ಶರಣ ವೈಜಿನಾಥ ಬಿರಾದಾರ ಅವರಿಂದ ಪೂಜ್ಯರಿಗೆ ಅಭಿನಂದನಾ ಪತ್ರ

0
14

ಭಾಲ್ಕಿ; ಶ್ರೀಮಠದಲ್ಲಿ ದೆಹಲಿಯ ಶರಣ ವೈಜಿನಾಥ ಬಿರಾದಾರ ಅವರು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಅವರಿಗೆ ಸನ್ಮಾನಿಸಿ, ಅಭಿನಂದನಾ ಪತ್ರ ನೀಡಿದರು. ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪ್ರತಿಷ್ಠಿತ ನಾಡೋಜ ಪ್ರಶಸ್ತಿ ದೊರೆತ ಕಾರಣ ಬಿರಾದಾರ ಅವರು ಶ್ರೀಮಠಕ್ಕೆ ಆಗಮಿಸಿ ಅಭಿನಂದನಾ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾಲ್ಕಿಯ ಹಿರೇಮಠ ಕನ್ನಡ ನಾಡು-ನುಡಿ ಸೇವೆಗಾಗಿ ನಿರಂತರವಾಗಿ ದುಡಿಯುತ್ತಿದೆ. ಪೂಜ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ನಿಜಾಮನ ಕಾಲದಲ್ಲಿ ಕನ್ನಡ ಕಟ್ಟುವ ಕಾರ್ಯ ಮಾಡಿದರು. ಅವರ ಸೇವೆಯನ್ನು ಗಮನಿಸಿ, ದೆಹಲಿಯಲ್ಲಿ ಪೂಜ್ಯರನ್ನು ರಾಷ್ಟ್ರಪತಿ ಗ್ಯಾನಿ ಜೇಲ್‍ಸಿಂಗ್ ಅವರಿಂದ ಸನ್ಮಾನಿಸುವ ಸೌಭಾಗ್ಯ ನನಗೆ ದೊರೆತಿರುವುದು ನನ್ನ ಪುಣ್ಯವೆಂದು ಭಾವಿಸಿದೆ. ಮುಚಳಂಬ ಗ್ರಾಮದಲ್ಲಿ ಶ್ರೀ ಚನ್ನಬಸವ ಮಂಟಪ ಮಾಡುವ ನನ್ನ ಸಂಕಲ್ಪವಿದೆ. ಅದನ್ನು ಉಭಯ ಪೂಜ್ಯರ ಆಶೀರ್ವಾದ ಶಕ್ತಿಯಿಂದ ಪೂರ್ಣವಾಗುತ್ತದೆ ಎಂದು ನಾನು ನಂಬಿದ್ದೇನೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪೂಜ್ಯರು ವೈಜಿನಾಥ ಬಿರಾದಾರ ಅವರ ಬಸವತತ್ವ ನಿಷ್ಠೆ ಮತ್ತು ಈ ಭಾಗದ ಜನರನ್ನು ದೆಹಲಿಗೆ ಕರೆಯಿಸಿ ಅವರನ್ನು ಉದ್ಯೋಗ ನೀಡಿರುವ ಕಾರ್ಯಗಳ ಕುರಿತು ಮಾತನಾಡಿದರು.

ನೂರಾರು ಜನರಿಗೆ ಕಾಯಕ ನೀಡಿ ಅವರ ಬಾಳಿಗೆ ಬೆಳಕಾಗಿ ಬಿರಾದಾರ ಅವರು ಸೇವೆ ಸಲ್ಲಿಸಿದ್ದಾರೆ. ಗುರುಗಳ ಮೇಲೆ ಅಪಾರ ಭಕ್ತಿ ಮತ್ತು ಶ್ರದ್ಧೆ ಇಟ್ಟುಕೊಂಡಿರುವ ಅವರು ಪೂಜ್ಯರನ್ನು ದೆಹಲಿಗೆ ಕರೆಯಿಸಿ ಸನ್ಮಾನಿಸಿರುವುದು ಅಪೂರ್ವ ಸಂಗತಿಯಾಗಿದೆ ಎಂದು ನುಡಿದರು.

ಡಾ.ಸಂಜುಕುಮಾರ ಜುಮ್ಮಾ, ಶಿವಶರಣಪ್ಪ ವಲ್ಲೇಪೂರೆ, ಗಣಪತಿ ಬೋಚರೆ, ಸಂಸ್ಥೆಯ ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರತಾಪರೆಡ್ಡಿ, ಸಂಗಮೇಶ ಬಿರಾದಾರ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here