸಭೆಯಲ್ಲಿ ಪೂಜ್ಯ ಮಹಾಪೌರರಾದ ವಿಶಾಲ ಎಸ್. ಧರ್ಗಿ, ಸ್ಥಾಯಿ ಸಮಿತಿ ಸದಸ್ಯರಾದ ಲತಾ ರವೀಂದ್ರಕುಮಾರ, ಸೈಯದಾ ಮಸಿರಾ ನಸೀನ್, ಅನುಪಮಾ ರಮೇಶ ಕಮಕನೂರ, ಶಾಂತಾಬಾಯಿ ಚಂದ್ರಶೇಖರ, ಸಚಿನ ರವಿಕುಮಾರ ಹೊನ್ನಾ ಹಾಗೂ ಪಾಲಿಕೆಯ ಆರ್.ಪಿ. ಜಾಧವ, ಉಪ ಆಯುಕ್ತರು (ಅಭಿವೃದ್ಧಿ), ಮುಖ್ಯಲೆಕ್ಕಾಧಿಕಾರಿಗಳಾದ ಪರಿಮಳಾ, ಸಭಾ ಕಾರ್ಯದರ್ಶಿ ಹಾಗೂ ಸಮಿತಿ ಕಾರ್ಯದರ್ಶಿ ಮತ್ತು ಪಾಲಿಕೆಯ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here