ಶ್ರೀಪ್ರಭು ಕಾಲೇಜಿನಲ್ಲಿ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮ

0
103

ಸುರಪುರ: ನಗರದ ಶ್ರೀಪ್ರಭು ಕಲಾ ಮತ್ತು ವಿಜ್ಞಾನ ಮತ್ತು ಜೆ.ಎಂ.ಬೋಹರಾ ವಾಣಿಜ್ಯ ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಚಾರೋಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು  ಪ್ರೊ. ರಾಜನಾಳ್ಕರ ಲಕ್ಷ್ಮಣ, ವಿತ್ತಾಧಿಕಾರಿಗಳು ಗುಲ್ಬರ್ಗಾ ವಿಶ್ವವಿದ್ಯಾಲಯ ಇವರು ನೆರವೇರಿಸಿದರು.ವೇದಿಕೆ ಮೇಲೆ ಕಲಬುರಗಿ, ಪ್ರೊ. ಎಚ್.ಟಿ. ಪೋತೆ, ನಿರ್ದೇಶಕರು, ಪ್ರಾಸರಾಂಗ, ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ, ಡಾ. ಎಸ್.ಎಚ್. ಹೊಸಮನಿ, ಪ್ರಾಚಾರ್ಯರು, ಎಸ್.ಪಿ. ಜೆ.ಎಮ್.ಬಿ ಪದವಿ ಕಾಲೇಜು ಸುರಪುರ, ಪ್ರೊ. ವೇಣುಗೋಪಾಲ ಜೇವರ್ಗಿ, ಉಪಪ್ರಾಚಾರ್ಯರು, ಎಸ್.ಪಿ. ಜೆ.ಎಮ್.ಬಿ ಪದವಿ ಕಾಲೇಜು ಸುರಪುರ, ಪ್ರೊ. ಎಮ್.ಡಿ. ವಾರಿಸ್, ಪ್ರಾಚಾರ್ಯರು  ಎಸ್.ಪಿ. ಜೆ.ಎಮ್.ಬಿ  ಪಿಯು ಕಾಲೇಜರವರು ಆಸೀನರಾಗಿದ್ದರು.

Contact Your\'s Advertisement; 9902492681

ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಎಚ್.ಟಿ. ಪೋತೆ, ನಿರ್ದೇಶಕರು, ಪ್ರಾಸರಾಂಗ, ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಆಶಯ ನುಡಿಗಳನ್ನಾಡುತ್ತಾ ಯಾದಗಿಎರಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿಗಳ ಪರಿಚಯಿಸುವದರ ಮೂಲಕ ಅವರ ಸಾಧನೆಗಳನ್ನು ಕೊಂಡಾಡಿ ಇಂದಿನ ಯುವ ಪಿಳಿಗೆಗೆ ಪುಸ್ತಕದ ಪ್ರೇಮಿಗಳಾಗಿ ಎಂದು ನುಡಿದರು.

ಪ್ರಭಂದನಾಕಾರರಾಗಿ ಆಗಮಿಸಿದ್ದ ಹೊನ್ಕಲ್ ಸಿದ್ದರಾಮ, ಸಾಹಿತಿಗಳು ಯಾದಗಿರಿಯವರು,ಯಾದಗರಿ ಜಿಲ್ಲೇಯ ಅಧುನಿಕ ಕಾವ್ಯ ಎಂಬ ವಿಷಯವಾಗಿ ಅಂತ್ಯಂತ ಮಾತನಾಡಿದರು. ಮತ್ತೋರ್ವ ಪ್ರಭಂದನಾಕಾರರಾಗಿ ಆಗಮಿಸಿದ್ದ ಮಹಿಪಾಲರಡ್ಡಿ ಮುನ್ನೂರ, ಸಾಹಿತಿಗಳು ಕಲಬುರಗಿಯವರು ಯಾದಗರಿ ಜಿಲ್ಲೆಯ ಪತ್ರಿಕೊಧ್ಯಮ ಎಂಬ ವಿಷಯವಾಗಿ ಹಾಗು ಪ್ರಭಂದನಾಕಾರರಾಗಿ ಆಗಮಿಸಿದ್ದ ಪ್ರಕಾಶ ಅಂಗಡಿ, ಮಾಜಿ ಸದಸ್ಯರು ಜಾ.ಪ. ಅಕ್ಯಾಡಮಿ, ಸುರಪುರ ಅವರು ಸುರಪುರ-ಜಾನಪದ ಎಂಬ ವಿಷಯವಾಗಿ ಮಾತನಾಡಿದರು.ಡಾ. ಶ್ರೀಶೈಲ ನಾಗರಾಳ, ಪ್ರಾಚಾರ್ಯರು, ಎ.ವಿ. ಪಾಟಿಲ್ ಕಾಲೇಜು ಅಳಂದ ಭಾವೇಕ್ಯತೆಯ ನೆಲೆ ತಿಂಥಣಿ ಎಂಬ ವಿಷಯದ ಕುರಿತು ಮತ್ತು ಡಾ. ಗವಿಸಿದ್ದಪ್ಪ ಪಾಟೀಲ್, ಸಾಹಿತಿಗಳು ಹುಮನಾಬಾದ ಅವರು ಬೀದರ ಜಿಲ್ಲೇಯ ತತ್ವ ಪದಕಾರರು ಎಂಬ ವಿಷಯದ ಬ್ಗಗೆ ಹಾಗು ಡಾ. ಸಂತೋಷಕುಮಾರ ಕಂಬಾರ, ಸಾಹಿತಿಗಳು ಕಲಬುರಗಿಯವರು ಯಾದಗರಿ ಜಿಲ್ಲೇಯ ಧುನಿಕ ವಚನಕಾರರು ಎಂಬ ವಿಷಯವಾಗಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಚ್. ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಡಾ. ಸುರೇಶ ಮಾಮಡಿ ನಿರೂಪಿಸಿದರು, ಡಾ. ಶಿವಲೀಲಾ ಸ್ವಾಗತಿಸಿದರು, ವೀರಣ್ಣ ಜಾಕಾ ವಂದಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್. ಪಾಟಿಲ್, ಎಸ್.ಎಮ್. ಸಜ್ಜನ, ಡಾ. ಶರಣಗೌಡ ಪಾಟಿಲ್, ಹಣಮಂತ ಸಿಂಗೆ, ಡಾ ರಮೇಶ ಶಹಾಪುರಕರ್, ಧರ್ಮರಾಜ ಪಿಳಿಬಿಂಟ, ವಿಜಯಕುಮಾರ, ಜ್ಯೊತಿ ಮಾಮಡಿ, ಹಂಪಮ್ಮ,ಶ್ರೀಶೈಲ್, ಗುರುರಾಜ ಕುಲ್ಕರ್ಣಿ,ಧರ್ಮರಾವ ಕೆ. ಮಲ್ಹಾರರಾವ ಕುಲ್ಕರ್ಣಿ,ವೀರಣ್ಣ ಜಾಕಾ, ಯಲ್ಲಪ್ಪ,ಸಂತೋಷ ಹೆಡಗಿನಾಳ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here