ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಳ್ಳಲಿ: ಮುಸ್ಲಿಂರ ಪರ ಹೋರಾಟಕ್ಕೆ ನಿಂತ ಖ್ಯಾತ ಹೋರಾಟಗಾರ ಹರ್ಷಮಂದರ್

1
129
  • ಏ ಕೆ ಕುಕ್ಕಿಲ

ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ ಹರ್ಷಮಂದರ್ ಅವರು ವ್ಯಕ್ತಪಡಿಸಿರುವ ಪ್ರತಿರೋಧ ವಿನೂತನವಾದುದು ಮತ್ತು ಒಂದು ವೇಳೆ ಈ ಪ್ರತಿರೋಧವು ಚಳವಳಿ ರೂಪವನ್ನು ಪಡೆದುಕೊಂಡು ಬಿಟ್ಟರೆ ಅದರಿಂದ ಪ್ರಭುತ್ವ ವಿಚಲಿತ ಗೊಳ್ಳುವುದು ಖಂಡಿತ.

“ಪೌರತ್ವ ತಿದ್ದುಪಡಿ ಮಸೂದೆಯು ಅಂಗೀಕಾರಗೊಂಡರೆ ನಾನು ನನ್ನ ಹೆಸರನ್ನು ಮುಸ್ಲಿಂ ಎಂದು ನೋಂದಾಯಿಸಿಕೊಳ್ಳುವೆ ಮತ್ತು NRCಗಾಗಿ  ನಾನೆಂದೂ ದಾಖಲೆಗಳನ್ನು ಸಲ್ಲಿಸಲಾರೆ. ದಾಖಲೆ ಸಲ್ಲಿಸದ ಮುಸ್ಲಿಮರಿಗೆ ಯಾವ ಶಿಕ್ಷೆ ನೀಡುತ್ತಿರೋ ಅದನ್ನು ನನಗೂ ನೀಡಿ ಮತ್ತು ನನ್ನ ಪೌರತ್ವವನ್ನು ಹಿಂಪಡೆಯಿರಿ ಎಂದು ಒತ್ತಾಯಿಸುವೆ…” ಎಂದವರು ಟ್ವೀಟ್ ಮಾಡಿದ್ದಾರೆ.

Contact Your\'s Advertisement; 9902492681

ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ನಾನಾ ರೀತಿಯ ಪ್ರತಿಭಟನೆಗಳಲ್ಲೇ ಇದು ಅತ್ಯಂತ ಹೊಸ ರೀತಿಯ ಪ್ರತಿಭಟನೆ. ಅಷ್ಟೇ ವಿನೂತನ ಮತ್ತು ಅಭೂತಪೂರ್ವ. ನೀವೊಮ್ಮೆ ಯೋಚಿಸಿ ನೋಡಿ-  ದೇಶಾದ್ಯಂತ ಲಕ್ಷಾಂತರ ಮಂದಿ ಪ್ರತಿದಿನ ತಮ್ಮ ಹೆಸರನ್ನು ಮುಸ್ಲಿಂ ಎಂದು ನೋಂದಾಯಿಸಿಕೊಳ್ಳುವುದು ಮತ್ತು NRCಗಾಗಿ ದಾಖಲೆ ಸಲ್ಲಿಸಲು ನಿರಾಕರಿಸಿ ಅಸಹಕಾರ ಚಳುವಳಿಯನ್ನು ನಡೆಸುವುದರಿಂದ ಆಗಬಹುದಾದ ಪರಿಣಾಮವೇನು? ಪ್ರಭುತ್ವ ವಿಚಲಿತಗೊಳ್ಳುವುದು ಖಚಿತ. ಮುಸ್ಲಿಮರು ಅಸಹಕಾರ ತೋರುವುದಕ್ಕೂ ಪ್ರತಿಭಟನೆಯೆಂಬ ನೆಲೆಯಲ್ಲಿ ಇತರರು ಹೆಸರು ಬದಲಾವಣೆಯೊಂದಿಗೆ NRC ಪ್ರಕ್ರಿಯೆಯನ್ನೇ ವಿರೋಧಿಸುವುದಕ್ಕೂ ಬಹಳ ವ್ಯತ್ಯಾಸ ಇದೆ. ಅದು ಊಹಾತೀತ ಪರಿಣಾಮವನ್ನು ಉಂಟುಮಾಡಬಹುದು. ಮಾತ್ರವಲ್ಲ, ಅದರಿಂದ NRC ಪ್ರಕ್ರಿಯೆಯನ್ನೇ ರದ್ದು ಪಡಿಸಬೇಕಾದ ಒತ್ತಡಕ್ಕೆ ಸರಕಾರ ಸಿಲುಕಲೂ ಬಹುದು.  ಹರ್ಷ ಮಂದರ್ ಅವರ ಧೈರ್ಯದ ನಡೆಗಾಗಿ ಅವರನ್ನು ನಾನು ಅಭಿನಂದಿಸುವೆ.

A K Kukkila Akk

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here