ಬೇರೆ ಪ್ರದೇಶಕ್ಕೆ ಕಬ್ಬು ಮಾರಾಟ: ಪರವಾನಿಗೆ ಪಡೆಯಲು ರೈತರಲ್ಲಿ ಡಿ.ಸಿ. ಮನವಿ

0
14

ಕಲಬುರಗಿ: ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತರು ಒಂದು ಸಕ್ಕರೆ ಕಾರ್ಖಾನೆ ಮೀಸಲು ಪ್ರದೇಶದಿಂದ ಬೇರೆ ಪ್ರದೇಶಕ್ಕೆ ಕಬ್ಬು ಮಾರಾಟ ಮಾಡಲು ಬಯಸಿದ್ದಲ್ಲಿ ಜಿಲ್ಲಾಧಿಕಾರಿಗಳ ಪರವಾನಿಗೆ ಪಡೆಯುವುದು ಕಡ್ಡಾಯ. ಹೀಗಾಗಿ ರೈತ ಸಮುದಾಯ ಪರವಾನಿಗೆ ಪಡೆಯುವಂತೆ ಡಿ.ಸಿ. ಯಶವಂತ ವಿ. ಗುರುಕರ್ ಮನವಿ ಮಾಡಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಶುಗರಕೇನ್ (ರೆಗ್ಯೂಲೇಷನ್ ಮತು ಡಿಸ್ಟ್ರಿಬೂಷನ್) ಕಾಯ್ದೆಯ ಶೆಡ್ಯೂಲ್-2 ಪ್ರಕಾರ ನಿಗಧಿತ ನಮೂನೆ-2ರಲ್ಲಿ ವಿವರಗಳೊಂದಿಗೆ ಅರ್ಜಿ ಭರ್ತಿ ಮಾಡಿ ಅದರೊಂದಿಗೆ 100 ರೂ. ಸೆಲ್ಫ್ ಚೆಕ್ ಮತ್ತು ನಿಗದಿತ ಶುಲ್ಕ 5 ರೂ. ಗಳನ್ನು ಕೆ2 ಚಲನ್ ಮೂಲಕ ಲೆಕ್ಕ ಶೀರ್ಷಿಕೆ 0070-60-800-3-04-000 ಗೆ ಸಂದಾಯ ಮಾಡಿ ಕಲಬುರಗಿ ಮಿನಿ ವಿಧಾನಸೌಧದಲ್ಲಿರುವ ಆಹಾರ ಇಲಾಖೆಯಲ್ಲಿ ಸ್ಥಾಪಿಸಲಾಗಿರುವ ಕೌಂಟರ್‍ನಲ್ಲಿ ಅರ್ಜಿ ಸಲ್ಲಿಸಿದಲ್ಲಿ ನಮೂನೆ-1ರಲ್ಲಿ ಕಬ್ಬು ರಫ್ತಿಗೆ ಪರವಾನಿಗೆ ನೀಡಲಾಗುತ್ತದೆ ಎಂದರು.

Contact Your\'s Advertisement; 9902492681

ಜಿಲ್ಲೆಯ ಎನ್.ಎಸ್.ಎಲ್ ಶುಗರ್ ಕಾರ್ಖಾನೆ ವ್ಯಾಪ್ತಿಯ 110 ಗ್ರಾಮಗಳ 13 ಲಕ್ಷ ಟನ್ ಕಬ್ಬು ಮತ್ತು ಚಿಣಮಗೇರಾದ ಕೆ.ಪಿ.ಆರ್.ಶುಗರ್ ಕಂಪನಿಗೆ 16 ಗ್ರಾಮಗಳ 18 ಲಕ್ಷ ಕಬ್ಬು ಕಟಾವಿಗೆ ಪರವಾನಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಈ ಬಾರಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 60 ಲಕ್ಷ ಟನ್ ಕಬ್ಬು ಬೆಳೆಯಲಾಗಿದೆ. ಪ್ರಸಕ್ತ 2022-23ನೇ ಸಾಲಿಗೆ ಕಬ್ಬು ನುರಿಸುವ ಕಾರ್ಯ ಕೈಗೊಳ್ಳುವಂತೆ ಎಲ್ಲಾ ಸಕ್ಕರೆ ಕಾರ್ಖಾನಗೆಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಇತ್ತೀಚಿಗೆ ಜಿಲ್ಲೆಯಲ್ಲಿ ರೈತ ಮತ್ತು ಕಾರ್ಖಾನೆ ನಡುವೆ ದ್ವಿಪಕ್ಷೀಯ ಒಪ್ಪಂದ ಜಾರಿಗೆ ತಂದಿದ್ದು, ಇದರಿಂದ ಜಿಲ್ಲೆಯ ರೈತರಿಗೆ ಒಟ್ಟಾರೆ 60 ಕೋಟಿ ರೂ. ಲಾಭವಾಗಲಿದೆ. ಗುರುವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಲಿದ್ದು, ಅಲ್ಲಿ ಎಫ್.ಆರ್.ಪಿ. ದರ ನಿಗದಿಯಾಗಲಿದೆ. ಇದರನ್ವಯ ಜಲ್ಲೆಯಲ್ಲಿ ಸಭೆ ನಡೆಸಿ ದರ ನಿಗದಿಪಡಿಸಲಾಗುವುದು ಎಂದು ಡಿ.ಸಿ. ಅವರು ತಿಳಿಸಿದರು.

ಜಿಲ್ಲೆಯ ಎನ್.ಎಸ್.ಎಲ್., ರೇಣುಕಾ ಹಾಗೂ ಕೆ.ಪಿ.ಆರ್. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ಇಳುವರಿಯಲ್ಲಿ ಹೆಚ್ಚು ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಇದರ ಅಧ್ಯಯನಕ್ಕೆ ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯ ಇಬ್ಬರು ತಜ್ಞರನ್ನು ಜಿಲ್ಲೆಗೆ ಕರೆಸಿದ್ದು, ಪರಿಶೀಲಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಮತ್ತು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here