ಅಷ್ಟಗಿಗೆ ತೇಗಲತಿಪ್ಪಿ ತಿರುಗೇಟು; ಕಸಾಪ ರಾಜ್ಯಾಧ್ಯಕ್ಷರ ಅನುಮೋದನೆ ಪಡೆದೇ ನೇಮಕ ಮಾಡಲಾಗಿದೆ

0
545

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಎರಡುವರೆ ವರ್ಷಗಳಿಂದ ಸಾಹಿತ್ಯ, ಕಲೆ, ಸಂಗೀತ ಮತ್ತು ಸಾಂಸ್ಕøತಿಕವಾಗಿ ಅರ್ಥಪೂರ್ಣ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಇಡೀ ಜಿಲ್ಲೆಯ ಜನತೆಗೆ ಗೊತ್ತಿರುವ ಸಂಗತಿ. ಹೀಗಾಗಿ ಜಿಲ್ಲಾ ಕಸಾಪ ದ ಹಿಂದಿನ ಗೌರವ ಕಾರ್ಯದರ್ಶಿಯಾಗಿದ್ದ ಯಶ್ವಂತರಾಯ ಅಷ್ಟಗಿ ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಇನ್ನಷ್ಟು ಚುರುಕುಗೊಳಿಸಲು ಪರಿಷತ್ತಿನ ಪದಾಧಿಕಾರಿಗಳ ಬದಲಾವಣೆ ನಮಗೆ ಅನಿವಾರ್ಯವಾಗಿದೆ. ಯಶ್ವಂತರಾಯ ಅಷ್ಟಗಿ ಅವರು ಕಳೆದ ಎರಡುವರೆ ವರ್ಷಗಳು ನನ್ನ ಜೊತೆ ಇದ್ದ ಸಂದರ್ಭದಲ್ಲಿ ನನ್ನ ಸರ್ವಾಧಿಕಾರ ಧೋರಣೆ ಅವರ ಕಣ್ಣಿಗೆ ಕಾಣದಿರುವುದು, ಈ ಎರಡು ದಿನಗಳಲ್ಲಿ ಎಲ್ಲಿಂದ ಏಕಚಕ್ರಾಧಿಪತ್ಯ ಕಂಡು ಬಂತು ಎಂಬುದು ಹಾಸ್ಯಾಸ್ಪದ ಹೇಳಿಕೆಯಾಗಿದೆ ಎಂದಿದ್ದಾರೆ.

Contact Your\'s Advertisement; 9902492681

ನಾನು ಕಳೆದ ಇಪ್ಪತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಸಾಂಸ್ಕøತಿಕ ಸಂಘಟನೆಯನ್ನು ಮಾಡುತ್ತಾ ಬಂದಿದ್ದೇನೆ. ಇಷ್ಟು ವರ್ಷಗಳ ಪರಿಶ್ರಮದ ಫಲವಾಗಿ ಜಿಲ್ಲೆಯ ಜನತೆ ನನಗೆ ಕನ್ನಡ ಸಾರಸ್ವತ ಲೋಕದ ಬಹು ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಜನರ ವಿಶ್ವಾಸ ಉಳಿಸುವ ಕಾರ್ಯ ಮಾಡಿದ್ದೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಹಿತ್ಯಿಕ ಚಟುವಟಿಕೆಗಳು ಮಾಡುತ್ತಿರುವ ಕಾರಣಕ್ಕಾಗಿ ಪರಿಷತ್ತಿನಲ್ಲಿ ಭೌತಿಕವಾಗಿಯೂ ಅನೇಕ ರೀತಿಯ ಬದಲಾವಣೆಗಳು ಆಗಿದ್ದು ಯಾರೂ ಮರೆಯುವಂತಿಲ್ಲ ಎಂದು ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳನ್ನೇ ಅರಿಯದ ಅಷ್ಟಗಿಯವರು ನಿಯಮಗಳ ಬಾಹಿರವಾಗಿ ಪರಿಷತ್ತನ್ನು ಮುನ್ನಡೆಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದು, ಮೊದಲು ಪರಿಷತ್ತಿನ ನಿಬಂಧನೆಗಳನ್ನು ಅಧ್ಯಯನ ಮಾಡಲಿ, ಆಮೇಲೆ ಆರೋಪ ಮಾಡಲಿ ಎಂದು ತೇಗಲತಿಪ್ಪಿ ಅವರು ಸಲಹೆ ನೀಡಿದರು.

ಪರಿಷತ್ತಿನ ಕಾರ್ಯಕ್ರಮಗಳ ಸಂಘಟನೆಗೆ ಸಮಯ ಕೊಡಬೇಕು ಹೊರತು, ಫೋಟೋ ಫೋಸ್ ಗೆ ಅಲ್ಲ. ಕೇವಲ ಪ್ರಚಾರ ಪಡೆಯುವುದು ಬಿಟ್ಟು ನಿಜವಾದ ಕನ್ನಡ ಕಟ್ಟುವ ಕೆಲಸ ಮಾಡಲಿ, ಆಮೇಲೆ ನನ್ನ ಬಗ್ಗೆ ಮಾತಾಡಲಿ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ಅನುಮೋದನೆ ಪಡೆದ ನಂತರವೇ ಮತ್ತೊಬ್ಬರನ್ನು ಅವರ ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಅಧಿಕಾರದ ವ್ಯಾಪ್ತಿಯೇ ಗೊತ್ತಿರದ ಅಷ್ಟಗಿಯವರು, ಪರಿಷತ್ತಿನ ಬಗ್ಗೆ ಮಾತಾಡುವ ನೈತಿಕಲೆ ಅವರಿಗಿಲ್ಲ. ಪರಿಷತ್ತು ನಾಡಿನಲ್ಲಿಯೇ ಘನತೆವೆತ್ತ ಸಂಸ್ಥೆಯಾಗಿದೆ. ಪರಿಷತ್ತಿನ ಘನತೆ ಹೆಚ್ಚಿಸುವ ಕಾರ್ಯ ನಾವುಗಳು ಮಾಡುತ್ತಿದ್ದೇವೆ. ಜಿಲ್ಲೆಯನ್ನು ಸಾಂಸ್ಕøತಿಕ ಜಿಲ್ಲೆಯನ್ನಾಗಿಸುವ ಗುರಿಯನ್ನಿಟ್ಟುಕೊಂಡು ನಿರಂತರವಾಗಿ ಕಾರ್ಯ ಚಟುವಟಿಕೆಗಳು ನಡೆಸುತ್ತಿದ್ದೇವೆ ಎಂದಿದ್ದಾರೆ.

ಕನ್ನಡ ಕಟ್ಟುವ ಕೆಲಸ ಮಾಡಿ, ಅದನ್ನು ಬಿಟ್ಟು ರಾಜಕೀಯವಾಗಿ ಹೇಳಿಕೆ ಕೊಡುವ ನಿಮ್ಮ ಪ್ರವೃತ್ತಿ ಬದಲಾಯಿಸಿಕೊಳ್ಳಿ. ಏಕೆಂದರೆ ನೀವು ಪರಿಷತ್ತಿಗೆ ಸಮಯ ಕೊಡದೆ ಇದ್ದರೂ, ಪರಿಷತ್ತು ಮಾತ್ರ ನಿಮಗೆ ಸಾಕಷ್ಟು ಪ್ರಚಾರ ಕೊಟ್ಟಿದೆ ಎಂಬುದು ಯಾವತ್ತೂ ಮರೆಯಬಾರದು ಎಂದು ಅವರು ಸಲಹೆ ನೀಡಿದರು.

ಎಲ್ಲರ ವಿಶ್ವಾಸದೊಂದಿಗೆ ಪರಿಷತ್ತನ್ನು ಹೊಸ ದಿಕ್ಕಿನೆಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಪ್ರತಿಭೆಗಳಿಗೆ ಪ್ರೋತ್ಸಾಹ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪರಿಷತ್ತಿಗೆ ಯಾವುದೇ ಜಾತಿ, ಧರ್ಮ ಇಲ್ಲವೆಂಬುದು ಅರ್ಥ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here