ಕಮಲಾಪುರ: ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರು ಇಂದು ಕಮಲಾಪುರ ತಾಲೂಕಿನ ಓಕಳಿ ಮತ್ತು ಜೀವಣಗಿ ಗ್ರಾಮ ಪಂಚಾಯಿತಿಯಲ್ಲಿ JJM ಕಾಮಗಾರಿ ಮತ್ತು ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ಸಮಯದಲ್ಲಿ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉಮೇಶ ಮತ್ತು ತಾಲೂಕು ದಂಡಾಧಿಕಾರಿ ಮಹಮ್ಮದ ಮೊಹಸಿನ ಅಹ್ಮದ, ತಾಲೂಕ ಉದ್ಯೋಗ ಖಾತ್ರಿ ಪ್ರಭಾರಿ ಸಹಾಯಕ ನಿರ್ದೇಶಕರಾದ ಜಗನ್ನಾಥ ರೆಡ್ಡಿ ಮತ್ತು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಂತ್ರಿಕ ಸಹಾಯಕರು ಮುರುಗೇಂದ್ರ ಹಾಗೂ ತಾಲೂಕು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.