ಕಲಬುರಗಿ: ಬಸವ ಸಮಿತಿಯಅನುಭವ ಮಂಟಪದಲ್ಲಿ ಲಿಂ.ಶಿವಶರಣಪ್ಪಗೌಡ ಗುರುಲಿಂಗಪ್ಪಗೌಡ ಪಾಟೀಲ (ಕಲ್ಲೂರು) ಸ್ಮರಣಾರ್ಥಅರಿವಿನ ಮನೆ 608 ನೇಯ ದತ್ತಿ ಕಾರ್ಯಕ್ರಮದಲ್ಲಿ ಶಹಬಾದ ಬಸವ ಸಮಿತಿಯ, ಬಸವ ಮಂಟಪ ಭಂಕೂರು ಇವರುಗಳ ವಚನ ಭಜನೆ ನೆರೆದಿದ್ದ ಬಸವಾಭಿಮಾನಿಗಳನ್ನು, ಕಲಾರಸಿಕರನ್ನು ಮನಸೂರೆಗೊಂಡಿತು.
ಉತ್ತರ ಕರ್ನಾಟಕದಲ್ಲಿರುವ ಅನೇಕ ಭಜನಾ ತಂಡಗಳಿಗಿಂತ ಶಹಾಬಾದ ಬಸವ ಸಮಿತಿಯ ವಚನ ಭಜನೆತೀರಾ ಭಿನ್ನ ಸ್ವರೂಪದ್ದಾಗಿದೆ.ವಚನಗಳು ಗಪದ್ಯಗಳು.ಅವುಗಳಿಗೆ ರಾಗ ಸಂಯೋಜಿಸಿ ಹಾಡುವುದೇಒಂದು ಸವಾಲಿನ ಕೆಲಸವೆಂದುಖ್ಯಾತ ಸಂಗೀತಕಲಾವಿದರು ಹೇಳುವುದುಂಟು.ಅಂತಹ ವಚನಗಳಿಗೆ ರಾಗಸಂಯೋಜಿಸಿ ಭಜನೆಯ ತಾಳಕ್ಕೆ ಅಳವಡಿಸುವುದು ತುಂಬಾಕಷ್ಟದ ಕೆಲಸ. ಶಹಾಬಾದ ಬಸವ ಸಮಿತಿಯ ೧೫ ಸದಸ್ಯರು ವಚನಗಳನ್ನು ತಮ್ಮದೇಆದ ಶೈಲಿಯಲ್ಲಿರಾಗಕ್ಕೆ ಸಂಯೋಜಿಸಿ ಭಜನೆ ಮಾಡಿಎಲ್ಲರ ಮನ ಮೆಚ್ಚಿಸಿದರು.
ಭೂಪಾಲಿ ರಾಗದಲ್ಲಿ ಬಸವಣ್ಣನವರ ವಚನ ಆರಂಭ ಮಾಡುವೆಗುರುಪೂಜೆಗೆಂದು.ಎನ್ನುವ ವಚನ ಭಜನೆಯ ಪ್ರಾರಂಭದಲ್ಲಿ ಹಾಡಿಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು.ಉಳ್ಳವರು ಶಿವವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಎನ್ನವ ವಚನ ಹಾಡಿದ ಭಜನಾ ಸಮಿತಿಯ ಸದಸ್ಯರು ಯಾವ ಕಲಾ ಕಾರನಿಗೂ ಕಡಿಮೆಯಲ್ಲವೆಂಬ ಮಾತನ್ನು ಎತ್ತಿತೋರಿಸು ವಂತಿತ್ತು. ಬಸವಣ್ಣನೇಗುರು ಪ್ರಭುದೇವರೆ ಲಿಂಗ ಎಂಬ ಅಕ್ಕನ ವಚನವನ್ನು ಭಾವಪೂರ್ಣವಾಗಿ ಭಜನೆ ಮಟ್ಟಿನಲ್ಲಿಯೂ ಹಾಡಿಜನರ ಮನವನ್ನುತಟ್ಟಿದುದು ನಿಜಕ್ಕೂ ಶ್ಲಾಘುನೀಯ ಸಂಗತಿಯೆನ್ನಬಹುದು. ರಾಜ್ಯದಲ್ಲಿ ಅನೇಕ ಕಡೆ ಶರಣರ ವಚನಗಳನ್ನು ಭಜನೆಯಲ್ಲಿ ಹಾಡಿದ್ದಲ್ಲದೆ ತಮಿಳು ನಾಡಿಗೂ ಹೋಗಿ ವಚನ ಭಜನೆ ಮಾಡುವುದರ ಮೂಲಕ ಶರಣರು ವಚನ ಸಂಸ್ಕೃತಿಯನ್ನು ಹೊರನಾಡಿಗೂ ಹಬ್ಬಿಸಿದ ಕೀರ್ತಿ ಶಹಾಬಾದ ಬಸವ ಸಮಿತಿಯ ಸದಸ್ಯರದ್ದಾಗಿದೆಎನ್ನಬಹುದು.
ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ ದತ್ತಿಯ ದಾಸೋಹಿಗಳಾದ ಶ್ರೀ ಮಲ್ಲಣ್ಣಗೌಡ ಪಾಟೀಲ ಕಲ್ಲೂರು.ಬಸವ ಸಮಿತಿಯ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಎಚ್.ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.