ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಲಿರುವ ಜಾತ್ರಾ ಮಹೋತ್ಸವ

0
40

ಶಹಾಬಾದ :ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಮದ ಭಾವೈಕ್ಯತೆಯ ಸಂಕೇತವಾಗಿರುವ ಮತ್ತು ಧಾರ್ಮಿಕ ಇತಿಹಾಸ ಹೊಂದಿರುವ ಸದ್ಗುರು ಶ್ರೀ ಮಲ್ಲಣಪ್ಪ ಮಹಾರಾಜರು, ಶ್ರೀ ಅಲ್ಲಮಪ್ರಭು ಹಾಗೂ ಶ್ರೀ ಸುಲ್ತಾನ ಅಹ್ಮದಶಾಹವಲಿಯವರ ಜಾತ್ರಾ ಮಹೋತ್ಸವವು ಎಪ್ರಿಲ್17 ರಿಂದ 20ರವರೆಗೆ ಶ್ರದ್ಧಾ ಭಕ್ತಿಯಿಂದ ಅತಿ ವಿಜೃಂಭಣೆಯಿಂದ ನಡೆಯಲಿದೆ ಎಂದು ತೊನಸನಹಳ್ಳಿಯ ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿಗಳಾದ ಧರ್ಮ ರತ್ನ ಪೂಜ್ಯಶ್ರೀ ಡಾ.ಮಲ್ಲಣಪ್ಪ ಮಹಾಸ್ವಾಮಿಗಳು ತಿಳಿದರು.

ಅವರು ಬುಧವಾರ ತೊನಸನಹಳ್ಳಿಯ ಅಲ್ಲಮಪ್ರಭು ಸಂಸ್ಥಾನ ಮಠದದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪೂಜ್ಯಶ್ರೀ ಡಾ. ಮಲ್ಲಣಪ್ಪ ಮಹಾಸ್ವಾಮಿಗಳು ಅವರ ನೇತೃತ್ವದಲ್ಲಿ ಎಪ್ರಿಲ್ 17ರಂದು ರಾತ್ರಿ 10:30 ಗಂಟೆಗೆ ಗಂಧೋತ್ಸವ ಕಾರ್ಯಕ್ರಮ ನಡೆಯುವುದು.

Contact Your\'s Advertisement; 9902492681

ಎಪ್ರಿಲ್18ರಂದು ಸಾಯಂಕಾಲ 6:30 ಗಂಟೆಗೆ ಭವ್ಯ ರಥೋತ್ಸವ ಜರುಗುವದು. ನಂತರ ಸಂಜೆ 7:30 ಗಂಟೆಗೆ ಧರ್ಮ ಸಭೆ ನಡೆಯುವದು. ಬ್ರಹ್ಮಾಂಡ ಗುರುಜಿಗಳಾದ ಶ್ರೀ ನರೇಂದ್ರ ಬಾಬು ಶರ್ಮಾ ಜೀ ಸಂಪೂರ್ಣ ವರ ಮಹಾಲಕ್ಷ್ಮಿ ಮಹಾ ಸಂಸ್ಥಾನಂ ಬೆಂಗಳೂರು ಇವರ ದಿವ್ಯ ಸಾನಿಧ್ಯ ವಹಿಸುವರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಐಟಿಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಸಣ್ಣ ಕೈಗಾರಿಕಾ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ, ಕೆಕೆಆರಡಿಬಿ ಅಧ್ಯಕ್ಷ ಡಾ. ಅಜಯಸಿಂಗ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಲೋಕ ಸಭಾ ಸದಸ್ಯರಾದ ಡಾ. ಉಮೇಶ ಜಾಧವ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಗಣ್ಯ ಮುಖಂಡರು, ವಿದ್ವಾಂಸರು, ಕವಿಗಳು ಮತ್ತು ಕಲಾವಿದರು ಭಾಗವಹಿಸುವವರು.

ಎಪ್ರಿಲ್ 19 ರಂದು ಕುಸ್ತಿ ಪಂದ್ಯಗಳು ಜರುಗಲಿವೆ.ಎಪ್ರಿಲ್ 20ರಂದು ದೇವರನ್ನು ಮಹಾಮನೆಗೆ ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ ಎಂದು ಪೂಜ್ಯರಾದ ಡಾ. ಮಲ್ಲಣಪ್ಪ ಮಹಾಸ್ವಾಮಿಗಳು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ನಿಂಗಣ್ಣಗೌಡ ಮಾಲಿಪಾಟೀಲ, ಉದ್ದಿದಾರ ಮಹಾದೇವ ಬಂದಳ್ಳಿ, ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ್, ಮಹಾಲಿಂಗ ಮದ್ದರಕಿ, ಶಿವಕುಮಾರ ತಳವಾರ, ಕಾಶಣ್ಣ ಚನ್ನೂರ, ಚಂದ್ರಶೇಖರ ಬೆಣ್ಣೂರ, ಅಲ್ಲಮಪ್ರಭು ಸೀಬಾ ಉಪಸ್ಥಿತರಿದ್ದರು.

ಜಾತ್ರಾ ಮಹೋತ್ಸವದಲ್ಲಿ ವಿಶೇಷವಾಗಿ ಕನ್ನಡತಿ ಮತ್ತು ಪುಟ್ಟಗೌರಿ ಟಿವಿ ಧಾರಾವಾಹಿ ಖ್ಯಾತ ನಟಿ ಹಾಗೂ ಚಿತ್ರ ನಟಿರಜನಿ ರಾಘವನ ಭಾಗವಹಿಸುವರು.ರಾತ್ರಿ 10 ಗಂಟೆಗೆ ಸಾನ್ವಿ ಮೆಲೋಡಿಸ್ ಆರ್ಕೇಸ್ಟ್ರಾ ತಂಡದ ವತಿಯಿಂದ ಹಾಸ್ಯ ಸಂಗೀತ ಮತ್ತು ಜುಗಲಬಂದಿ ಕಾರ್ಯಕ್ರಮ ನಡೆಯುವದು.ಈ ಸಭೆಯಲ್ಲಿ 12 ಜನ ಸಾಧಕರಿಗೆ ಕಾಯಕ ರತ್ನ ಪ್ರಶಸ್ತಿ ಪ್ರಧಾನದ ಜೊತೆಗೆ ವಿಶೇಷ ಸನ್ಮಾನ ಮಾಡಲಾಗುವುದು. –ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು ತೊನಸನಹಳ್ಳಿ(ಎಸ್)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here