ಕಲಬುರಗಿ: ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿ ಮಡಿಪಾಗಿಟ್ಟ ಮಹಾನ್ ವ್ಯಕ್ತಿ ವಿಠ್ಠಲ್ ಹೇರೂರು ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.
ಸಮಾಜಸೇವಕರು ಹಾಗೂ ವಿಧಾನಪರಿಷತ್ತಿನ ಮುಖ್ಯ ಸಚೇತಕರಾಗಿದ್ದ ವಿಠ್ಠಲ್ ಹೇರೂರು ಅವರ ಜನ್ಮ ಜಯಂತಿ ಪ್ರಯುಕ್ತ ಏಪ್ರಿಲ್ ಹತ್ತರಂದು ಬುಧವಾರ ಚೌಡಾಪುರದ ಅವರ ಪ್ರತಿಮೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಲಾರ್ಪಣೆಯ ನಂತರ ಮಾತನಾಡುತ್ತ ಶೋಷಿತ ದೀನದಲಿತರ ಧ್ವನಿಯಾಗಿ ಹಿಂದುಳಿದ ಸಮಾಜಕ್ಕೆ ಭರವಸೆಯ ಬದುಕು ನಿರ್ಮಾಣ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಹೇರೂರು ಅವರ ವ್ಯಕ್ತಿತ್ವ ಆದರ್ಶಪ್ರಾಯವಾದುದು ಸಮಾಜದಲ್ಲಿ ಪರಿವರ್ತನೆಯ ಹೊಸ ಬೆಳಕು ಮೂಡಬೇಕೆಂದು ಸವಾಲುಗಳನ್ನು ಎದುರಿಸಿ ಜಯಿಸಿದವರು.
ನಿಜಶರಣ ಅಂಬಿಗರ ಚೌಡಯ್ಯನವರು ಕಂಡ ಸಾಮಾಜಿಕ ಪರಿಕಲ್ಪನೆಯನ್ನು ಸಾಕಾರಗೊಳಿಸಲು ತನ್ನ ಬದುಕಿನ ಉದ್ದಕ್ಕೂ ಆ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ಮುನ್ನಡೆದವರು. ಅವರ ಸಮಾಜ ಸೇವೆಯು ನನ್ನ ಜೀವನದಲ್ಲಿ ಅತ್ಯಂತ ದೊಡ್ಡ ಪ್ರೇರಣೆ ನೀಡಿದೆ ಎಂದು ಜಾಧವ ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಕುಮಾರ್ ನಾಟಿಕಾರ್, ಭಗವಂತಪ್ಪ ಹೇರೂರು, ರಾಮ ಹೇರೂರ್, ಸಂತೋಷ್ ವಡಗೇರಿ, ಶಾಂತಪ್ಪ ಮದನಕರ್ ಸಿದ್ದು ಡಾಂಗೆ ದಿಗಂಬರ ಡಾಂಗೆ ಮಾಣಿಕ ಪಟೇಲ್ ,ಕಾಂತು ಮೌರ್ಯ, ಶ್ರೀಪಾದ್, ನಿಖಿಲ್ ನಂದನಹಳ್ಳಿ , ಅರ್ಚಿತ್ ನಿಂಬರ್ಗಿ, ಹನುಮಂತ ಹೇರೂರು, ವಿನಯ್ ಗುತ್ತೇದಾರ್, ಮಹಾದೇವ ಬೆಳಗುಪ್ಪ, ಅಪ್ಪು ನಾವೆರ್ ಅಲೋಕ್ ಪೂಜಾರಿ ಸಾಗರ್ ಮತ್ತು ಶ್ರೀಶೈಲ ಮತ್ತಿತರದ್ದರು.