ಬಿಸಿಲು ಹೆಚ್ಚಳ: ಮನರೇಗಾ ಕಾರ್ಮಿಕರ NMMS ಕೈಬಿಡುವಂತೆ ಆಗ್ರಹ

0
24

ಕಲಬುರಗಿ; ತೊಗರಿಯ ನಾಡಿನಲ್ಲಿ ಬಿಸಿಲು ತಾಪ ಹೆಚ್ಚಾಗಿರುವುದಿಂದ ಕೃಷಿ ಕೂಲಿಕಾರರ ಹಿತದೃಷ್ಟಿಯಿಂದ ಎನ್ಎಂಎಂಎಸ್ ಕೈಬಿಟ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟ್ಟಿ ಅವರು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಬೇಸಿಗೆ ಕಾಲದಲ್ಲಿ ಉರಿ ಬಿಸಿಲು ಅತಿ ಹೆಚ್ಚಾಗಿ ಇರೊದರಿಂದ ಮನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಕೆಲಸದ ಸಮಯ ಬೆಳಿಗ್ಗೆ 6 ರಿಂದ11 ಗಂಟೆಯವರೆಗೆ ಕೆಲಸ ಕೊಡಬೇಕು, ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಿಸಿಲಿನಲ್ಲಿ ಕೂಡಿಸಿ ಎನ್ಎಂಎಸ್ ಹಾಜರಿ ಪಡೆಯುವುದು ರದ್ದು ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ

Contact Your\'s Advertisement; 9902492681

ಬೇಸಿಗೆಯಲ್ಲಿ ನರೇಗಾ ಕೂಲಿಕಾರರಿಗೆ ಕೆಲಸದ ಪ್ರಮಾಣ ಕನಿಷ್ಟ ಶೇ 40% ರಷ್ಟು ಸಹಾಯಧನ ನೀಡಬೇಕೆಂದು ಸಂಘದ ಮುಖಂಡರಾದ ದಿಲೀಪ್ ನಾಗೂರೆ, ರಾಯಪ್ಪಾ ಹುರುಮುಂಜಿ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here