ಕಂದಾಯ ಸಚಿವರಿಂದ ಜಿಲ್ಲೆಯ 8 ಜನ‌ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪಟಾಪ್ ವಿತರಣೆ

0
534

ಕಲಬುರಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ರೈತರ ಪಹಣಿಗೆ ಅಧಾರ್ ಕಾರ್ಡ್ ಸೀಡಿಂಗ್ ಕಾರ್ಯದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಕಲಬುರಗಿ ಜಿಲ್ಲೆಯ 8 ಜನ ಗ್ರಾಮ‌ ಆಡಳಿತಾಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ‌ ಬೈರೇಗೌಡ ಅವರು ಲ್ಯಾಪಟಾಪ್ ವಿತರಣೆ ಮಾಡಿದರು.

ಬೆಂಗಳೂರಿನ‌ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಚಿಂಚೋಳಿ ತಾಲೂಕಿನ‌ ನಾಗಾಇದ್ಲಾಯಿ ಪಂಚಾಯತಿಯ ಸುಮಾ, ಜೇವರ್ಗಿ ತಾಲೂಕಿನ ಅಂಕಲಗಾ ಪಂಚಾಯತಿಯ ಶರಣು ನಾಟೆಕರ್, ಸೇಡಂ ತಾಲೂಕಿನ ಮೇದಕ ಪಂಚಾಯತಿಯ ಗೋಪಾಲರೆಡ್ಡಿ,ಅಫಜಲಪೂರ ತಾಲೂಕಿನ ಭೈರಾಮಡಗಿ ಪಂಚಾಯತಿಯ ಮಲ್ಲಿನಾಥ, ಕಮಲಾಪುರ ತಾಲೂಕಿನ ವಿ.ಕೆ.ಸಲಗರ್ ಪಂಚಾಯತಿಯ ಮಿಲಿಂದ ಕಾಂಬ್ಳೆ, ಕಾಳಗಿ ತಾಲೂಕಿನ ಹಲಚೇರಾ ಪಂಚಾಯತಿಯ ಬಸವರಾಜ, ಆಳಂದ ತಾಲೂಕಿನ ದರ್ಗಾಶಿರೂರ ಪಂಚಾಯತಿಯ ಭೀಮಾಶಂಕರ ಹಾಗೂ ಚಿತ್ತಾಪೂರ ತಾಲೂಕಿನ ಸನ್ನತ್ತಿ ಪಂಚಾಯತಿಯ ಮೈಮುನಾ ತಸ್ಲೀಮ್ ಅವರಿಗೆ ಸಚಿವರು ಹೆಚ್.ಪಿ. ಕಂಪನಿಯ ಲ್ಯಾಪಟಾಪ್ ನೀಡಿ ಇನ್ನು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಶುಭ ಕೋರಿದರು.

Contact Your\'s Advertisement; 9902492681

ಕಂದಾಯ ಇಲಾಖೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಇ-ಕಚೇರಿ ಅನುಷ್ಟಾನಗೊಳಿಸುತ್ತಿರುವುದರಿಂದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಗ್ರಾಮ‌ ಲೆಕ್ಕಾಧಿಕಾರಿಗಳಿಗೆ ಲ್ಯಾಪಟಾಪ್ ವಿತರಣೆ ಮಾಡಲಾಗುವುದು ಎಂದು ಕಳೆದ ಬಾರಿ ಕಲಬುರಗಿ ಜಿಲ್ಲೆ ಪ್ರವಾಸ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಅದರಂತೆ 2024-25ನೇ ಆಯವ್ಯಯದಲ್ಲಿಯೂ ಇದನ್ನು ಘೋಷಿಸಲಾಗಿತ್ತು.

ಇದೀಗ ಮೊದಲನೇ ಹಂತವಾಗಿ ರಾಜ್ಯದ 10 ಜಿಲ್ಲೆಗಳ ಆಯ್ದ ಉತ್ತಮ ಪ್ರಗತಿ ಸಾಧಿಸಿದ ಗ್ರಾಮ ಅಡಳಿತಾಧಿಕಾರಿಗಳಿಗೆ ಲ್ಯಾಪಟಾಪ್ ವಿತರಿಸಿದ್ದು, ಮುಂದಿನ ಒಂದು ವರ್ಷದಲ್ಲಿ ಉಳಿದ ಜಿಲ್ಲೆಯಲ್ಲಿ ಉತ್ತಮ ಸೇವೆಗೈದವರಿಗೆ ಲ್ಯಾಪಟಾಪ್ ನೀಡಲಾಗುವುದೆಂದು ಸಚಿವ ಕೃಷ್ಣ ಬೈರೇಗೌಡ ಅವರು ಕಾರ್ಯಕ್ರಮದಲ್ಲಿ ಘೋಷಿಸಿದರು.

ಲ್ಯಾಪಟಾಪ್ ಪಡೆದಿದಕ್ಕೆ ಸಂತಸ: ಪ್ರಸಕ್ತ ಸರ್ಕಾರ ಕಂದಾಯ ಇಲಾಖೆಯನ್ನು ಕಾಗದು ರಹಿತ ಕಚೇರಿಯನ್ನಾಗಿ ಪರಿವರ್ತಿಸುತ್ತಿದೆ. ತಹಶೀಲ್ದಾರ ಕಚೇರಿಯಲ್ಲಿರುವ ಲಿಪಿಕ ಸಿಬ್ಬಂದಿಗಳಿಗೆ ನೀಡಿರುವ ಕಂಪ್ಯೂಟರ್ ಗಳನ್ನೇ ನಾವು ಬಳಸುತ್ತಿರುವುದರಿಂದ ಕಚೇರಿ ಕೆಲಸಕ್ಕೆ ಅಡಚಣೆಯಾಗುತ್ತಿತ್ತು. ಇದೀಗ ತಮಗೆ ಪ್ರತ್ಯೇಕವಾಗಿ ಲ್ಯಾಪಟಾಪ್ ನೀಡಿದ್ದರಿಂದ‌ ನಾವು ಕ್ಷೇತ್ರದಲ್ಲಿದ್ದಿಕೊಂಡೆ ಕೆಲಸ‌ ಸಲೀಸಾಗಿ ನಿರ್ವಹಿಸಬಹುದಾಗಿದೆ. ಸರ್ಕಾರ ಲ್ಯಾಪಟಾಪ್ ನೀಡಿದ್ದು ತುಂಬಾ ಅನುಕೂಲವಾಗಲಿದೆ ಎಂದು ಲ್ಯಾಪಟಾಪ್ ಪಡೆದ‌ ನೌಕರರು ಸಂತಸ ಹಂಚಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here