ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ : ಭುವನೇಶ್ ದೇವಿದಾಸ್ ಪಾಟೀಲ್

0
51

ಕಲಬುರಗಿ: ನಗರದಲ್ಲಿ ಪಾಲಿಕೆ ವತಿಯಿಂದ ಕಸದ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ವೈಜ್ಞಾನಿಕ ರೀತಿಯ ತ್ಯಾಜ್ಯ ನಿರ್ವಹಣೆ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಹೊಣೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ದೇವಿದಾಸ್ ಪಾಟೀಲ್ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಡಾರ್ವಿನ್ ಸಭಾಂಗಣದಲ್ಲಿ ಆಯೋಜಿಸಿದ “ಘನತ್ಯಾಜ್ಯ ನಿರ್ವಹಣೆಯ ಪರಿಹಾರಗಳು ಮತ್ತು ಹವಾಮಾನ ಬದಲಾವಣೆ” ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು.

Contact Your\'s Advertisement; 9902492681

ದೇಶದಲ್ಲಿ ಅರಣ್ಯ ಶೇ.22 ರಿಂದ 23 ರಷ್ಟು ಮಾತ್ರ ಉಳಿದಿದೆ. ಪ್ಲಾಸ್ಟಿಕ್ ಬಳಕೆ ಕೂಡ ಹೆಚ್ಚು ಬಳಸಲಾಗುತ್ತಿದೆ. 2016 ರಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕಠಿಣ ನಿಯಮ ಜಾರಿಗೊಳಿಸಿ ಪ್ಲಾಸ್ಟಿಕ್ ಬಂದ್ ಮಾಡಲಾಗಿತ್ತು. ಆದರೂ ನಿಯಮ ಮೀರಿ ಬಳಸಲಾಗುತ್ತಿದೆ.

ಬದಲಾವಣೆ ಪ್ರತಿಯೊಬ್ಬ ವ್ಯಕ್ತಿಯಿಂದ ಆಗಬೇಕಿದೆ. ಸಮಾಜದಲ್ಲಿ ಆರೋಗ್ಯಕರ ಪರಿಸರ ನಿರ್ಮಿಸಲು ಪ್ಲಾಸ್ಟಿಕ್ ಮುಕ್ತಗೊಳಿಸಲು ಜನರ ಸಹಕಾರ ಮತ್ತು ಸಹಭಾಗಿತ್ವ ಬಹಳ ಅವಶ್ಯಕ. ಆಗ ಮಾತ್ರವೇ ಇಂತಹ ಕಾರ್ಯಗಾರ ಬಹು ಉಪಯೋಗವಾಗಲಿದೆ ಎಂದರು.

ರಾಜ್ಯದಲ್ಲಿ ಹಸಿ ಕಸ, ಒಣ ಕಸ ಎಂದು ಎರಡು ರೀತಿ ಬೇರ್ಪಡಿಸಿ ವಿಲೇವಾರಿ ಮಾಡಬೇಕಾಗುತ್ತದೆ. ಅಡುಗೆ ಮನೆಯ ವೇಸ್ಟ್ ನಿಂದ ಬಯೋ ಅನಿಲ ತಯಾರಿಸಬಹುದು.
ಒಣ ಕಸದಲ್ಲಿ ಪ್ಲಾಸ್ಟಿಕ್ ಕಸ,ಬ್ಯಾಟರಿ, ಟ್ಯೂಬ್ ಲೈಟ್,
ಸ್ಯಾನಿಟರಿ ವೇಸ್ಟ್, ಮೆಡಿಕಲ್ ವೇಸ್ಟ್ ಮತ್ತು ಈ ವೇಸ್ಟ್ ಅಂತಹವುಗಳನ್ನು ಪುನರ್ ಬಳಕೆ ಮಾಡಬಹುದು.

ಪ್ರಮುಖವಾಗಿ ಒಣಕಸ ಹಸಿ ಕಸ ಎಂದು ಕಸವನ್ನು ವಿಂಗಡಣೆ ಮಾಡಿ ವಿಲೇವಾರಿ ಮಾಡಲಾಗುತ್ತಿದೆ. ನಾಗರಿಕರು ತ್ಯಾಜ್ಯ ಕಸವನ್ನು ತಮ್ಮದೇ ಜವಾಬ್ದಾರಿ ಎಂದು ತಿಳಿದು ವಿಲೇವಾರಿ ಮಾಡಿದರೆ ಸ್ವಚ್ಚ ಪರಿಸರ ಸಮಾಜವನ್ನಾಗಿ ನಿರ್ಮಿಸಲು ಸಾಧ್ಯ ಎಂದರು.

ಉದನೂರು ಗ್ರಾಮದ ಪ್ರದೇಶದಲ್ಲಿ ಕಸದ ಗುಡ್ಡ ಸುಮಾರು 18 ವರ್ಷಗಳಿಂದಿದೆ. ಅದನ್ನು ಪಾರಂಪರಿಕ ವ್ಯರ್ಥ ಕಸ ಎಂದು ಕರೆಯುತ್ತೇವೆ. ಅದರ ನಿರ್ವಹಣೆ ಪ್ರಕ್ರಿಯೆಗೆ ಟೆಂಡರ್ ಕರೆಯಲ್ಲಿದ್ದೇವೆ. ಕಡಿಮೆ ತ್ಯಾಜ್ಯ, ವೈಜ್ಞಾನಿಕ ಕಸದ ವಿಲೇವಾರಿ ಮತ್ತು ಅದರ ಪುನರ್ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದೆ. ಒಣ ಕಸದಲ್ಲಿ ಪ್ಲಾಸ್ಟಿಕ್ ಬರುತ್ತದೆ ಅದನ್ನು ರಿಸೈಕಲ್ ಮಾಡಿ ಮರುಬಳಕೆ ಮಾಡಿ ವಸ್ತುಗಳನ್ನು ಉತ್ಪಾದನೆ ಮಾಡಬಹುದು. ಅದನ್ನು ಕೂಡ ಪಾಲಿಕೆಯಲ್ಲಿ ಪ್ರಾರಂಭ ಮಾಡಲಾಗುತ್ತಿದೆ. ಮೊದಲು ಪಾಲಿಕೆಯಲ್ಲಿ ವಾಹನಗಳು ಇರಲಿಲ್ಲ. ಮನೆ ಮನೆಗೆ, ಮನೆ ಮನೆಯಿಂದ ಹಸಿ ಕಸ ಒಣ ಕಸ ಎಂದು 161 ವಾಹನಗಳಿಂದ ನಗರದಲ್ಲಿ ತ್ಯಾಜ್ಯ ವಿಲೇವರಿ ಮಾಡಲಾಗುತ್ತದೆ.

ವಿದ್ಯಾರ್ಥಿಗಳ ಪ್ರಾಧ್ಯಾಪಕರು ಸಂಶೋಧನಾ ವಿದ್ಯಾರ್ಥಿಗಳು ಎಲ್ಲರೂ ಇದರ ಬಗ್ಗೆ ಗಮನ ಹರಿಸಬೇಕು ನೀವೆಲ್ಲರೂ ಹಸಿ ಕಸ ಒಣ ಕಸ ಎಂದು ವಿಲೇವಾರಿ ಮಾಡಿ, ಬದಲಾವಣೆ ನಮ್ಮಿಂದಲೇ ಶುರು ಮಾಡಬೇಕು ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಮಾತನಾಡಿ ಘನ ತ್ಯಾಜ್ಯ ನಿರ್ವಹಣೆ ಪರಿಹಾರಗಳು ಮತ್ತು ಹವಾಮಾನ ಬದಲಾವಣೆ ಕಾರ್ಯಗಾರ ಉದ್ದೇಶಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ವಿಷಯದ ಬಗ್ಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು. ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡಲಾಗಿದೆ. ಪ್ಲಾಸ್ಟಿಕ್ ನಿಷೇಧ ಮತ್ತು ಪ್ಲಾಸ್ಟಿಕ್ ಮರು ಬಳಕೆ ಬಗೆ ವಿವರಿಸಿದರು. ವಿದ್ಯಾರ್ಥಿಗಳು ಬಿದಿರು ಹೇಗೆ ಬೆಳೆಸಬೇಕು ಎಂಬುದರ ಕುರಿತು ಹೆಚ್ಚು ಅಧ್ಯಯನ ಕೈಗೊಳ್ಳಬಹುದು. ಈಗಾಗಲೇ ವಿಶ್ವವಿದ್ಯಾಲಯದ ಮುಖ್ಯ ದ್ವಾರಗಳಲ್ಲಿ ಬಿದಿರು ಬೆಳೆಸಲಾಗಿದೆ ‌ ಎಂದು ಹೇಳಿದರು.

ವಿದ್ಯಾ ವಿಷಯಕ ಪರಿಷತ್ ಸದಸ್ಯ ಡಾ. ಸುರೇಶ ಜಂಗೆ, ಗುಲಬರ್ಗಾ ವಿವಿಯ ಮಾಜಿ ಕುಲಸಚಿವ ಪ್ರೊ. ಪ್ರತಾಪ್ ಸಿಂಗ್ ತಿವಾರಿ, ಕಾಳಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಡಾ. ಎಂ. ಎಸ್. ಪ್ರಭುದೇವ, ಡಾ. ಕಾಳಚಾರ್ ಎಚ್ ಸಿ ಬಿ, ಅಭಿಶೇಕ್ ವಿ. ಎಸ್ ಉಪಸ್ಥಿತರಿದ್ದರು.

ಪ್ರಾಣಿಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ. ಕೆ. ವಿಜಯ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ ಅತಿಥಿ ಪರಿಚಯಿಸಿದರು. ಪರಿಸರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಪ್ರಕಾಶ ಕರಿಯಜ್ಜನವರ್ ವಂದಿಸಿದರು.

ಪ್ರಾಣಿಶಾಸ್ತ್ರ ಹಾಗೂ ಪರಿಸರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯಶೋಧ ಮತ್ತು ಶ್ರೀದೇವಿ ಸ್ವಾಗತ ಗೀತೆ ಹಾಡಿದರು. ಅದೀವಾ ಶಿರೀನ ಕಾರ್ಯಕ್ರಮ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here