ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಚುನಾವಣೆಗೆ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸ್ಥಾನಕ್ಕೆ ನ್ಯಾಯವಾದಿ ವಿನೋದಕುಮಾರ ಜೇನವರಿ ಅವರು ಇಂದು ಬಳಿಗ್ಗೆ ೧೦.೪೫ಕ್ಕೆ ತಮ್ಮ ಉಮೇದುವಾರಿಕೆ ನಾಮ ಪತ್ರ ಸಲ್ಲಿಸಿದ್ದಾರೆ. ನ್ಯಾಯವಾದಿ ಶಿವರಾಜ ಅಂಡಗಿ ಅವರು ಸೂಚಕರಾಗಿದ್ದಾರೆ.
ಉಮೇಶ ಶೆಟ್ಟಿ, ಬಸವರಾಜ ಎನ್. ಪುಣ್ಯಶೆಟ್ಟಿ, ತರುಣಶೇಖರ ಬಿರಾದಾರ, ವಿಶ್ವನಾಥ ಸಿರಗಾಪೂರೆ, ನಾಗಭೂಷಣ ಹಿಂದೊಡಿ, ಲತಾ ಪುಣ್ಯಶೆಟ್ಟಿ, ಭಾಗ್ಯಶ್ರೀ ಶೆಟ್ಟಿ, ರೇಣುಕಾ ಬಿರಾದಾರ, ಪ್ರೀಯಾ ರಟಕಲ್, ಮಧು ಹಿಂದೊಡಿ, ಅನುಮೋದಕರಾಗಿದ್ದಾರೆ.
ಉಪಚುನಾವಣೆ ಅಧಿಕಾರಿಗಳಾದ ಶರಣಬಸಪ್ಪ ಕಾಡಾದಿ, ಸಹಾಯಕ ಚುನಾವಣಾಧಿಕಾರಿಗಳಾದ ರಾಚಪ್ಪಾ ಅಕ್ಕೋಣಿ, ನಾಗಣ್ಣಾ ಗಣಜಲಖೇಡ, ಬಸವರಾಜ ಅವಂಟಿ ಉಪಸ್ಥಿತರಿದ್ದರು.