ಹಾಲುಮತ ಸಮಾಜಕ್ಕೆ ರೇವಣಸಿದ್ದೇಶ್ವರರು ಸಮಾಜಕ್ಕೆ ದಿಕ್ಸೂಚಿ

0
17

ಶಹಾಬಾದ: ಹಾಲುಮತ ಸಮಾಜದ ಭಕ್ತಶೇಷ್ಠ ಕನಕದಾಸ, ರೇವಣಸಿದ್ದೇಶ್ವರ ಅವರಂತಹ ಮಹಾನ್ ದಾರ್ಶನಿಕರು ದೇಶಕ್ಕೆ ಕಾಣಿಕೆ ನೀಡುವ ಮೂಲಕ ಸಮಾಜಕ್ಕೆ ದಿಕ್ಸೂಚಿಯಾಗಿದ್ದಾರೆ ಎಂದು ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾಧ್ಯಕ್ಷ ಬಸವರಾಜ ಮದ್ರಿಕಿ ಹೇಳಿದರು.

ಅವರು ಶುಕ್ರವಾರ ತಾಲೂಕಿನ ಸುಕ್ಷೇತ್ರ ಹೊನಗುಂಟಾ ಗ್ರಾಮದ ಶ್ರೀ ಶಿವಸಿದ್ಧ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಪೂಜ್ಯ ಪದ್ಮಣಪ್ಪ ಅಪ್ಪ ಅವರ ನೇತೃತ್ವದಲ್ಲಿ ಆಯೋಜಿಸಲಾದ ಜಗದ್ಗುರು ಶ್ರೀ ರೇವಸಿದ್ದೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾಲುಮತ ಸಮಾಜ ತನ್ನದೇಯಾದ ಸಂಸ್ಕøತಿ ಹೊಂದಿದ್ದು, ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ತನ್ನದೇಯಾದ ಮಹತ್ವ ಪಡೆದಿದೆ.ಚರಿತ್ರೆಯಲ್ಲಿ ಹಾಲುಮತ ಸಮಾಜದ ಭಕ್ತಶೇಷ್ಠ ಕನಕದಾಸ, ರೇವಣಸಿದ್ದೇಶ್ವರ ಅವರಂತಹ ಮಹಾನ್ ದಾರ್ಶನಿಕರು ದೇಶಕ್ಕೆ ಕಾಣಿಕೆ ನೀಡುವ ಮೂಲಕ ಸಮಾಜಕ್ಕೆ ದಿಕ್ಸೂಚಿಯಾಗಿದ್ದಾರೆ ಎಂದರು.

Contact Your\'s Advertisement; 9902492681

ಹಾಲುಮತ ಸಮಾಜ ಶ್ರಮ ಸಂಸ್ಕೃತಿಯ ಪ್ರತೀಕವಾಗಿದೆ. ಈ ಸಮಾಜದವರು ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಈಗಲೂ ಮುಂದುವರೆಸಿಕೊಂಡು ಬಂದಿದ್ದಾರೆ. ಕುರುಬ ಸಮಾಜದ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಜಾಗೃತಿ ಆಗಬೇಕಿದೆ. ರೇವಣಸಿದ್ದ, ಮಂಕಸಿದ್ಧ, ಅಮೋಘಸಿದ್ದ ಗುರುಪೀಠಹಾಲುಮತ ಸಂಸ್ಕೃತಿಯನ್ನು ತಾಯಿಯಂತೆ ರಕ್ಷಿಸಿಕೊಂಡು ಬಂದಿವೆ. ಈಗಲಾದರೂ ಸಮಾಜ ಜನರು ಎಚ್ಚತ್ತು, ತಮ್ಮ ಈ ಸಾಂಪ್ರದಾಯಿಕ ಮಠಗಳನ್ನು ಮುನ್ನೆಲೆಗೆ ತಂದು, ಅವುಗಳ ಭೂಮಿಕೆಯಲ್ಲಿ ಸಮಾಜವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು.

ತಾಲೂಕಾ ಗೊಂಡ ಕುರುಬ ಸಮಾಜದ ಅಧ್ಯಕ್ಷ ಸಾಯಬಣ್ಣ ಕೊಲ್ಲೂರ್ ಹಾಗೂ ವಿಜಯಕುಮಾರ ಕಂಠಿಕರ್ ಮಾತನಾಡಿ, ಹಾಲುಮತದ ಶ್ರೇಷ್ಠ ಗುರು ರೇವಣಸಿದ್ದೇಶ್ವರರು ನಮ್ಮ ಸಮಾಜಕ್ಕೆ ಕಣ್ಮಣಿ.ಆದರೆ ಇಂದು ರೇವಣಸಿದ್ದೇಶ್ವರರ ಮಾಡಿದ ಮಹಾನ್ ಕಾರ್ಯವನ್ನು ಬಲ್ಲವರಿಂದ ತಿಳಿದುಕೊಳ್ಳಬೇಕಾಗಿದೆ.ಇಲ್ಲದಿದ್ದರೇ ರೇವಣಸಿದ್ದೇಶ್ವರರ ಇತಿಹಾಸವನ್ನು ತಿರುಚುವ ಕೆಲಸ ಮುಂದಾಗುತ್ತಾರೆ.ಆದ್ದರಿಂದ ಹಾಲುಮತದ ಸಮಾಜದ ಜನರು ರೇವಣಸಿದ್ದೇಶ್ವರರ ಜಯಂತಿ ಆಚರಿಸುವ ಮೂಲಕ ಬೆಳಕಿಗೆ ತರುವಂತ ಹಾಗೂ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದರು.

ಪ್ರಮುಖರಾದ ಮಾರ್ತಾಂಡ್ ಬುರ್ಲಿ, ಈರಣ್ಣ ಕರಗಾರ್, ಚಂದ್ರಮ ಕರಗಾರ್,ಅರುಣ ಕೊಡಸಾ, ಭೋತಾಳಿ ಪೂಜಾರಿ, ಮಲಪ್ಪಾ ಮರ್ತೂರ, ಸುರೇಶ ಕಂಠೀಕರ್, ಯಲ್ಲಾಲಿಂಗ ಪೂಜಾರಿ, ಹುಲಿಯಪ್ಪ ಕರಗಾರ್, ಶಿವು ಮಿಣಜಿಗಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here