ಈ ಪ್ರದೇಶ ಭತ್ತದ ಕಣಜವಾಗಿರುವಂತೆ ಪ್ರತಿಭೆಯ ಕಣಜವಾಗಲಿ : ಎಸ್. ಸುರೇಶ್ ಕುಮಾರ್

0
33

ಕೊಪ್ಪಳ: ಈ ಪ್ರದೇಶ ಭತ್ತದ ಕಣಜವಾಗಿದೆಯೋ ಹಾಗೆಯೇ ಪ್ರತಿಭೆಯ ಕಣಜವಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಅವರು ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ,  ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಗಂಗಾವತಿ ಶಿಕ್ಷಕರ ಕಲ್ಯಾಣನಿಧಿ, ಕರ್ನಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘ ಗಂಗಾವತಿ ತಾಲ್ಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಗಂಗಾವತಿಯಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ದೇಶದಲ್ಲಿ ಕಾರ್ಮಿಕ ದಿನಾಚರಣೆ, ಮಕ್ಕಳ ದಿನಾಚರಣೆ, ವೈದ್ಯರ ದಿನಾಚರಣೆ ಹೀಗೆ ಅನೇಕ ದಿನಾಚರಣೆಗಳನ್ನು ಆಚರಿಸುತ್ತೆವೆ. ಆದರೆ ಭಾವನಾತ್ಮಕವಾಗಿ ಇಡೀ ದೇಶದಲ್ಲಿ ಆಚರಿಸುವ ದಿನಾಚರಣೆ ಎಂದರೆ ಅದು ಶಿಕ್ಷಕರ ದಿನಾಚರಣೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೈಸೂರಿನಲ್ಲಿ ಶಿಕ್ಷಕರಾಗಿದ್ದರು ಅದು ನಮಗೆ ಹೆಮ್ಮೆಯ ಸಂಗತಿ. ರಾಧಾಕೃಷ್ಣನ್ ಅವರು ದಾರ್ಶನಿಕರಾಗಿದ್ದರು, ದೇಶದ ಮೊದಲನೇ ಉಪರಾಷ್ಟ್ರಪತಿ ದೇಶದ ಏರಡನೇ ರಾಷ್ಟ್ರಪತಿ, ಭಾರತರತ್ನ ಇಷ್ಟೆಲ್ಲ ಉನ್ನತ ಪದವಿಯಲ್ಲಿದ್ದರೂ ಅವರನ್ನು ನಾವು ಗರುತಿಸುವುದು ಒಬ್ಬ ಆದರ್ಶ ಶಿಕ್ಷಕರನ್ನಾಗಿ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಕೂಡ ಅತೀ ಹೆಚ್ಚು ಇಷ್ಟಪಡುವ ವೃತ್ತಿ ಎಂದರೆ ಅದು ಶಿಕ್ಷಕರ ವೃತ್ತಿ. ಶಿಕ್ಷಕರ ಸುಖ ಹಾಗೂ ಶಿಕ್ಷಕರ ಭವಣೆ  ನನಗೆ ಗೊತ್ತಿದೆ. ಅತೀ ಹೆಚ್ಚು ಸವಾಲು ಇರುವ ಕ್ಷೇತ್ರ ಎಂದರೆ ಅದು ಶಿಕ್ಷಣ ಕ್ಷೇತ್ರ ಹಾಗೆಯೆ ಅತೀ ಹೆಚ್ಚು ಅವಕಾಶ ಇರುವ ಕ್ಷೆÃತ್ರ ಎಂದರೆ ಅದು ಕೂಡ ಶಿಕ್ಷಣ ಕ್ಷೇತ್ರವು ಆಗಿದೆ.

Contact Your\'s Advertisement; 9902492681

ನನ್ನ ಮೇಲೆ ಶಿಕ್ಷಣ ಇಲಾಖೆಯ ಋಣವಿದೆ ಏಕೆಂದರೆ ನಾನು ಕೂಡ ಒಬ್ಬ ಸರ್ಕಾರಿ ಶಾಲಾ ಶಿಕ್ಷಕಿಯ ಮಗ. ಈ ಋಣ ತೀರಿಸುವ ಸಲುವಾಗಿ ನನಗೆ ಈ ಖಾತೆ ದೊರೆತಿದ್ದು, ರಾಜ್ಯದಲ್ಲಿ 2 ಲಕ್ಷ ಶಿಕ್ಷಕ-ಶಿಕ್ಷಕಿಯರು ಹಾಗೂ 1 ಕೋಟಿ ವಿಧ್ಯಾರ್ಥಿಗಳು ಬಹಳ ದೊಡ್ಡ ಪರಿವಾರ ಸಿಕ್ಕಿದೆ. ಈ ಪರಿವಾರದ ಹಿತಕ್ಕಾಗಿ ಈ ಪರಿವಾರದ ಕಷ್ಟ ದೂರ ಮಾಡುವ ಕೆಲಸ ನಾನು ಮಾಡುವೆನು.  ಶಿಕ್ಷಣ ಕ್ಷೇತ್ರ ಪವಿತ್ರ ಕ್ಷೇತ್ರ ಎಂದು ಕರೆಯುತ್ತಾರೆ. ಹಾಗೆಯೇ ಒಬ್ಬ ಶಿಕ್ಷಣ ಮಂತ್ರಿಯ ಕೆಲಸ ಕೂಡ ಪವಿತ್ರ ಕೆಲಸ ಆಗಬೇಕಿದೆ. ಶಿಕ್ಷಣ ಇಲ್ಲದೆ ಸಮಾಜ ಇಲ್ಲ ಹಾಗಾಗಿ ಶಿಕ್ಷಣದ ಮಹತ್ವ ಅಪಾರವಾದದ್ದು, ಪ್ರತಿಭೆಗಳನ್ನು ಹೊರ ತರುವ ಶಕ್ತಿ ಇದ್ದರೆ ಅದು ಶಿಕ್ಷಕರಲ್ಲಿ ಮಾತ್ರ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ಪಿ.ಎಸ್ ಕಾಲೇಜಿನ ಮುಖ್ಯಸ್ಥರು ನೆರೆ ಹಾವಳಿ ಬಾಧಿತ ಉತ್ತರ ಕರ್ನಾಟಕದ 10 ಶಾಲೆಗಳನ್ನು ಪುನರ್‌ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ. ಮುಂದಿನ ದಿನಮಾನದಲ್ಲಿ ಮರಳಿ ಬಾ ಶಾಲೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತçಗಳನ್ನ ನೀಡುವ ಕಾರ್ಯ ಕೈಗೊಂಡಿದ್ದೆವೆ ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಮಾತನಾಡಿ, ಶಿಕ್ಷಕರು ಈ ದೇಶದ ಸಂಪತ್ತು. ಶಿಕ್ಷಕರಲ್ಲಿ ದೊಡ್ಡ ಶಕ್ತಿ ತುಂಬಿದವರು ಎಂದರೆ ಅದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು. ಗುರುವಿನ ಆಶೀರ್ವಾದ ಇಲ್ಲದೆ ಯಾರೂ ಕೂಡ ಸಾಧನೆ ಮಾಡಲು ಸಾಧ್ಯವಿಲ್ಲ. ಗುರುವಿನ ಸಹಕಾರ, ಮಾರ್ಗದರ್ಶನ ಇದ್ದರೆ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ತತ್ವ ಸಿದ್ದಾಂತಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥ ರೆಡ್ಡಿ ಅವರು ಮಾತನಾಡಿ, ಶಿಕ್ಷಕರ ಸಮಸ್ಯೆಗಳು ತುಂಬಾ ಇವೆ. ಸರ್ಕಾರ ಅವರಿಗೆ ಇರುವ ಸೌಲಭ್ಯಗಳನ್ನು ನೀಡಿ ಅವರಿಗೆ ತಮ್ಮ ತಮ್ಮ ವೃತ್ತಿಯಲ್ಲಿ ಗಮನ ಹರಿಸುವ ಹಾಗೆ ಮಾಡಬೇಕು. ಹಾಗೂ ಪ್ರತಿ ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಕಾರ್ಯ ನಾವು ಮಾಡುತ್ತಿದ್ದೆವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಂಗಾವತಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯ (ಆಡಳಿತ) ಉಪ ನಿರ್ದೇಶಕಿ  ಅಮಿತಾ ಎನ್. ಯರಗೋಳ್ಕರ್, ಕೊಪ್ಪಳ-ಮುನಿರಾಬಾದ ಸಾರ್ವಜನಿಕ ಶಿಕ್ಷಣ ಇಲಾಖೆಯ (ಅಭಿವೃದ್ಧಿ) ಉಪ ನಿರ್ದೇಶಕ ಎ. ಶ್ಯಾಮಸುಂದರ, ಗಂಗಾವತಿ ತಾಲ್ಲೂಕಿನ ತಹಶೀಲ್ದಾರರು ಹಾಗೂ ದಂಡಾಧಿಕಾರಿ ವಿರೇಶ ಬಿರಾದಾರ, ಗಂಗಾವತಿ ಡಿ.ವೈ.ಎಸ್.ಪಿ. ಬಿ.ಪಿ. ಚಂದ್ರಶೇಖರ, ಗಂಗಾವತಿ ನಗರಸಭೆ ಪೌರಾಯುಕ್ತರು ದೇವಾನಂದ ದೊಡ್ಡಮನಿ, ಗಂಗಾವತಿ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ದಯಾನಂದ ಬಾಬು ಸೇರಿದಂತೆ ಜಿಲ್ಲೆಯ ಶಿಕ್ಷಕ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here