ಕುಡಿಯುವ ನೀರಿನ ಸಮಸ್ಯೆ ಬರುವ ಮುನ್ನ ವ್ಯವಸ್ಥೆ ಮಾಡುತ್ತೇವೆ; ಕೆ.ವಿ

0
11

ಸುರಪುರ: ತಾಲೂಕಿನ ಒಟ್ಟು 21 ಗ್ರಾಮ ಪಂಚಾಯತಿಯ 62 ಗ್ರಾಮಗಳಲ್ಲಿ ಮುಂದಿನ ಮೇ ಮತ್ತು ಜೂನ್ ಸಮಯಕ್ಕೆ ಕುಡಿಯುವ ನೀರಿನ ಸಮಸ್ಯೆ ಬರುವ ಸಾಧ್ಯತೆ ಇದ್ದು ಅದಕ್ಕಾಗಿ ಈಗಿನಿಂದಲೇ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಹಸಿಲ್ದಾರ್ ಕೆ.ವಿಜಯಕುಮಾರ ತಿಳಿಸಿದರು.

ನಗರದ ತಹಸಿಲ್ದಾರ್ ಕಚೇರಿಯಲ್ಲಿ ನಡೆದ ಟಾಸ್ಕ್ ಫೊರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಈಗಾಗಲೇ ಯಕ್ತಾಪುರ ಗ್ರಾಮ ಪಂಚಾಯತಿಯ ಏಳು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿದ್ದು ಬೋರವೆಲ್ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ,ಇನ್ನುಳಿದಂತೆ ಸೂಗುರು ಗ್ರಾಮ ಪಂಚಾಯತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.ಇನ್ನುಳಿದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಯಾವುದೇ ಕುಡಿಯುವ ನೀರಿನ ಸಮಸ್ಯೆ ಸಧ್ಯ ಎಲ್ಲಾ ಎಂದರು.

Contact Your\'s Advertisement; 9902492681

ಅಲ್ಲದೆ ಕಕ್ಕೇರಾ ಪಟ್ಟಣದ ಮೂರು ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಲಿದ್ದು ಬಿಬಿಎಮ್‍ಪಿ ಕಡೆಯಿಂದ ಅನುದಾನ ಬಂದಿದ್ದು ಅದರಲ್ಲಿ ಒಂದು ವಾರ್ಡ್‍ಲ್ಲಿ ಬೋರವೆಲ್ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ,ಇನ್ನುಳಿದ ವಾರ್ಡ್‍ಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುವುದು ಎಂದರು.

ಅಲ್ಲದೆ ಸುರಪುರ ನಗರದ 8 ವಾರ್ಡ್‍ಗಳಲ್ಲಿ ನೀರಿನ ಸವiಸ್ಯೆ ಉಂಟಾಗುವ ಸಾಧ್ಯತೆ ಇದ್ದು ಇಲ್ಲಿಯೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದು,ಈಗ ಸಧ್ಯೆ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲಾ,ಕೃಷ್ಣಾ ನದಿಗೂ 1 ಟಿಎಮ್‍ಸಿ ನೀರು ಬಿಡಲಾಗುತ್ತಿದ್ದು ಏಪ್ರಿಲ್ ತಿಂಗಳಿಗೆ ಬೇಕಾಗುವಷ್ಟು ನೀರು ಸಂಗ್ರಹ ಮಾಡಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಹಣಮಂತ್ರಾಯ ಪಾಟೀಲ್,ನಗರಸಭೆ ಪ್ರಭಾರಿ ಪೌರಾಯುಕ್ತ ಶಾಂತಪ್ಪ,ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ ಪ್ರವೀಣ,ಸುರಪುರ ನಗರಸಭೆ ಜೆ.ಇ ಮಹೇಶ ಸೇರಿದಂತೆ ಕಂದಾಯ ಇಲಾಖೆಯ ಅಶೋಕ ಹಾಗೂ ಇತರರು ಇದ್ದರು.

ಕೆಂಭಾವಿ ಬಳಿಯಲ್ಲಿನ ಎಸ್ಕೇಪ್ ಗೇಟ್‍ಗೆ ಭೇಟಿ ನೀಡಿದ್ದು ಸ್ವಲ್ಪ ಬಿರುಕು ಕಾಣಿಸಿಕೊಂಡಿದ್ದರಿಂದ ಮರಳಿನ ಚೀಲಗಳಿಂದ ಮುಚ್ಚಲಾಗಿದೆ.ಇದರ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು,ಎಸ್ಕೆಪ್ ಗೇಟ್‍ಗಳ ಮೂಲಕ ಹತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ದೊರೆಯಲಿದೆ. -ಕೆ.ವಿಜಯಕುಮಾರ, ತಹಸಿಲ್ದಾರ್.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here