ತಳವಾರಗೇರಾ-ವೀರತಪಸ್ವಿ ಚನ್ನವವೀರ ಶಿವಾಚಾರ್ಯರ ಜಾತ್ರೆ; ಪುರಾಣ ಕಾರ್ಯಕ್ರಮ

0
14

ಸುರಪುರ: ತಾಲೂಕಿನ ತಳವಾರಗೇರಾ ಗ್ರಾಮದ ವೀರತಪಸ್ವಿ ಚನ್ನವೀರ ಶಿವಾಚಾರ್ಯ ಮಹಾಸ್ವಾಮೀಜಿ ರವರ 16ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಶಿವಶರಣೆ ಸಜ್ಜಲಗುಡ್ಡದ ಶರಣಮ್ಮನವರ ಮಹಾ ಪುರಾಣ ಪ್ರವಚನ ವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮಾಗಣಗೇರಿ ಬ್ರಹನ್ಮಠದ ಪೀಠಧಿಪತಿಗಳಾದ ಡಾ. ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತನಾಡಿ,ಪ್ರತಿಮಾನವನು ತನ್ನ ಜೀವನದಲ್ಲಿ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು, ಪವಾಡಗಳನ್ನು, ಜೀವನದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರಿಯಾದ ಮಾರ್ಗದಲ್ಲಿ ನಡಿಯಬೇಕೆಂದು ತಿಳಿಸಿದರು.

ಜಾತ್ರಾಮಹೋತ್ಸವದ ನಿಮಿತ್ಯ 11 ದಿನಗಳ ಕಾಲ ಪ್ರತಿದಿನ ರಾತ್ರಿ ಪುರಾಣ ಪ್ರವಚನ ನಡೆಯುತ್ತದೆ. ಏಪ್ರಿಲ್ 09 ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾ ಅಭಿಷೇಕ್, ಊರಿನ ಪ್ರಮುಖ ಬಿದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಂತರ ಜಂಗಮ ವಟುಗಳಿಗೆ ಅಯ್ಯಚಾರ ನಂತರ ಸಾಮೂಹಿಕ ವಿವಾಹ ನೆರವೇರಲಿದೆ.. ಅಂದು ಸಂಜೆ 6.30 ಕ್ಕೆ ರಥೋತ್ಸವ ನಡೆಯಲಿದೆ ಎಂದು ಸ್ವಾಮೀಜಿಯವರು ಮಾಹಿತಿ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮವನ್ನು ಶಾಲೆಯ ಮುಖ್ಯಗುರುಗಳಾದ ವಾಸುದೇವ ಅರಸೀಕೆರೆ ಸ್ವಾಗತಿಸಿ, ನಿರೂಪಿಸಿದರು. ಶಿವಮೂರ್ತಿ ಸ್ವಾಮಿ ವಂದಿಸಿದರು. ಊರಿನ ಪ್ರಮುಖರಾದ ವೀರಭದ್ರಯ್ಯ ಹಿರೇಮಠ್, ಶರಬಯ್ಯಾ ಸ್ವಾಮಿ, ರಾಮಚಂದ್ರ ದೊರಿ, ದ್ಯಾವಪ್ಪ ಚನ್ನಪಟ್ಟಣ, ಮಲ್ಲಣ್ಣ ಗೌಡ ಪಾಟೀಲ್, ನರಸಯ್ಯ ಗಳದಿಂನ್ನಿ, ನಾಗಯ್ಯ ಸ್ವಾಮಿ, ಜೇಟ್ಟೆಪ್ಪ ಚನ್ನಪಟ್ಟಣ, ಶ್ರೀ ಮಠದ ಶಾಲೆಯ ಶಿಕ್ಷಕರು ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here